More

    ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ

    ಚನ್ನಮ್ಮ ಕಿತ್ತೂರು: ಕಚೇರಿಗೆ ಬರುವ ಜನರ ಜೊತೆ ಸೌಜನ್ಯದಿಂದ ಅಧಿಕಾರಿಗಳು ವರ್ತಿಸಬೇಕು. ದರ್ಪ ತೋರಿಸದೆ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಾಲೂಕಿನ ಕುಲವಳ್ಳಿ ಗ್ರಾಪಂ ವ್ಯಾಪ್ತಿಯ ಕತ್ರಿದಡ್ಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ‘ತಹಸೀಲ್ದಾರ್ ನಡಿಗೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ.

    ಅಧಿಕಾರಿಗಳು ತಮ್ಮ ವರ್ತನೆಗಳಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ನಿರ್ದ್ಯಾಕ್ಷಿಣ್ಯ ಕ್ರಮ ಕ್ರಮಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

    ಸರ್ಕಾರದ ಈ ಗ್ರಾಮ ವಾಸ್ತವ್ಯ ಯೋಜನೆ ಯಶಸ್ವಿಯಾಗಿದೆ. ಗುಡ್ಡದ ನಾಡಾದ ಕುಲವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ 9 ಗ್ರಾಮಗಳು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಿ ಆಸ್ಪತ್ರೆ ತೆರೆಯುಂತೆ ಜನರು ಬೇಡಿಕೆ ಇಟ್ಟಿದ್ದಾರೆ. ಅದನ್ನೂ ಶೀಘ್ರದಲ್ಲೇ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

    ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ ಮಾತನಾಡಿ, ಜನರು ಏಜೆಂಟರ ಬಳಿ ತೆರಳದೆ ನೇರವಾಗಿ ನಮ್ಮ ಕಚೇರಿಗೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಜನರಲ್ಲಿ ವಿನಂತಿಸಿದರು.

    ಇದೇ ವೇಳೆ ಶಾಸಕರು ಕೃಷಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಕೃಷಿ ಉಪಕರಣಗಳನ್ನು ಹಾಗೂ ಅಂಗವಿಕಲರಿಗೆ ಮೂರು ಚಕ್ರಗಳ ಸೈಕಲ್ ವಿತರಿಸಿದರು.

    ಜಿಪಂ ಸದಸ್ಯೆ ರಾಧಾ ಶ್ಯಾಮ ಕಾದ್ರೊಳ್ಳಿ, ಬಿಜೆಪಿ ಬ್ಲಾಕ್ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಪ್ರಬೇಶನರಿ ತಹಸೀಲ್ದಾರ್ ಮಹೇಶ ಪತ್ರಿ, ಗ್ರಾಪಂ ಅಧ್ಯಕ್ಷ ಭಿಷ್ಟಪ್ಪ ಶಿಂಧೆ, ಸರಸ್ವತಿ ಹೈಬತ್ತಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಬಸನಗೌಡ ಸಿದ್ರಾಮಣಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts