ಚಲಿಸುತ್ತಿದ್ದ ವಿಮಾನದಿಂದ ಹಾರಿದ ಪ್ರಯಾಣಿಕ! ಬೆಚ್ಚಿಬೀಳಿಸಿದ ವಿಚಿತ್ರ ವರ್ತನೆ

ಲಾಸ್​ ಏಂಜಲೀಸ್ : ಪ್ರಯಾಣಿಕನೊಬ್ಬ ಚಲಿಸುತ್ತಿರುವ ವಿಮಾನದಿಂದ ಕೆಳಗೆ ಹಾರಿರುವ ವಿಚಿತ್ರ ಘಟನೆಯೊಂದು ಅಮೆರಿಕದ ಲಾಸ್​ ಏಂಜಲೀಸ್​ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಾಲ್ಟ್​ ಲೇಕ್ ಸಿಟಿಗೆ ಹೊರಟಿದ್ದ ಸ್ಕೈವೆಸ್ಟ್​ ಕಂಪೆನಿಯ ಯುನೈಟೆಡ್ ಎಕ್ಸ್​​ಪ್ರೆಸ್​ ವಿಮಾನವು ರಾತ್ರಿ 7 ಗಂಟೆಗೆ ಟೇಕ್​ ಆಫ್​ಗೆ ಸಿದ್ಧವಾದಂತೆ ಯಾತ್ರಿಯೊಬ್ಬ ವಿಮಾನದಿಂದ ಹೊರಹೋಗಲು ಈ ರೀತಿ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ. ಮೊದಲಿಗೆ ಕಾಕ್​​ಪಿಟ್​ನೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಈ ಯಾತ್ರಿಯು ನಂತರ ಸರ್ವೀಸ್​​ ಡೋರನ್ನು ತೆಗೆಯಲು ಸಫಲನಾಗಿ, ಎಮರ್ಜೆನ್ಸಿ ಸ್ಲೈಡ್​​ನ ಮೂಲಕ ಟರ್ಮಾಕ್​ಗೆ ಹಾರಿದ. … Continue reading ಚಲಿಸುತ್ತಿದ್ದ ವಿಮಾನದಿಂದ ಹಾರಿದ ಪ್ರಯಾಣಿಕ! ಬೆಚ್ಚಿಬೀಳಿಸಿದ ವಿಚಿತ್ರ ವರ್ತನೆ