More

    ಕರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದ ಬೆನ್ನಲ್ಲೇ ಕೇಂದ್ರದಿಂದ ಹೊರಬಿತ್ತು ಸಮಾಧಾನಕರ ಸಂಗತಿ

    ನವದೆಹಲಿ: ಭಾರತದಲ್ಲಿ ನೋಡನೋಡುತ್ತಿದ್ದಂತೆ ಕರೊನಾ ಸೋಂಕಿತರ ಸಂಖ್ಯೆ ಲಕ್ಷದ ಗಡಿದಾಟಿದೆ. ಹೀಗೆ ಆದರೆ ಸದ್ಯದಲ್ಲಿಯೇ ಕೊವಿಡ್​ -19 ಕೆಟ್ಟದಾಗಿ ಪರಿಣಾಮ ಬೀರಿದ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಿಬಿಡಬಹುದಾ ಎಂಬ ಆತಂಕ ಸಹಜವಾಗಿಯೇ ಕಾಡುತ್ತಿದೆ.

    ಆದರೂ ಈ ಮಧ್ಯೆ ಕೇಂದ್ರ ಆರೋಗ್ಯ ಇಲಾಖೆ ಒಂದು ಸಮಾಧಾನಕರ ವಿಚಾರವನ್ನು ಹೇಳಿದೆ. ಇಡೀ ವಿಶ್ವ ಹಿಂದೆಂದೂ ಕಂಡಿರದ ಕೊವಿಡ್​-19 ಭೀಕರತೆ ವಿರುದ್ಧ ಹೋರಾಟದಲ್ಲಿ ಭಾರತ ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸುತ್ತಿದೆ. ನಮ್ಮ ದೇಶದಲ್ಲಿ ಕರೊನಾ ಸೋಂಕಿತರು ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ತೀವ್ರ ಆತಂಕ ಪಡಬೇಕಿಲ್ಲ. ಆದರೆ ಕೊವಿಡ್​-19 ಬಾರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಹೇಳಿದೆ.

    ಇದನ್ನೂ ಓದಿ: ಭಾರತಕ್ಕೆ ಅಮೆರಿಕಾ ದೇಣಿಗೆಯಾಗಿ ನೀಡುತ್ತೆನೆಂದ ವೆಂಟಿಲೇಟರ್​ಗಳಿಗೆ ಹಣ ಪಡೆಯುತ್ತಿದ್ದೆಯೇ?

    ದೇಶದಲ್ಲಿ ಕೊವಿಡ್-19 ವ್ಯಾಪಕವಾಗಿ ಹರಡುತ್ತಿದೆ ನಿಜ. ಆದರೆ ನೀಡುತ್ತಿರುವ ಚಿಕಿತ್ಸೆಯೂ ಫಲಿಸುತ್ತಿದೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ 24ಗಂಟೆಯಲ್ಲಿ ದೇಶಾದ್ಯಂತ 2350 ಕೊವಿಡ್​-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಒಟ್ಟಾರೆ 39, 174 ಮಂದಿ ಇಲ್ಲಿಯವರೆಗೆ ಕಾಯಿಲೆಯಿಂದ ಪಾರಾಗಿದ್ದಾರೆ. ಅಂದರೆ ನಮ್ಮ ದೇಶದಲ್ಲಿ ಕೊವಿಡ್​-19 ಚೇತರಿಕೆಯ ದರದ ಪ್ರಮಾಣ ಶೇ.38.73ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವಿವರಣೆ ನೀಡಿದೆ.

    ಭಾರತದಲ್ಲಿ ಸದ್ಯ 58,802 ಸಕ್ರಿಯ ಕರೊನಾ ಕೇಸ್​ಗಳು ಇವೆ. ಅವರೆಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲೂ ಕೇವಲ ಶೇ.2.9 ಜನರಿಗೆ ಮಾತ್ರ ಐಸಿಯುವಿನಲ್ಲಿ ಚಿಕಿತ್ಸೆ ಅಗತ್ಯ ಬೀಳುತ್ತಿದೆ ಎಂದು ಹೇಳಿದೆ.
    ಬೇರೆ ಕೆಲವು ಕೊವಿಡ್​-19 ಪೀಡಿತ ದೇಶಗಳಿಗೆ ಹೋಲಿಸಿದರೆ ಭಾರತ ಯಶಸ್ವಿಯಾಗಿ ಹೋರಾಡುತ್ತಿದೆ. ಸಾವಿನ ದರವೂ ಸಹ ಉಳಿದ ಕೆಲವು ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ತುಂಬ ಕಡಿಮೆ ಇದೆ. ಭಾರತದಲ್ಲಿ ಲಕ್ಷ ಜನರಿಗೆ ಸೋಂಕು ತಗಲಿದ್ದರೂ ಸಾವಿನ ಪ್ರಮಾಣ ಶೇ.0.2ರಷ್ಟಿದೆ. ಆದರೆ ವಿಶ್ವದ ಬೇರೆ ಕೆಲವು ರಾಷ್ಟ್ರಗಳಲ್ಲಿ ಲಕ್ಷ ಸೋಂಕಿತರಲ್ಲಿ ಸಾವಿನ ಪ್ರಮಾಣ 4.1ರಷ್ಟಿದೆ ಎಂದು ತಿಳಿಸಿದೆ.

    ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶದ ಪ್ರಕಾರ, ಯುಎಸ್​ಎ, ಯುಕೆ, ಇಟಲಿ, ಫ್ರಾನ್ಸ್​, ಸ್ಪೇನ್​, ಬ್ರೆಜಿಲ್​, ಬೆಲ್ಜಿಯಂ, ಜರ್ಮನಿ, ಇರಾನ್​, ಕೆನಡಾ, ನೆದರ್​ಲ್ಯಾಂಡ್​, ಮೆಕ್ಸಿಕೊ, ಚೀನಾ, ಟರ್ಕಿ ಮತ್ತು ಸ್ವೀಡನ್​ಗಳಲ್ಲಿ ಸಾವಿನ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಈ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಲಕ್ಷ ಮುಟ್ಟುವಷ್ಟರಲ್ಲಿ ಸಾವಿನ ಸಂಖ್ಯೆಯೂ ಅತಿ ಹೆಚ್ಚಾಗಿತ್ತು ಎಂದು ಡಬ್ಲ್ಯೂಎಚ್​ಒ ತಿಳಿಸಿದ್ದಾರೆ ಆರೋಗ್ಯ ಇಲಾಖೆ ಹೇಳಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಯಾರಾದರೂ ಫುಡ್ ಕಿಟ್ ಕೊಟ್ಟರೆ ಸ್ವೀಕರಿಸುತ್ತಾರಂತೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts