More

    ಇಂದು ಭಾರತ-ದ.ಆಫ್ರಿಕಾ ನಡುವೆ ಅಂತಿಮ ಏಕದಿನ: ತಿರುಗೇಟಿನ ತವಕದಲ್ಲಿ ರಾಹುಲ್ ಪಡೆ

    ಪಾರ್ಲ್: ಹರಿಣಗಳ ನಾಡಿನಲ್ಲಿ 2ನೇ ಏಕದಿನ ಸರಣಿ ಜಯಿಸುವ ಮೂಲಕ 2022ರ ತವರಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ತುಡಿತದಲ್ಲಿರುವ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡಣೇ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತ್ತು. ಗುರುವಾರ ನಡೆಯಲಿರುವ ಮೂರನೇ ಹಾಗೂ ಅಂತಮ ಏಕದಿನ ಪಂದ್ಯದಲ್ಲಿ ತೀರುಗೇಟು ನೀಡುವ ಮೂಲಕ ಸರಣಿ ಜಯಿಸುವ ವಿಶ್ವಾಸವನ್ನು ಕೆಎಲ್ ರಾಹುಲ್ ಬಳಗ ಹೊಂದಿದೆ. 2018ರಲ್ಲಿ ಭಾರತ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಒಮ್ಮೆ ಮಾತ್ರ ಏಕದಿನ ಸರಣಿ ಜಯಿಸಿದ ಸಾಧನೆ ಮಾಡಿದೆ.

    ಎರಡನೇ ಏಕದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ವೈಲ್ಯ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಸಾಯಿ ಸುದರ್ಶನ್ ಮಾತ್ರ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತದ ಪಾಲಿಗೆ ್ಲಸ್ ಪಾಯಿಂಟ್ ಎನಿಸಿದೆ. ಟಿ20ಯಲ್ಲಿ ಉತ್ತಮ ರನ್ ಕಲೆಹಾಕಿರುವ ಋತುರಾಜ್ ಗಾಯಕ್ವಾಡ್ ಏಕದಿನದಲ್ಲಿ ಅದೇ ಪ್ರದರ್ಶನ ಪುನರಾವರ್ತಿಸುವಲ್ಲಿ ವಿಲರಾಗಿದ್ದಾರೆ.

    ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಆರಂಭ ದೊರೆಯದಿರುವುದು ಭಾರತಕ್ಕೆ ಹಿನ್ನಡೆ ಎನಿಸಿದೆ.ಭರವಸೆ ಮೂಡಿಸಿದ ತಿಲಕ್ ವರ್ಮ ನಿರೀಕ್ಷೆಗೆ ತಕ್ಕ ಬ್ಯಾಟಿಂಗ್ ನಡೆಸುವಲ್ಲಿ ಎಡವುತ್ತಿದ್ದಾರೆ. ತವರಿನಲ್ಲಿ ಆಸೀಸ್ ವಿರುದ್ಧ ಟಿ20 ಸರಣಿಯಲ್ಲೂ ರನ್‌ಗಳಿಸಲು ತಿಣುಕಾಡಿದ್ದ ತಿಲಕ್ ವರ್ಮ, ಹರಿಣಗಳ ನಾಡಿನಲ್ಲೂ ಮುಂದುವರಿಸಿದ್ದಾರೆ. ರಜತ್ ಪಾಟೀದಾರ್ ಅವಕಾಶ ಪಡೆಯುವ ಸಾಧ್ಯತೆಗಳಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವ ಅನುಭವ ಹೊಂದಿದ್ದಾರೆ.

    ಕಳೆದ ಪಂದ್ಯದಲ್ಲಿ 12 ರನ್‌ಗಳಿಗೆ ಔಟಾಗಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವೈಲ್ಯ ಕಂಡಿರುವ ಸಂಜು ಸ್ಯಾಮ್ಸನ್ ಮತ್ತೊಂದು ಅವಕಾಶ ಎದುರು ನೋಡುತ್ತಿದ್ದಾರೆ. ಇದಕ್ಕೆ ಪೂರಕವೆಂಬತೆ ಗೆಬರ್ಹದಲ್ಲಿ ವಿಕೆಟ್ ಕೀಪಿಂಗ್ ಸಹ ನಡೆಸಿದ್ದಾರೆ. ಅನುಭವಿ ಕ್ವಿಂಟನ್ ಡಿ ಕಾಕ್ ನಿವೃತ್ತಿ ಬಳಿಕ ಎಡಗೈ ಆರಂಭಿಕನ ಹುಡುಕಾಟದಲ್ಲಿದ್ದ ದ.ಆಫ್ರಿಕಾಗೆ ಟೋನಿ ಡಿ ಜಾರ್ಜಿ ಉತ್ತಮ ಆಯ್ಕೆ ಎನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts