More

    ಒಡೆಯರ್ ದೂರದೃಷ್ಟಿಯಿಂದ ಅಭಿವೃದ್ಧಿ: ಡಾ. ವಿಜಯ ಸಂಕೇಶ್ವರ

    ಶಿವಮೊಗ್ಗ: ಉತ್ತರ ಕರ್ನಾಟಕಕ್ಕಿಂತಲೂ ರಾಜ್ಯದ ದಕ್ಷಿಣ ಭಾಗ ಹೆಚ್ಚು ಅಭಿವೃದ್ಧಿಯಾಗಿದೆ. ಜನಪರ ಕಾರ್ಯಗಳು ನಡೆದಿವೆ. ಇದಕ್ಕೆ ಮೈಸೂರು ರಾಜಮನೆತನವೇ ಕಾರಣ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.

    ಶನಿವಾರ ಭದ್ರಾವತಿ ವಿಐಎಸ್‌ಎಲ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 100 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ವಿಐಎಸ್‌ಎಲ್, ಕೆಆರ್‌ಎಸ್, ಎಚ್‌ಎಎಲ್ ಏರ್‌ಪೋರ್ಟ್ ಅವರ ದೂರದೃಷ್ಟಿಗೆ ನಿದರ್ಶನವಾಗಿದೆ ಎಂದರು.
    ಪ್ರಧಾನಿ ನರೇಂದ್ರ ಮೋದಿ ಇನ್ನು ಕೆಲವೇ ವರ್ಷ ಪ್ರಧಾನಿಯಾಗಿ ಮುಂದುವರಿದರೆ ಭಾರತಕ್ಕೆ ಮುಂದಿನ 50-100 ವರ್ಷಗಳಿಗೆ ಏನು ಅಗತ್ಯವಿದೆಯೋ ಅದೆಲ್ಲವನ್ನೂ ಒದಗಿಸಲಿದ್ದಾರೆ. ಮೋದಿ ಅವರದ್ದು ಒಡೆಯರ್ ರೀತಿಯ ದೂರದೃಷ್ಟಿಯಾಗಿದೆ ಎಂದು ಬಣ್ಣಿಸಿದರು.
    ಕೆಆರ್‌ಎಸ್ ಡ್ಯಾಂ ನಿರ್ಮಾಣ ಸಂದರ್ಭದಲ್ಲಿ ಒಡವೆಗಳನ್ನು ಮಾರಿ ಅದರಿಂದ ಬಂದ ಹಣದಲ್ಲಿ ಕಾರ್ಮಿಕರಿಗೆ ಸಂಬಳ ನೀಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಇಂದಿಗೂ ಜನರು ಮೈಸೂರು ಮಹಾರಾಜರ ಕುಟುಂಬಕ್ಕೆ ಅತ್ಯಂತ ಗೌರವ ನೀಡಲು ಮೈಸೂರು ಸಂಸ್ಥಾನ ಸಮಾಜಕ್ಕೆ ನೀಡಿದ ಕೊಡುಗೆಗಳೇ ಕಾರಣ ಎಂದು ತಿಳಿಸಿದರು.
    ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಬಿ.ಕೆ.ಸಂಗಮೇಶ್ವರ, ಶತಮಾನೋತ್ಸವ ಸಮಿತಿ ಅಧ್ಯಕ್ಷ ದೊಡ್ಡಣ್ಣ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts