More

    ಬಿಜೆಪಿಯ 195 ಅಭ್ಯರ್ಥಿಗಳಿಗೆ ಶುಭ ಹಾರೈಕೆ: ವಾರಣಾಸಿ ಜನರ ಸೇವೆ ಮಾಡಲು ಉತ್ಸುಕನಾಗಿದ್ದೇನೆ ಎಂದ ಮೋದಿ

    ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ನಮ್ಮ ಪಕ್ಷವು ಕೆಲವು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಉಳಿದ ಕ್ಷೇತ್ರಗಳಿಗೆ ಘೋಷಿಸಲಿದೆ. ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಎಲ್ಲರನ್ನು ನಾನು ಅಭಿನಂದಿಸುತ್ತೇನೆ ಮತ್ತು ಅವರಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

    ಇದನ್ನೂ ಓದಿ: ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಬರೋಬ್ಬರಿ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಭಾರತೀಯ ಜನತಾ ಪಕ್ಷ ಘೋಷಿಸಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಟ್ಟೀಟ್​ ಮಾಡಿರುವ ಪ್ರಧಾನಿ ಮೋದಿ ಅವರು, ಉತ್ತಮ ಆಡಳಿತದ ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ನಾವು ಜನರ ಬಳಿಗೆ ಹೋಗುತ್ತಿದ್ದೇವೆ. ಸರ್ಕಾರ ಯೋಜನೆಗಳನ್ನು ದೇಶದ ತಿಳಿಸಬೇಕು ಎಂದರು.

    ಭಾರತದ 140 ಕೋಟಿ ಜನರು ಮತ್ತೊಮ್ಮೆ ನಮ್ಮನ್ನು ಆಶೀರ್ವದಿಸುತ್ತಾರೆ ಮತ್ತು ಅವರ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ವಿಕಸಿತ ಭಾರತವನ್ನು ರಚಿಸಲು ನಮಗೆ ಇನ್ನಷ್ಟು ಶಕ್ತಿಯನ್ನು ನೀಡುತ್ತಾರೆ ಎಂಬ ಅಪಾರ ನಂಬಿಕೆ ನನಗೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ವಾರಣಾಸಿಯಿಂದ ಪ್ರಧಾನಿಮೋದಿ ಸ್ಪರ್ಧೆ!: ಬಾಬಾ ವಿಶ್ವನಾಥ್ ನಗರ ಕಾಶಿಯಲ್ಲಿ ಮೂರನೇ ಬಾರಿಗೆ ನನ್ನ ಕುಟುಂಬ ಸದಸ್ಯರ ಸೇವೆ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಕೇಂದ್ರ ಬಿಜೆಪಿ ನಾಯಕತ್ವಕ್ಕೆ ತುಂಬಾ ಧನ್ಯವಾದಗಳು. ಇದರೊಂದಿಗೆ, ನಿರಂತರವಾಗಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪಕ್ಷದ ಕೋಟ್ಯಂತರ ನಿಸ್ವಾರ್ಥ ಕಾರ್ಯಕರ್ತರಿಗೆ ನಾನು ನಮಸ್ಕರಿಸುತ್ತೇನೆ ಎಂದು ಹೇಳಿದರು.

    2014ರಲ್ಲಿ ನಾನು ಜನರ ಕನಸುಗಳನ್ನು ನನಸು ಮಾಡುವ ಮತ್ತು ಬಡವರ ಬಡವರ ಸಬಲೀಕರಣದ ಸಂಕಲ್ಪದೊಂದಿಗೆ ಕಾಶಿಗೆ ಹೋಗಿದ್ದೆ. ಕಳೆದ 10 ವರ್ಷಗಳಲ್ಲಿ, ನಾವು ಕಾಶಿಯನ್ನು ಪುನಶ್ಚೇತನಗೊಳಿಸಲು ವಿವಿಧ ಕ್ಷೇತ್ರಗಳಲ್ಲಿ ತ್ವರಿತ ಪ್ರಗತಿ ಸಾಧಿಸಿದ್ದೇವೆ. ಅಭಿವೃದ್ಧಿಯ ಈ ಸರ್ವತೋಮುಖ ಪ್ರಯತ್ನದಲ್ಲಿ ನಾನು ಮುಂದಿರುತ್ತೇನೆ. ಕಾಶಿಯ ನನ್ನ ಸಹೋದರರು ಮತ್ತು ಸಹೋದರಿಯರು ನನಗೆ ನೀಡಿದ ಅಪಾರ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

    ಹೋಟೆಲ್​ ಕೆಲಸ ಮಾಡುತ್ತಲೇ ಲೆಕ್ಚರರ್ ಆದ ಮಹಿಳೆ: ಏಕಕಾಲಕ್ಕೆ ಎರಡು ಸರ್ಕಾರಿ ಉದ್ಯೋಗ ಪಡೆದ ಸಾಧಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts