More

  ಮಹಿಳೆಯರ ಸ್ವಯಂ ಉದ್ಯೋಗಕ್ಕೆ ತರಬೇತಿ

  ಅಳವಂಡಿ: ರಿವಾರ್ಡ್ ಯೋಜನೆ ಜಾರಿಯಿಂದ ನೆಲ-ಜಲ ಸಂರಕ್ಷಣೆ ಜತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಬೇಕೆಂದು ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ ಕುಷ್ಟಗಿ ತಿಳಿಸಿದರು.

  ಇದನ್ನೂ ಓದಿ: ತಂಬಾಕು ನಿಯಂತ್ರಣ ಕೊಟ್ಪಾ ಕಾಯ್ದೆ 2003 ಕುರಿತು ತರಬೇತಿ ಕಾರ್ಯಾಗಾರ

  ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಸಾಸ್ವಿಹಳ್ಳಿ ಸ್ವರ್ಡ.ಕೆ. ಸಂಸ್ಥೆ, ವಿಶ್ವ ಬ್ಯಾಂಕ ಸಹಯೋಗದಲ್ಲಿ ರಿವಾರ್ಡ್ ಯೋಜನೆಯಡಿ ನಡೆದ ಜಾನುವಾರು ಆರೋಗ್ಯ ಶಿಬಿರದಲ್ಲಿ ಶನಿವಾರ ಮಾತನಾಡಿದರು.

  ಅನುಪಯುಕ್ತ ಜಮೀನನ್ನು ಸಾಗುವಳಿಗೆ ಯೋಗ್ಯ ಭೂಮಿಯನ್ನಾಗಿ ಮಾಡಿ, ಉತ್ಪಾದಕ ಸಂಸ್ಥೆಗಳ ಮೂಲಕ ರೈತರ ಬೆಳೆಗೆ ಮಾರುಕಟ್ಟೆ ಅವಕಾಶ ಹೆಚ್ಚಿಸುವುದು, ಮಹಿಳೆಯರಿಗೆ ವಿವಿಧ ಕೌಶಲ್ಯಾಧಾರಿತ ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗಸ್ಥರನ್ನಾಗಿಸುವುದು. ಭೂರಹಿತರಿಗೆ ಜೀವನೋಪಾಯ ಚಟುವಟಿಕೆಗಳ ತರಬೇತಿ ನೀಡುವುದು ಒಟ್ಟಾರೆಯಾಗಿ ರೈತರ ಆದಾಯ ಹೆಚ್ಚಳ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.

  ಗ್ರಾಪಂ ಅಧ್ಯಕ್ಷೆ ಪರವಿನಬಾನು ಆಲೂರ, ಕೃಷಿ ಅಧಿಕಾರಿಗಳಾದ ಪ್ರತಾಪಗೌಡ ನಂದನಗೌಡ, ಬಿ.ಎಂ.ಗೊಬ್ಬರಗುಂಪಿ, ಎಎಓ ಮಾರುತಿ, ವೀರೇಶ ಪಟ್ಟೇದ, ಪಶು ವೈದ್ಯಾಧಿಕಾರಿ ವಿನೋದ, ಪ್ರಮುಖರಾದ ವಿಷ್ಣು ಹಾಳಕೇರಿ, ಜಂಗ್ಲಿಸಾಬ ಒಂಟಿ, ಹೊನ್ನಪ್ಪಗೌಡ, ಗುಡದಪ್ಪ, ಗುಡೂಸಾಬ, ರಂಜಾನಸಾಬ, ಗುಡದಪ್ಪ.ಕೆ, ಗುಡದನಗೌಡ, ಶಿವನಗೌಡ, ಬಸನಗೌಡ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts