More

    ಪ್ರಿಯಕರನ ಮೇಲಿನ ಸಿಟ್ಟಿಗೆ ಆತನ ಬೈಕಿಗೇ ಕಿಚ್ಚಿಟ್ಟಳು; ಧಗಧಗನೆ ಹೊತ್ತಿ ಉರಿಯಿತು ಅವಳೇ ಕೊಟ್ಟಿದ್ದ ದುಬಾರಿ ಗಿಫ್ಟ್​!

    ನವದೆಹಲಿ: ‘ಒಲಿದರೆ ನಾರಿ, ಮುನಿದರೆ ಮಾರಿ’ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಇಲ್ಲೊಬ್ಬಳು ಅದೆಷ್ಟರಮಟ್ಟಿಗೆ ಮುನಿದುಕೊಂಡಿದ್ದಳೆಂದರೆ, ಅವಳೇ ಉಡುಗೊರೆಯಾಗಿ ಪ್ರಿಯಕರನಿಗೆ ಕೊಟ್ಟಿದ್ದ ದುಬಾರಿ ಬೈಕ್​ ಅವಳ ಕೋಪದ ತಾಪಕ್ಕೆ ಉರಿದುಹೋಗಿದೆ. ಬಾಯ್​ಫ್ರೆಂಡ್ ಮೇಲಿನ ಸಿಟ್ಟಿಗೆ ಅವಳು ಆ ಬೈಕಿಗೇ ಕಿಚ್ಚಿಟ್ಟು ಸುಟ್ಟು ಹಾಕಿದ್ದಾಳೆ.

    36 ವರ್ಷದ ಕನೊಕ್ ವಾನ್ ಎಂಬ ಈಕೆ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ತಮ್ಮ ಪ್ರೇಮದ ಉತ್ತುಂಗದ ಸಮಯದಲ್ಲಿ ಆತನಿಗೆ ಒಲವಿನ ಉಡುಗೊರೆಯಾಗಿ ದುಬಾರಿ ಬೆಲೆಯ ಟ್ರಯಂಫ್​ ಬೈಕ್​ ನೀಡಿದ್ದಳು. ಆಕೆ ಕೊಡಿಸಿರುವ ಈ ಬೈಕ್​ ಬೆಲೆಯೇ ಸುಮಾರು 23 ಲಕ್ಷ ರೂ. ಎನ್ನಲಾಗಿದೆ. ಹೀಗೆ ಇಷ್ಟೊಂದು ದುಬಾರಿ ಕೊಡುಗೆ ಕೊಡುವಷ್ಟು ತೀವ್ರವಾಗಿದ್ದ ಇವರ ಪ್ರೀತಿ ಒಂದು ದಿನ ಮುರಿದು ಬಿದ್ದಿತ್ತು.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಆದರೆ ಬ್ರೇಕಪ್ ಬಳಿಕವೂ ಆತನನ್ನೇ ಬಯಸಿದ ಈಕೆ ಮತ್ತೆ ಮೊದಲಿನಂತೆ ಜೊತೆಗಿರಲು ಕೋರಿಕೊಂಡರೂ ಆತ ಕ್ಯಾರೇ ಎಂದಿರಲಿಲ್ಲ. ಇದರಿಂದ ಸಿಟ್ಟಾದ ಈಕೆ ಪಾರ್ಕ್ ಮಾಡಲಾಗಿದ್ದ ಆ ದುಬಾರಿ ಬೈಕ್​ ಮೇಲೆ ತೈಲ ಸುರಿದು ಬೆಂಕಿ ಹಚ್ಚಿದ್ದಾಳೆ. ಪರಿಣಾಮವಾಗಿ ಲಕ್ಷಗಟ್ಟಲೆ ಮೌಲ್ಯದ ಬೈಕ್​ ಕಣ್ಮುಂದೆಯೇ ಧಗಧಗನೆ ಉರಿದುಹೋಗಿದೆ. ಜತೆಗೆ ಅಲ್ಲೇ ಪಾರ್ಕಿಂಗ್​ನಲ್ಲಿದ್ದ ಅಕ್ಕಪಕ್ಕದ ಬೈಕ್​ಗಳೂ ಬೆಂಕಿಗೆ ಆಹುತಿಯಾಗಿವೆ.

    ಇದನ್ನೂ ಓದಿ: ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…

    ಈಕೆಯ ಪ್ರಿಯಕರ ಆ ಬೈಕ್ ನಿಲ್ಲಿಸಲಾಗಿದ್ದ ಪಾರ್ಕಿಂಗ್ ಕಟ್ಟಡಕ್ಕೆ ತಾಕಿಕೊಂಡಂತಿರುವ ಶಾಲೆಯಲ್ಲಿ ಉದ್ಯೋಗಿಯಾಗಿದ್ದಾನೆ. ಆ ಪಾರ್ಕಿಂಗ್ ಕಟ್ಟಡದ ಐದನೇ ಮಹಡಿಯಲ್ಲಿದ್ದ ಬೈಕ್​ಗೆ ಬೆಂಕಿ ಇಟ್ಟಿದ್ದರೂ ಅದೃಷ್ಟವಶಾತ್ ಹತ್ತಿರದಲ್ಲೇ ಇರುವ ಶಾಲಾ ಕಟ್ಟಡಕ್ಕೆ ಅದು ವ್ಯಾಪಿಸುವ ಮೊದಲೇ ಆರಿಸಲ್ಪಟ್ಟಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಸಿಸಿಟಿವಿ ಕ್ಲಿಪ್ಪಿಂಗ್ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಆಕೆಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಥಾಯ್ಲೆಂಡ್​ನಲ್ಲಿ. (ಏಜೆನ್ಸೀಸ್)

    ಕೆಥೊಲಿಕ್ ಪಾದ್ರಿಗಳ ಸೆಕ್ಸ್​ ಸ್ಕ್ಯಾಂಡಲ್​: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

    43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!

    ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts