More

    ಮಹಿಳೆ ದೇಹದಲ್ಲಿ 216 ದಿನಗಳಿಂದ ಬೀಡುಬಿಟ್ಟು, 32 ಬಾರಿ ರೂಪಾಂತರ ಹೊಂದಿದ ಕರೊನಾ!

    ದರ್ಬನ್​ : ದಕ್ಷಿಣ ಆಫ್ರಿಕಾದ ಎಚ್​ಐವಿ ಸೋಂಕಿತ ಮಹಿಳೆಯೊಬ್ಬಳ ದೇಹದಲ್ಲಿ ಅತ್ಯಂತ ಅಪಾಯಕಾರಿಯಾದ ಕರೊನಾ ವೈರಸ್​​ ರೂಪಾಂತರಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ದುರ್ಬಲ ರೋಗನಿರೋಧಕತೆಯುಳ್ಳ ಈ ಮಹಿಳೆಯ ದೇಹದಲ್ಲಿ 216 ದಿನಗಳಿಂದ ಕರೊನಾ ವೈರಸ್ ಬೀಡುಬಿಟ್ಟಿದ್ದು, ಈವರೆಗೆ 32 ಬಾರಿ ರೂಪಾಂತರ ಹೊಂದಿದೆ ಎನ್ನಲಾಗಿದೆ.

    ಮಹಿಳೆಯೊಬ್ಬಳು 2006 ರಲ್ಲಿ ಎಚ್​ಐವಿ ಪಾಸಿಟಿವ್ ಆಗಿದ್ದು, ಕಾಲಕ್ರಮೇಣ ಅತಿ ದುರ್ಬಲ ರೋಗನಿರೋಧಕತೆ ಹೊಂದಿದ್ದಳು. ಈಕೆಗೆ ಸೆಪ್ಟೆಂಬರ್ 2020ರಲ್ಲಿ ಕರೊನಾ ಸೋಂಕು ತಗುಲಿದ್ದು, ಅವಳ ಶರೀರದಲ್ಲಿ ನಿರಂತರ ರೂಪಾಂತರಗಳನ್ನು ಈ ವೈರಸ್​ ಹೊಂದುತ್ತಲೇ ಇದೆ. ಈವರೆಗೆ ವೈರಸ್​ ಸ್ಪೈಕ್ ಪ್ರೋಟೀನ್​ನಲ್ಲಿ 13 ಮ್ಯುಟೇಶನ್​ಗಳನ್ನು ಮತ್ತು 19 ಇತರ ಜೆನೆಟಿಕ್ ಶಿಫ್ಟ್​ಗಳನ್ನು ತೋರಿಸಿದೆ ಎನ್ನಲಾಗಿದೆ.

    ಇದನ್ನೂ ಓದಿ: ಆಸ್ಪತ್ರೆಯಲ್ಲಿ ಮಲಯಾಳಿ ಮಾತನಾಡಿದರೆ ಶಿಕ್ಷೆ ಎಂದು ಬೆಳಗ್ಗೆ ಸುತ್ತೋಲೆ- ಮಧ್ಯಾಹ್ನ ವಾಪಸ್‌

    ಈ ಮಹಿಳೆಯ ಕೇಸ್​ ಸ್ಟಡಿಯನ್ನು ಮೆಡ್​ಆರ್​​​​​​​​​​​​​​​​ಕ್ಸೀವ್ ಮೆಡಿಕಲ್ ಜರ್ನಲ್​ನಲ್ಲಿ ಪ್ರಕಟಿಸಲಾಗಿದ್ದು, ಎಚ್​ಐವಿ ಸೋಂಕಿತರಲ್ಲಿ ಕರೊನಾ ವೈರಸ್​ ಆತಂಕಕಾರಿಯಾಗಿ ರೂಪಾಂತರಗೊಳ್ಳಬಹುದು ಎಂಬ ಕಳವಳ ವ್ಯಕ್ತಪಡಿಸಲಾಗಿದೆ. ದರ್ಬನ್​ನ ಕ್ವಾಜುಲು ನಟಾಲ್​ ಯೂನಿವರ್ಸಿಟಿಯ ಪ್ರೊಫೆಸರ್​ ಟೂಲಿಯೊ ಡಿ ಒಲಿವೇರಾ ಈ ಅಧ್ಯಯನ ವರದಿಯ ಲೇಖಕಿಯಾಗಿದ್ದು, ರೋಗನಿರೋಧಕತೆ ಹತ್ತಿಕ್ಕಲ್ಪಟ್ಟಿರುವ ಜನರ ಶರೀರದಲ್ಲಿ ಕರೊನಾ ವೈರಸ್​ ಹೆಚ್ಚು ಕಾಲ ಜೀವಿಸುತ್ತದೆ ಎಂದಿದ್ದಾರೆ. (ಏಜೆನ್ಸೀಸ್)

    ಅನ್​​ಲಾಕ್​ ಬಸ್​ ಸಂಚಾರಕ್ಕೆ ಸಿದ್ಧತೆ : ಸಾರಿಗೆ ನೌಕರರಿಗೆ ಕರ್ತವ್ಯದ ಕರೆ

    ಆಸ್ಪತ್ರೆಗೆ ದಾಖಲಾದ ಹಿರಿಯ ನಟ ದಿಲೀಪ್​ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts