More

    ನಕ್ಸಲ್ ನಾಯಕಿ ಸೆರೆ: ಕೊಯಮತ್ತೂರಿನ ಆನೈಕಟ್ಟೆ ಬಳಿ ನಕ್ಸಲ್ ನಿಗ್ರಹಪಡೆ ಕಾರ್ಯಾಚರಣೆ

    ಗುಂಡ್ಲುಪೇಟೆ: ನೆರೆಯ ತಮಿಳುನಾಡಿನಲ್ಲಿ ನಕ್ಸಲ್ ನಿಗ್ರಹಪಡೆ ಪೊಲೀಸರು ಕರ್ನಾಟಕ ಮೂಲದ ನಕ್ಸಲ್ ನಾಯಕಿ ಶ್ರೀಮತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೊಯಮತ್ತೂರು ಸಮೀಪದ ಆನೈಕಟ್ಟೆ ಬಳಿ ಬೆಟ್ಟವೊಂದರಲ್ಲಿ ಅಡಗಿದ್ದ ಖಚಿತ ಮಾಹಿತಿ ಮೇರೆಗೆ ನಕ್ಸಲ್ ನಿಗ್ರಹಪಡೆ ಪೊಲೀಸರು ದಾಳಿ ನಡೆಸಿ ಶ್ರೀಮತಿಯನ್ನು ಬಂಧಿಸಿದರು. ಈಕೆ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಕಳೆದ ಅಕ್ಟೋಬರ್​ನಲ್ಲಿ ಕೇರಳದ ನಕ್ಸಲ್ ನಿಗ್ರಹ ದಳದ ಕಮಾಂಡೋಗಳು ಪಾಲಕ್ಕಾಡ ಸಮೀಪ ಥಂಡರ್ ಬೋಲ್ಟ್ ಕೂಂಬಿಂಗ್ ನಡೆಸುವಾಗ ತಮಿಳುನಾಡಿನ ಮಣಿವಸಗಂ, ಕಾರ್ತಿಕ್, ಅರವಿಂದ, ರೇಣು ಎಂಬುವರನ್ನು ಹತ್ಯೆ ಮಾಡಿದ್ದರು. ಈ ವೇಳೆ ಅಲ್ಲೇ ಇದ್ದ ಶ್ರೀಮತಿ ಪರಾರಿಯಾಗಿದ್ದಳು.ಈಕೆ ವಿರುದ್ಧ ಶೃಂಗೇರಿ, ಹೆಬ್ರಿ, ಆಗುಂಬೆ, ಕಾರ್ಕಳ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣ ದಾಖಲಾಗಿವೆ.

    ಜನವರಿ 15ರಂದು ಕೇರಳದ ವೈನಾಡಿನ ಮೇಪಾಡಿ ಠಾಣಾ ವ್ಯಾಪ್ತಿಯಲ್ಲಿರುವ ಅಟ್ಟುಮಾಳ ಜೀನ್ಸ್ ರೆಸಾರ್ಟ್ ಆದಿವಾಸಿ ಯುವಕರನ್ನು ಶೋಷಣೆ ಮಾಡುತ್ತಿದೆ ಎಂಬ ಕಾರಣದಿಂದ ನಾಲ್ವರು ನಕ್ಸಲರು ದಾಳಿ ನಡೆಸಿ ಕಿಟಕಿಯ ಗಾಜು ಪುಡಿಗಟ್ಟಿದ್ದರು. ಈ ಎಲ್ಲ ಪ್ರಕರಣಗಳಲ್ಲಿ ಶ್ರೀಮತಿ ಇದ್ದಳು ಎಂದು ಮೂಲಗಳು ಖಚಿತಪಡಿಸಿವೆ.

    ಲವ್​ ಜಿಹಾದ್​?!: ನೋಟ್ಸ್​ ನೆಪದಲ್ಲಿ ಸಹಪಾಠಿಯನ್ನೇ ಕಿಡ್ನಾಪ್​ ಮಾಡಿ ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ಯುವಕ

    ರಾಜ್ಯದಲ್ಲಿ ಶಂಕಿತ ಕರೊನಾ ವೈರಸ್​ಗೆ ಮೊದಲ ಬಲಿ: ಕಲಬುರಗಿಯಲ್ಲಿ 75 ವರ್ಷದ ವೃದ್ಧ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts