More

    ಮಹಿಳಾ ಹೋರಾಟಗಾರರಿಗೆ ಆದರ್ಶ

    ಕಂಪ್ಲಿ: ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಸಾವಿತ್ರಿಬಾಯಿ ಫುಲೆ ಅವರು ಮಾಡಿದ ಹೋರಾಟ ಅವಿಸ್ಮರಣೀಯ ಎಂದು ತಾಲೂಕಿನ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಎಚ್.ಶಕುಂತಲಾ ಹೇಳಿದರು.

    ಇದನ್ನೂ ಓದಿ: ರಾಮಜನ್ಮಭೂಮಿ ಹೋರಾಟಗಾರರ ಬಂಧನಕ್ಕೆ ವಿರೋಧ, ಹುಬ್ಬಳ್ಳಿಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ ನೇತೃತ್ವದಲ್ಲಿ ಧರಣಿ

    ಕಂಪ್ಲಿ ಬಲಿಜ ಮಹಿಳಾ ಸಂಘ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ 193ನೇ ಜನ್ಮದಿನಾಚರಣೆಯಲ್ಲಿ ಬುಧವಾರ ಮಾತನಾಡಿದರು. ಸಾವಿತ್ರಿಬಾಯಿ ಫುಲೆ ಸಮಾಜ ಸುಧಾರಣೆಯೊಂದಿಗೆ ಬದುಕನ್ನೇ ಸ್ತ್ರೀಯರ ಸಮಾನತೆಗೆ ಮುಡಿಪಿಟ್ಟು, ಭಾರತೀಯ ಸ್ತ್ರೀವಾದಿ ಚಳುವಳಿಯ ಪ್ರವರ್ತಕರಾಗಿದ್ದಾರೆ.

    ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ತೆರೆದಿದ್ದಲ್ಲದೆ, ಮಹಿಳೆಯರ ಹಕ್ಕುಗಳಿಗಾಗಿ ಅವಿರತವಾಗಿ ಶ್ರಮಿಸಿದರು. ಅವರ ಬದುಕು ಮಹಿಳಾ ಹೋರಾಟಗಾರರಿಗೆ ಆದರ್ಶವಾಗಿದೆ ಎಂದರು.

    ಸಾವಿತ್ರಿಬಾಯಿ ಫುಲೆ ಹೋರಾಟ ಅವಿಸ್ಮರಣೀಯ


    ಬಲಿಜ ಮಹಿಳಾ ಸಂಘದ ನಗರ ಅಧ್ಯಕ್ಷೆ ಶಾರದಾ ಲೋಕೇಶ್ ಮಾತನಾಡಿ, ಮಹಿಳೆಯರು ಉನ್ನತ ಶಿಕ್ಷಣ ಹಾಗೂ ಹುದ್ದೆಗಳತ್ತ ಜಾಗೃತಿ ತೋರಬೇಕು. ಪುರುಷ ಸಮಾನತೆ ಸಾಧಿಸುವ ಜತೆಗೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಮುಂದಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ಎಂದರು.

    ಮುಖ್ಯಶಿಕ್ಷಕಿ ಎಚ್.ಶಕುಂತಲಾ, ಶಿಕ್ಷಕಿ ಸರಸ್ವತಿ ಜೆ.ಪಿ.ಶಾಸ್ತ್ರಿ, ಮಹಿಳಾ ಸಂಘದ ಪದಾಧಿಕಾರಿಗಳಾದ ಕವಿತಾಳ ವಿದ್ಯಾ ಶಿವಕುಮಾರ್, ರೇಣುಕಮ್ಮ, ತುಳಸಿ, ಆರತಿ, ಸುನಂದಮ್ಮ, ಸಾವಿತ್ರಿ, ರೇಖಾ, ಲಕ್ಷ್ಮೀ, ಪದ್ಮಾವತಿ, ಡಿ.ಸತೀಶ್, ನಾಗರಾಜ, ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts