More

    VIDEO| ಮನೆಯಲ್ಲಿ ಪತ್ತೆಯಾದ 2 ತಲೆಯ ಹಾವಿಗೆ ಮಹಿಳೆ ಇಟ್ಟ ಹೆಸರು ಭಾರಿ ವೈರಲ್​!

    ನ್ಯೂಯಾರ್ಕ್​: ಅಮೆರಿಕದ ನಾರ್ಥ್​ ಕರೊಲಿನಾ ರಾಜ್ಯದ ಮಹಿಳೆಯೊಬ್ಬಳು ತಮ್ಮ ನಿವಾಸದಲ್ಲಿ ಅತಿ ಅಪರೂಪದ ಎರಡು ತಲೆಯ ಹಾವನ್ನು ನೋಡಿ ಅಚ್ಚರಿಪಟ್ಟಿಲ್ಲದೆ, ಹಾವಿಗೆ ವಿಭಿನ್ನವಾದ ಹೆಸರು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

    ನಾರ್ಥ್​ ಕರೊಲಿನಾದ ಅಲೆಕ್ಸಾಂಡರ್​ ಕೌಂಟಿಯಲ್ಲಿರುವ ತಮ್ಮ ನಿವಾಸದಲ್ಲಿ ಹರಿದಾಡುತ್ತಿದ್ದ ಎರಡು ತಲೆಯ ಹಾವನ್ನು ಜೀನಿ ವಿಲ್ಸನ್ ಎಂಬ ಮಹಿಳೆ ಪತ್ತೆಹಚ್ಚಿದರು.

    ಇದನ್ನೂ ಓದಿ: ಅಜ್ಜಿಯ ಬದುಕನ್ನೇ ಬದಲಿಸಿತು ಭಾರಿ ಗಾತ್ರದ ಸತ್ತ ಮೀನು: ತಿನ್ನಲು ಯೋಗ್ಯವಲ್ಲದ ಮೀನಿನ ಚಮತ್ಕಾರವಿದು!

    ಈ ಬಗ್ಗೆ ಮಾತನಾಡಿರುವ ಜೀನಿ ವಿಲ್ಸನ್ ಸುಮಾರು ಒಂದು ಅಡಿ ಉದ್ದದ ಹಾವನ್ನ ನೋಡಿ ತಕ್ಷಣ ಹತ್ತಿರದಲ್ಲೇ ಇದ್ದ ಅಳಿಯನನ್ನು ಕರೆದೆ. ಹಾವನ್ನು ಕೊಲ್ಲುವುದು ನಮಗೆ ಇಷ್ಟವಿಲ್ಲ. ಹೀಗಾಗಿ ಅದನ್ನು ಒಂದು ಸಣ್ಣ ಡಬ್ಬಿಯಲ್ಲಿ ಹಾಕಿಕೊಂಡು ಕ್ಯಾಟವ್ಬಾ ವಿಜ್ಞಾನ ಕೇಂದ್ರಕ್ಕೆ ಒಪ್ಪಿಸಲಾಯಿತು ಎಂದು ಜೀನಿ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಹಾವಿಗೆ “ಡಬಲ್​ ಟ್ರಬಲ್​” ಎಂದು ಹೆಸರಿಸಿದ್ದು, ಸದ್ಯ ವಿಡಿಯೋ ಭಾರಿ ವೈರಲ್​ ಆಗಿದೆ.

    ಇನ್ನು ಪತ್ತೆಯಾದ ಹಾವು ಬ್ಲ್ಯಾಕ್​ ರ‍್ಯಾಟ್​ ಸ್ನೇಕ್​ ಎಂದು ಕ್ಯಾಟವ್ಬಾ ವಿಜ್ಞಾನ ಕೇಂದ್ರ ಗುರುತಿಸಿತು. ಸುಮಾರು 4 ತಿಂಗಳ ಮರಿಯಾಗಿದ್ದು, ವಿಷಕಾರಿಯೇನಲ್ಲ. ಹಾವುಗಳಲ್ಲಿ ಎರಡು ತಲೆ ಇರುವುದು ತುಂಬಾ ಅಪರೂಪ. ಸುಮಾರು 100,000 ಹಾವುಗಳಲ್ಲಿ ಒಂದರಲ್ಲಿ ಮಾತ್ರ ಎರಡು ತಲೆ ಕಂಡುಬರುತ್ತದೆ ಎಂದು ವಿಜ್ಞಾನ ಕೇಂದ್ರ ಮಾಹಿತಿ ನೀಡಿದೆ. (ಏಜೆನ್ಸೀಸ್​)

    Ok facebook…anybody out there know of a place that would take Double Trouble here and care for him/her or should I turn it loose?..Its not poisonous

    Posted by Jeannie Wilson on Sunday, September 27, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts