More

    ಲಿಫ್ಟ್​ ಒಳಗಡೆ ಸಿಲುಕಿದ ಮಹಿಳೆ: ಎಷ್ಟೇ ಕೂಗಿದ್ರೂ ಯಾರಿಗೂ ಕೇಳಲಿಲ್ಲ, 3 ದಿನ ನರಳಿ ದುರಂತ ಸಾವು

    ತಾಷ್ಕೆಂಟ್​: ಸತತ ಮೂರು ದಿನಗಳ ಕಾಲ ಲಿಫ್ಟ್​ನಲ್ಲಿ ಸಿಲುಕಿ ಮಹಿಳೆಯೊಬ್ಬಳು ನರಳಿ ನರಳಿ ಕೊನೆಯುಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್​ನಲ್ಲಿ ನಡೆದಿದೆ.

    ಮೃತಳನ್ನು ಓಲ್ಗಾ ಲಿಯೊಂಟಿಯೆವಾ (32) ಎಂದು ಗುರುತಿಸಲಾಗಿದೆ. ಈಕೆ ಪೋಸ್ಟ್​ವುಮೆನ್​ ಆಗಿ ಕೆಲಸ ಮಾಡುತ್ತಿದ್ದಳು. ಮದುವೆ ಆಗಿದ್ದು, ಒಂದು ವರ್ಷದ ಮಗು ಸಹ ಇದೆ. ಎಂದಿನಂತೆ ತನ್ನ ಪೇಪರ್​ ರೌಂಡ್ಸ್​ ಕೆಲಸ ಮಾಡುವಾಗ ಲಿಫ್ಟ್​ನಲ್ಲಿ ಸಿಲುಕಿ ಮೃತಪಟ್ಟಿದ್ದಾಳೆ.

    ಜುಲೈ 24ರಂದು ಒಲ್ಗಾ, 9 ಅಂತಸ್ತಿನ ಕಟ್ಟಡದ ನೆಲಮಹಡಿಯಿಂದ ಲಿಫ್ಟ್​ ಒಳಗೆ ಪ್ರವೇಶಿಸಿದಳು. ಅಲ್ಲಿ ಅವಳು ಮೇಲಿನ ಮಹಡಿಗೆ ತಲುಪುತ್ತಿದ್ದಂತೆ ಲಿಫ್ಟ್​ ಸಿಲುಕಿಕೊಂಡಿದೆ. ಸಹಾಯಕ್ಕಾಗಿ ಸಾಕಷ್ಟು ಕಿರುಚಿಕೊಂಡರು ಸಹ ದುರದೃಷ್ಟವಶಾತ್, ಯಾರೂ ಅವಳ ಕಿರುಚಾಟವನ್ನು ಕೇಳಿಸಿಕೊಂಡಿಲ್ಲ. ಮೂರು ದಿನಗಳ ಬಳಿಕ ಒಲ್ಗಾ ಶವವಾಗಿ ಪತ್ತೆಯಾಗಿದ್ದಾಳೆ.

    ಕೆಲಸಕ್ಕೆ ಹೋದ ಓಲ್ಗಾ ಮತ್ತೆ ಹಿಂತಿರುಗಿ ಬಾರದ ಕಾರಣ ಅವರ ಕುಟುಂಬವು ಓಲ್ಗಾ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದರು. ಅದಕ್ಕೂ ಕುಟುಂಬವೂ ಕೂಡ ಸಾಕಷ್ಟು ಹುಡುಕಾಟದ ಪ್ರಯತ್ನವನ್ನು ಮಾಡಿದ್ದರು. ಕೊನೆಗೆ ಪೊಲೀಸರಿಗೆ ದೂರು ನೀಡಿದ ಮರುದಿನವೇ ಒಲ್ಗಾಳ ಮೃತದೇಹ ಪತ್ತೆಯಾಗಿದೆ. ದುರಂತ ಸಂಭವಿಸುವ ಮೊದಲು ಓಲ್ಗಾ ಲಿಫ್ಟ್‌ ಒಳಗೆ ಪ್ರವೇಶಿಸಿದ ಕ್ಷಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಇದನ್ನೂ ಓದಿ: ನೀವು ಆಗಾಗ ಗಂಟಲು ನೋವಿನಿಂದ ಬಳಲುತ್ತಿರಾ? ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ!

    ಈ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ದುರಂತ ಸಂಭವಿಸಿದ ಲಿಫ್ಟ್ ಅನ್ನು ಚೈನೀಸ್ ಕಂಪನಿ ತಯಾರಿಸಿದೆ. ಚೆನ್ನಾಗಿಯೇ ಕೆಲಸ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯ ದಿನದಂದು ಯಾವುದೇ ವಿದ್ಯುತ್ ಕಡಿತ ಇರಲಿಲ್ಲ ಎಂದು ಪ್ರಾದೇಶಿಕ ಎಲೆಕ್ಟ್ರಿಸಿಟಿ ನೆಟ್‌ವರ್ಕ್ಸ್ ಎಂಟರ್‌ಪ್ರೈಸ್ ದೃಢಪಡಿಸಿದೆ.

    ಈ ದುರದೃಷ್ಟಕರ ಘಟನೆಯು ಲಿಫ್ಟ್​ಗಳ ಸರಿಯಾದ ಕಾರ್ಯನಿರ್ವಹಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಲಿಫ್ಟ್ ಸಿಸ್ಟಮ್‌ಗಳನ್ನು ನಿರ್ವಹಿಸುವ ಮತ್ತು ನಿಯಮಿತವಾಗಿ ಪರಿಶೀಲಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಲಿಫ್ಟ್‌ಗಳಲ್ಲಿ ಎಚ್ಚರಿಕೆಯ ವ್ಯವಸ್ಥೆಗಳ ಕಾರ್ಯನಿರ್ವಹಣೆಯ ಅಗತ್ಯವನ್ನು ಒತ್ತಿಹೇಳುತ್ತವೆ.

    ಸಿಸಿಲಿಯ ಪಲೆರ್ಮೊದಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಫ್ರಾನ್ಸೆಸ್ಕಾ ಮರ್ಚಿಯೋನ್ ಎಂಬ ಮಹಿಳೆ ಕೂಡ ವಿದ್ಯುತ್ ಕಡಿತದ ನಂತರ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಳು. ಹೀಗಾಗಿ ಲಿಫ್ಟ್​ನಲ್ಲಿ ಪ್ರಯಾಣಿಸುವಾಗ ಎಚ್ಚರಿಕೆಯ ಜತೆಗೆ ಲಿಫ್ಟ್​ ವ್ಯವಸ್ಥೆಯ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆ ಇದೆ. (ಏಜೆನ್ಸೀಸ್​)

    ಅಂಜುಗೆ ಬಂಪರ್​ ಗಿಫ್ಟ್​ ಕೊಟ್ಟ ಪಾಕ್​ ಉದ್ಯಮಿ: ಉಡುಗೊರೆ ಹಿಂದಿರುವ ಅಸಲಿ ಕಾರಣವೇ ಬೇರೆ!

    ಲಂಡನ್‌ನಲ್ಲಿ ಆ. 6ರಂದು ನಡೆಯಲಿದೆ ಭಾರತೀಯ ನಾರಿಯರ ಸಾರೀ ವಾಕಥಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts