More

    ಹುಟ್ಟಿದ ದಿನವೇ ಆತ್ಮಹತ್ಯೆ ಮಾಡಿಕೊಂಡ ಯುವತಿ; ಅದಕ್ಕೂ ಮೊದಲು ನಡೆದಿತ್ತು ಅಕ್ಕನೊಂದಿಗೆ ಜಗಳ

    ನೋಯ್ಡಾ: ಕೆಲವರಂತೂ ತೀರ ಸಣ್ಣಸಣ್ಣ ವಿಚಾರಕ್ಕೆಲ್ಲ ಜೀವ ಕಳೆದುಕೊಳ್ಳುತ್ತಾರೆ. ಹಾಗೆ ಇಲ್ಲೊಬ್ಬಳು 23 ವರ್ಷದ ಯುವತಿ ಕೂಡ ತನ್ನ ಹುಟ್ಟಿದ ಹಬ್ಬದ ದಿನವೇ, ಸಣ್ಣ ವಿಷಯಕ್ಕೆ ಜಗಳವಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಉತ್ತರ ಪ್ರದೇಶದ ನೊಯ್ಡಾದ ಸೆಕ್ಟರ್​ 134ರ ಮನೆಯೊಂದರಲ್ಲಿ ಈ ಯುವತಿ ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದಳು. ಅದೇ ಕಾಂಪ್ಲೆಕ್ಸ್​​ನಲ್ಲಿಯೇ ಅವಳ ಅಕ್ಕನ ಮನೆಯೂ ಇತ್ತು. ಮಂಗಳವಾರ ಯುವತಿಯ ಜನ್ಮದಿನವಾಗಿತ್ತು. ತನ್ನ ಅಕ್ಕನ ಮನೆಯಲ್ಲಿಯೇ ಹುಟ್ಟಿದ ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಳು. ಕುಟುಂಬದವರೆಲ್ಲ ಅಲ್ಲಿಯೇ ಸೇರಿದ್ದರು. ಇದನ್ನೂ ಓದಿ: ಕರೊನಾ ಲಸಿಕೆ ಅಭಿವೃದ್ಧಿ: ವಿಶ್ವ ಆರೋಗ್ಯ ಸಂಸ್ಥೆಯ ಪರ ತಾನಿಲ್ಲ ಎಂದ ಅಮೆರಿಕ!

    ಆದರೆ ಕೇಕ್ ಕತ್ತರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರು ಸೋದರಿಯರ ನಡುವೆ ಜಗಳ ಶುರುವಾಗಿದೆ. ಇದು ತಾರಕಕ್ಕೇರಿ, ತಂಗಿ ಸೀದಾ ಹೋಗಿ 10ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಆದರೆ ಕೇಕ್​ಗೆ ಸಂಬಂಧಪಟ್ಟಂತೆ ಏನು ಜಗಳ ಮಾಡಿಕೊಂಡಿದ್ದಾರೆ ಎಂಬುದಿನ್ನೂ ಗೊತ್ತಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ರಾಜ್ಯಕ್ಕೆ ಎಲ್ಲಿಂದ ಬರುತ್ತೆ ಡ್ರಗ್ಸ್? ಈ ಬಗ್ಗೆ ಪೊಲೀಸ್​ ಮಹಾನಿರ್ದೇಶಕರಿಂದ ಸ್ಫೋಟಕ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts