More

    ನೆರೆಮನೆಯ ಎದುರು ಕಸ ಎಸೆದರು, ಪ್ರಶ್ನಿಸಿದ್ದಕ್ಕೆ ಇರಿದು ಒಬ್ಬರನ್ನು ಕೊಂದರು

    ಔರಂಗಾಬಾದ್​: ತಮ್ಮ ಮನೆಯ ಎದುರು ಕಸ ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಾದ ನೆರೆಮನೆಯವರು ದಂಪತಿಯನ್ನು ಮೊನಚಾದ ವಸ್ತುವಿನಿಂದ ಇರಿದಿದ್ದಾರೆ. ಪತ್ನಿ ಮೃತಪಟ್ಟಿದ್ದು, ಪತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

    ಔರಂಗಾಬಾದ್​ನ ರೆಹಮಾನಿಯಾ ಕಾಲನಿಯ ನಿವಾಸಿ ಪರ್ವೀನ್​ ಬೇಗಂ ಮೃತಪಟ್ಟವರು. ಇವರ ಪತಿ ಶೇಖ್​ ಫಹೀಂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು ಇನ್ನೂ 7 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಔರಂಗಾಬಾದ್​ ಪೊಲೀಸರು ತಿಳಿಸಿದ್ಧಾರೆ.

    ಕಾಲನಿಯ ಲೇನ್​ ನಂ.12ರಲ್ಲಿ ವಾಸವಾಗಿದ್ದ ಪರ್ವೀನಾ ಮತ್ತು ಫಹೀಂ ಅವರ ವಿರುದ್ಧ ನೆರೆಮನೆಯವರು ದ್ವೇಷ ಸಾಧಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಮನೆಯ ಕಸವನ್ನು ಬೇಕೆಂದೇ ಅವರ ಮನೆಯ ಎದುರು ಹಾಕಿ ಕಿರುಕುಳ ನೀಡುತ್ತಿದ್ದರು. ಕಳೆದ ಭಾನುವಾರ ಕೂಡ ಬೇಕೆಂದೇ ಪರ್ವೀನಾ ಅವರ ಮನೆಯ ಎದುರು ಕಸ ಎಸೆದಿದ್ದರು. ಏಕೆ ಹೀಗೆ ಮಾಡಿದಿರಿ ಎಂದು ಪರ್ವೀನಾ ಪಕ್ಕದ ಮನೆಯವರನ್ನು ಪ್ರಶ್ನಿಸಿದ್ದರು.

    ಇದನ್ನೂ ಓದಿ: ಗಾರೆ ಕೆಲಸ ಮಾಡುತ್ತ ಗುಡಿಸಲಿನಲ್ಲೇ ಓದಿ ಶೇ.98.5 ಫಲಿತಾಂಶ ಪಡೆದ ಮಹೇಶ!

    ಮಾತಿಗೆ ಮಾತು ಬೆಳೆದು ವಾಗ್ವಾದ ಏರ್ಪಡುತ್ತಿದ್ದಂತೆ ಪಕ್ಕದ ಮನೆಯ ಮನೆಯ ಕುಟುಂಬದ ಸದಸ್ಯರು ಕೂಡ ಸೇರಿಕೊಂಡ ಬಳಿಕ ಹೋಯ್​ಕೈ ಏರ್ಪಟ್ಟಿತು. ಪರ್ವೀನಾ ಮತ್ತು ಆಕೆಯ ಪತಿಯ ಮೇಲೆ ನೆರೆಮನೆಯವರು ಹಲ್ಲೆ ಮಾಡಲಾರಂಭಿಸಿದ್ದರು. ಅಷ್ಟರಲ್ಲೇ ಯಾರೋ ಒಬ್ಬರು ಮೊನಚಾದ ವಸ್ತುವಿನಿಂದ ಪರ್ವೀನಾ ಮತ್ತು ಅವರ ಪತಿ ಫಹೀಂ ಅವರನ್ನು ಹಲವು ಬಾರಿ ಇರಿದರು ಎನ್ನಲಾಗಿದೆ.

    ಗಂಭೀರವಾಗಿ ಗಾಯಗೊಂಡಿದ್ದ ಪರ್ವೀನಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದರೆ, ಫಹೀಂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
    ಸೈಯದ್​ ಮಹಮೂದ್​ ಮತ್ತು ಆತನ ಪುತ್ರ ಸಯದ್​ ಹಮೀದ್​ ಎಂಬುವರನ್ನು ಬಂಧಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್​ ವಶಕ್ಕೆ ಪಡೆಯಲಾಗಿದೆ. ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿ ಒಟ್ಟು 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಔರಂಗಾಬಾದ್​ನ ಜಿನ್ಸಿ ಪೊಲೀಸ್​ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.

    ಎರಡೇ ವಾರದಲ್ಲಿ 97 ಸಾವಿರ ಮಕ್ಕಳಲ್ಲಿ ಸೋಂಕು; ಶಾಲೆಗಳ ಮರು ಆರಂಭ ನಿರ್ಧಾರ ಹುಟ್ಟು ಹಾಕಿದೆ ಭಾರಿ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts