More

    (ಆ)ರಕ್ಷಕರೇ ಭಕ್ಷಕರಾದಾಗ: ಮಾವ ರೇಪ್ ಮಾಡಿದ, ಗಂಡ ತಲಾಖ್​ ನೀಡಿದ!

    ಮೀರತ್​ : ಉತ್ತರಪ್ರದೇಶದ ಮೀರತ್​ನಲ್ಲಿ ಕೆಲಸ ಮಾಡುವ ಮಹಿಳಾ ಪೊಲೀಸ್​ ಪೇದೆಯೊಬ್ಬರು ಪೊಲೀಸ್​ ಅಧಿಕಾರಿಯಾದ ಮಾವನಿಂದ ರೇಪ್​ಗೊಳಗಾಗಿರುವುದು ಬೆಳಕಿಗೆ ಬಂದಿದೆ. ಇಷ್ಟು ಸಾಲದೆಂಬಂತೆ, ಈ ಸಂಗತಿ ತಿಳಿದ ಆಕೆಯ ಪೊಲೀಸ್​ ಗಂಡ, ಕಾನೂನುಬಾಹಿರವಾದ ಟ್ರಿಪಲ್ ತಲಾಖ್​ ಹೇಳಿ ಆಕೆಗೆ ವಿಚ್ಛೇದನ ನೀಡಿದ್ದಾನೆ ಎನ್ನಲಾಗಿದೆ!

    ಕಳೆದ ಬುಧವಾರ ರಾತ್ರಿ ಸಂತ್ರಸ್ತ ಮಹಿಳಾ ಪೇದೆಯು ಮನೆಯಲ್ಲಿ ಒಬ್ಬಳೇ ಇದ್ದಾಗ ಪ್ರಾವಿಂಷಿಯಲ್ ಆರ್ಮ್ಸ್​ ಕಾನ್ಸಟಬುಲರಿಯ ಅಧಿಕಾರಿ ಮಾವ ನಜೀರ್​ ಅಹಮದ್​ ಬಂದು ಅತ್ಯಾಚಾರ ಎಸಗಿದ. ಈ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಸಾಯಿಸಿಬಿಡುವುದಾಗಿ ಬೆದರಿಕೆ ಹಾಕಿದ ಎನ್ನಲಾಗಿದೆ.

    ಇದನ್ನೂ ಓದಿ: ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

    ತನ್ನ ಮೇಲೆ ನಡೆದ ಅತ್ಯಾಚಾರದ ವಿಷಯವನ್ನು ಪೊಲೀಸ್​ ಅಧಿಕಾರಿಯಾದ ತನ್ನ ಪತಿ ಅಬೀದ್​ಗೆ ಆಕೆ ಹೇಳಿಕೊಂಡಿದ್ದಾಳೆ. ಆದರೆ, ಅವಳಿಗೆ ಸಹಾಯ ಮಾಡುವ ಬದಲು, ಆತ ತಕ್ಷಣ ನಿಷೇಧಿತ ಟ್ರಿಪಲ್​ ತಲಾಖ್​ ಪದ್ಧತಿಯ ಮೂಲಕ ವಿಚ್ಛೇದನ ನೀಡಿದ್ದಾನೆ ಎನ್ನಲಾಗಿದೆ.

    ಈ ಬಗ್ಗೆ ಸಂತ್ರಸ್ತ ಪೇದೆಯು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ಮೂರು ವರ್ಷ ಮುಂಚೆ ಮದುವೆಯಾದಾಗಿನಿಂದ ತನ್ನ ಅತ್ತೆಮಾವ ವರದಕ್ಷಿಣೆಗಾಗಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಕೂಡ ಹೇಳಿಕೊಂಡಿದ್ದಾಳೆ. ಘಾಜಿಯಾಬಾದ್​ನಲ್ಲಿ ನಿಯುಕ್ತಿ ಹೊಂದಿರುವ ಮುಖ್ಯ ಆರೋಪಿ ನಜೀರ್​ ಅಹ್ಮದ್​ ಮತ್ತು ಮೀರತ್​ನ ಪೊಲೀಸ್​ ಲೈನ್ಸ್​ನಲ್ಲಿ ಕೆಲಸ ಮಾಡುವ ಆತನ ಮಗ ಅಬೀದ್​ ವಿರುದ್ಧ ಕೊತ್ವಾಲಿ ಠಾಣೆ​ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ಮೀರತ್​ ನಗರ ಎಸ್ಪಿ ವಿನೀತ್​ ಭಟ್ನಾಗರ್​ ತಿಳಿಸಿದ್ದಾರೆ. (ಏಜೆನ್ಸೀಸ್)

    ಲಕ್ಕಿ ಡ್ರಾನಲ್ಲಿ 16 ಕೋಟಿ ರೂ. ಔಷಧ ಪಡೆದ ಹೆಣ್ಣುಮಗು! ಬಡ ಪಾಲಕರ ಪ್ರಾರ್ಥನೆಗೆ ಒಲಿಯಿತು ಅದೃಷ್ಟ!

    ಚಲಿಸುತ್ತಿದ್ದ ವಿಮಾನದಿಂದ ಹಾರಿದ ಪ್ರಯಾಣಿಕ! ಬೆಚ್ಚಿಬೀಳಿಸಿದ ವಿಚಿತ್ರ ವರ್ತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts