More

    ಹೆಣ್ಣಾಗಿ ಮದುವೆಯಾದಳು… ಕ್ಯಾನ್ಸರ್​ಗೆ ತುತ್ತಾಗಿ ಗಂಡಾದಳು…!

    ಕೋಲ್ಕತ: ಆಕೆ ಕಳೆದ 30 ವರ್ಷಗಳಿಂದ ಹೆಣ್ಣುಮಗಳಾಗಿ ಎಲ್ಲ ಹೆಣ್ಣುಮಕ್ಕಳಂತೆ ಜೀವನ ಸಾಗಿಸುತ್ತಿದ್ದಳು. ಹತ್ತು ವರ್ಷಗಳ ಹಿಂದೆ ಮದುವೆಯನ್ನೂ ಆಗಿದ್ದಳು. ಆದರೆ, ಇತ್ತೀಚೆಗೆ ಕೆಳಕಿಬ್ಬೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದರಿಂದ ಆಕೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಳು.

    ಆದರೆ, ಅನುಮಾನಗೊಂಡ ವೈದ್ಯರು ಕ್ಯಾನ್ಸರ್​ ತಜ್ಞರ ಬಳಿ ವೈದ್ಯಕೀಯ ಸಲಹೆ ಪಡೆದುಕೊಳ್ಳುವಂತೆ ಕಳುಹಿಸಿದ್ದರು. ಈಕೆಯನ್ನು ಪರಿಪೂರ್ಣ ಪರೀಕ್ಷೆ ಒಳಪಡಿಸಿದ ಕ್ಯಾನ್ಸರ್​ ತಜ್ಞರು ಈಕೆ ಮಹಿಳೆಯ ರೂಪದಲ್ಲಿರುವ ಪುರುಷ ಎಂಬುದನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ ಈಕೆ ಟೆಸ್ಟಿಕ್ಯುಲರ್​ ಕ್ಯಾನ್ಸರ್​ನಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ.

    ಸದ್ಯ ಈಕೆಯನ್ನು ಕೀಮೋಥೆರಪಿಗೆ ಒಳಪಡಿಸಲಾಗಿದೆ. ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಕ್ಕ ಪುರುಷ ಎಂಬುದು ಗೊತ್ತಾದ ನಂತರದಲ್ಲಿ ತಂಗಿ ಕೂಡ ಪರೀಕ್ಷೆಗೆ ಒಳಪಟ್ಟಾಗ ಆಕೆಯಲ್ಲೂ ಇದೇ ಸಮಸ್ಯೆ ಪತ್ತೆಯಾಗಿದ್ದಾಗಿ ಹೇಳಲಾಗಿದೆ!
    ಕೋಲ್ಕತದ ಬರ್ಬುಮ್​ ಪ್ರದೇಶದ ನಿವಾಸಿ ಈ ಮಹಿಳೆಗೆ ಕಳೆದ 30 ವರ್ಷಗಳಿಂದಲೂ ಮುಟ್ಟಾಗಿರಲಿಲ್ಲವಂತೆ! ಆದರೂ ಆಕೆ ಮತ್ತು ಆಕೆಯ ಪತಿ ಮಕ್ಕಳನ್ನು ಹೊಂದಲು ಪ್ರಯತ್ನಿಸಿ ವಿಫಲರಾಗಿದ್ದಂತೆ!

    ಇದನ್ನೂ ಓದಿ: ನಾನು ಇಂದಿರಾ ಗಾಂಧಿ ಮೊಮ್ಮಗಳು, ಅದೇನು ಮಾಡ್ಕೋತೀರೋ ಮಾಡ್ಕೊಳಿ…

    ಈಕೆಯ ಮತ್ತು ಈಕೆಯ ಸಹೋದರಿಯ ಸ್ಥಿತಿ ಬಗ್ಗೆ ವಿವರಿಸಿರುವ ಕೋಲ್ಕತದ ನೇತಾಜಿ ಸುಭಾಷ್​ ಚಂದ್ರ ಬೋಸ್​ ಕ್ಯಾನ್ಸರ್​ ಆಸ್ಪತ್ರೆಯ ಕ್ಯಾನ್ಸರ್​ ತಜ್ಞ ಡಾ. ಅನುಪಮಾ ದತ್​ ಮತ್ತು ಡಾ. ಸೌಮೇನ್​ ದಾಸ್​, ಇವರಿಬ್ಬರೂ ಹುಟ್ಟಿನಿಂದಲೂ ಹೆಣ್ಣು. ಹೆಣ್ಣುಮಕ್ಕಳಂತೆಯೇ ಇವರ ಅಂಗಾಂಗಗಳೆಲ್ಲವೂ ಬೆಳೆದಿವೆ. ಆದರೆ, ಜನ್ಮತಃ ಇವರಲ್ಲಿ ಗರ್ಭಾಶಯ ಮತ್ತು ಅಂಡಾಶಯಳು ಇಲ್ಲ. ಬದಲಿಗೆ ವೃಷಣಗಳಿವೆ. ಹಾಗಾಗಿ ಇವರು ಯಾವುದೇ ಹಂತದಲ್ಲೂ ಮುಟ್ಟಾಗಿರಲಿಲ್ಲ ಎಂದು ಹೇಳಿದ್ದಾರೆ.

    ವೃಷಣಗಳು ಸಂಪೂರ್ಣವಾಗಿ ಬೆಳೆದಿರಲಿಲ್ಲ. ಹಾಗಾಗಿ ಇವರಿಬ್ಬರಲ್ಲಿ ಟೆಸ್ಟೋಸ್ಟಿರೋನ್​ ಹಾರ್ಮೋನ್​ಗಳ ಸ್ರವಿಸುತ್ತಿರಲಿಲ್ಲ. ಆದರೆ, ಇವರ ದೇಹದಲ್ಲಿದ್ದ ಹೆಣ್ಣಿನ ವರ್ಣತಂತುಗಳು ಇವರಿಗೆ ಪರಿಪೂರ್ಣ ಹೆಂಗಸಿನ ರೂಪವನ್ನು ಒದಗಿಸಿದ್ದವು ಎಂದು ತಿಳಿಸಿದ್ದಾರೆ.
    ವೈದ್ಯಕೀಯ ಭಾಷೆಯಲ್ಲಿ ಇದನ್ನು Androgen Insensitivity Syndrome ಎಂದು ಕರೆಯುತ್ತೇವೆ. 22 ಸಾವಿರ ಜನರಲ್ಲಿ ಒಬ್ಬರಿಗೆ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವಿವರಿಸಿದ್ದಾರೆ.

    ಈಕೆಯನ್ನು ಪರೀಕ್ಷಿಸಿದಾಗ ಇದ್ದರೂ ಇಲ್ಲದಂಥ ಹೆಣ್ಣಿನ ಜನನಾಂಗ (Blind Vagina) ಇರುವುದು ಸ್ಪಷ್ಟವಾಯಿತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಕಾರ್ಯೋಟೈಪಿಂಗ್​ ಪರೀಕ್ಷೆಗೆ (ವರ್ಣತುಂತುಗಳ ಪರೀಕ್ಷೆ) ಒಳಪಡಿಸಿದಾಗ ಈಕೆಯಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ XX ವರ್ಣತಂತುಗಳ ಬದಲು ಪುರುಷರಲ್ಲಿ ಇರುವಂತೆ XY ವರ್ಣತಂತುಗಳು ಕಂಡುಬಂದವು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?

    ಈಕೆಯ ಇಬ್ಬರು ಚಿಕ್ಕಮ್ಮಂದಿರನ್ನು ಪರೀಕ್ಷಿಸಿದಾಗ ಅವರಲ್ಲಿ ಕೂಡ Androgen Insensitivity Syndrome ಇರುವುದು ಪತ್ತೆಯಾಗಿದೆ. ಬಹುಶಃ ಇದು ಅವರ ಮನೆತನದ ಜೀನ್​ಗಳಲ್ಲೇ ಇರಬಹುದು ಎಂದು ಕ್ಯಾನ್ಸರ್​ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

    ತಾನು ಮಹಿಳೆಯಲ್ಲ, ಪುರುಷ ಎಂಬುದು ಗೊತ್ತಾದ ನಂತರದಲ್ಲಿ ಆಕೆಯ ಪ್ರತಿಕ್ರಿಯೆ ಹೇಗಿತ್ತು ಎಂಬ ಕುತೂಹಲ ಮೂಡುತ್ತದೆ. ಆದರೆ, ಈಗ ಆಕೆ ಹೆಣ್ಣಾಗಿ ಇಷ್ಟು ವರ್ಷ ಜೀವಿಸಿದ್ದು, ಮದುವೆಯನ್ನೂ ಆಗಿದ್ದಾಳೆ. ಆದ್ದರಿಂದ ಆಕೆಗೆ ಮತ್ತು ಆಕೆಯ ಪತಿಗೆ ಇದುವರೆಗೆ ಹೇಗೆ ಸತಿಪತಿಗಳಾಗಿ ಬದುಕಿದ್ದಾರೋ ಹಾಗೆಯೇ ಬದುಕು ಮುಂದುವರಿಸುವಂತೆ ಕೌನ್ಸೆಲಿಂಗ್​ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಲಾಕಪ್‌ಡೆತ್‌ಗೆ ಭಯಾನಕ ಟ್ವಿಸ್ಟ್‌: ಠಾಣೆಯಲ್ಲಿ ಅಪ್ಪ-ಮಗನ ಮೇಲೆ ಲೈಂಗಿಕ ದೌರ್ಜನ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts