More

    ಉತ್ತಮ ನಡವಳಿಕೆ ಇದ್ದರೆ ಎಲ್ಲೆಡೆ ಗೌರವ ಹೆಚ್ಚಳ

    ಸವದತ್ತಿ: ಮನುಷ್ಯ ಸಮಾಜ ಜೀವಿ. ಅವನು ಸರಿಯಾದ ರೀತಿಯಲ್ಲಿ ವರ್ತಿಸುವುದು ಮುಖ್ಯವಾಗಿದೆ. ಶಿಷ್ಟಾಚಾರದಿಂದ ವ್ಯಕ್ತಿತ್ವ ಮೇಲುಸ್ತರದಲ್ಲಿ ಗುರ್ತಿಸುವಂತೆ ರೂಪಿಸಿಕೊಳ್ಳಬಹುದೆಂದು ಬೆಳಗಾವಿಯ ಕಾರ್ಪೋರೇಟ್ ಸಲಹೆಗಾರ ಅಮಿತ್ ಸೌಂದಲಗೇಕರ್ ಹೇಳಿದರು.

    ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯವು ಏರ್ಪಡಿಸಿದ್ದ ವತ್ತಿಯಲ್ಲಿ ಶಿಷ್ಟಾಚಾರ ಎಂಬ ಒಂದು ದಿನದ ವತ್ತಿ ಅಭಿವದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಶಿಷ್ಟಾಚಾರ ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಅವನು ಹೋದೆಡೆ ಗೌರವ ಮತ್ತು ಮೆಚ್ಚುಗೆ ಗಳಿಸಲು ಅನುವು ಮಾಡಿಕೊಡುತ್ತದೆ ಎಂದರು.
    ಪ್ರಾಚಾರ್ಯ ಪ್ರೊ. ಮಾರುತಿ ದೊಂಬರ ಅಧ್ಯಕ್ಷತೆ ವಹಿಸಿದ್ದರು. ಅಮಿತ್ ಸೌಂದಲಗೇಕರ್ ಅವರನ್ನು ಸನ್ಮಾನಿಸಲಾಯಿತು. ಪ್ರತಿನಿಧಿಗಳಾದ ಸಂಜನಾ ಹೊಳಿಮಠ, ಸಿದ್ದಪ್ಪ ಮುದೇನೂರ, ಪಥ್ವಿರಾಜ್ ಪಾಟೀಲ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದಿಂದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

    ಲಾವಣ್ಯ ಈಳಿಗೇರ ಮತ್ತು ಗಾಯತ್ರಿ ಪ್ರಾರ್ಥಿಸಿದರು. ವಿ.ಎಸ್.ಮೀಶಿ ಸ್ವಾಗತಿಸಿದರು. ಎ.ಎ.ಹಳ್ಳೂರ ಪರಿಚಯಿಸಿದರು. ವಚನಾ ಬಸಿಡೋಣಿ ನಿರೂಪಿಸಿದರು. ಡಾ.ಎನ್.ಆರ್.ಸವತೀಕರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts