More

    ಇಂದು ಆಸೀಸ್-ಆಫ್ರಿಕಾ ಮುಖಾಮುಖಿ: ಪುಟಿದೇಳುವ ಹಂಬದಲ್ಲಿ ಆಸ್ಟ್ರೇಲಿಯಾ

    ಲಖನೌ: ಏಕದಿನ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಆತಿಥೇಯ ಟೀಮ್ ಇಂಡಿಯಾ ವಿರುದ್ಧ ಸೋಲು ಅನುಭವಿಸಿರುವ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ರನ್‌ಮಳೆ ಹರಿಸಿ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡಗಳು ಏಕನಾ ಕ್ರೀಡಾಂಗಣದಲ್ಲಿ ಗುರುವಾರ ಮುಖಾಮುಖಿ ಆಗಲಿವೆ. ಈ ಕ್ರೀಡಾಂಗಣ ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯ ವಹಿಸಲಿದೆ.
    ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿರುವ ಆಸೀಸ್ ಬ್ಯಾಟಿಂಗ್ ಕ್ರಮಾಂಕ ಬಲಪಡಿಸಲು ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್‌ರನ್ನು ಆಡುವ 11ರ ಬಳಗಕ್ಕೆ ಕರೆತರುವ ಸಾಧ್ಯತೆಯಿದೆ. ಲಂಕಾವನ್ನು 102 ರನ್‌ಗಳಿಂದ ಮಣಿಸಿರುವ ಟೆಂಬಾ ಬವುಮಾ ಪಡೆ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ನಿಧಾನಗತಿಯ ಚೆಪಾಕ್ ಅಂಗಣದಲ್ಲಿ ರನ್‌ಗಳಿಸಲು ಪರದಾಡಿದ ಆಸೀಸ್‌ಗೆ ಸ್ಪಿನ್ನರ್‌ಗಳ ಕೊರತೆ ಕಾಡಿದೆ. ಆಡಂ ಜಂಪಾ ಮಾತ್ರ ತಂಡದಲ್ಲಿ ಪರಿಣತ ಸ್ಪಿನ್ನರ್ ಆಗಿದ್ದಾರೆ. ಇತ್ತೀಚಿನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 2-3ರಿಂದ ಮಣಿಸಿರುವುದೂ ಆಫ್ರಿಕಾದ ಮನೋಬಲ ಹೆಚ್ಚಿಸಿದೆ.
    ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಹೊರತುಪಡಿಸಿ ಇತರ ಬ್ಯಾಟರ್‌ಗಳು ಾರ್ಮ್‌ಗೆ ಮರಳಬೇಕಿದೆ. ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡಿರುವ ಸ್ಟೊಯಿನಿಸ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಐಪಿಎಲ್‌ನಲ್ಲಿ ಲಖನೌ ಸೂಪರ್‌ಜೈಂಟ್ಸ್ ಪರ ಈ ಮೈದಾನದಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಲಂಕಾದ ಅನನುಭವಿ ಬೌಲರ್‌ಗಳ ಎದುರು ಘರ್ಜಿಸಿದ್ದ ಆಫ್ರಿಕಾ ಬ್ಯಾಟರ್‌ಗಳಿಗೆ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಸಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಸವಾಲಾಗಲಿದ್ದಾರೆ. ಕೊನೇ ವಿಶ್ವಕಪ್ ಟೂರ್ನಿ ಆಡುತ್ತಿರುವ ಕ್ವಿಂಟನ್ ಡಿಕಾಕ್ ಮೊದಲ ಪಂದ್ಯದಲ್ಲಿ ಶತಕದ ಮೂಲಕ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ.

    ವಿಶ್ವಕಪ್ ಮುಖಾಮುಖಿ: 6
    ಆಸ್ಟ್ರೇಲಿಯಾ-3
    ದ.ಆಫ್ರಿಕಾ-2
    ಟೈ-1

    ಏಕದಿನ ಮುಖಾಮುಖಿ- 108
    ಆಸ್ಟ್ರೇಲಿಯಾ- 50
    ದ. ಆಫ್ರಿಕಾ-54

    ಪಂದ್ಯ ಆರಂಭ: ಮಧ್ಯಾಹ್ನ 2
    ನೇರಪ್ರಸಾರ:ಸ್ಟಾರ್ ಸ್ಪೋರ್ಟ್ಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts