More

  VIDEO| ಹೊಸ ವೇಷದಲ್ಲಿ ಮರಳಿದ ಕಣ್ಸನ್ನೆ ಬೆಡಗಿ ಇನ್​ಸ್ಟಾಗ್ರಾಂನಿಂದ ಕಾಣೆಯಾಗಿದ್ದಕ್ಕೆ ಕಾರಣ ಬಿಚ್ಚಿಟ್ರು!

  ಕೊಚ್ಚಿ: ಇಂಟರ್ನೆಟ್​ ಸೆನ್ಸೇಷನ್​ ಆಗಿರುವ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್​​ ಇನ್​ಸ್ಟಾಗ್ರಾಂನಲ್ಲಿ ದಾಖಲೆಯ ಫಾಲೋವರ್ಸ್​ ಹೊಂದಿದ್ದಾರೆ. ಹೀಗಿರುವಾಗ ಕರೊನಾ ವೈರಸ್​ ಲಾಕ್​ಡೌನ್​ ನಡುವೆಯೇ ಮೇ ತಿಂಗಳಲ್ಲಿ ಇನ್​ಸ್ಟಾಗ್ರಾಂಗೆ ಬೈ ಹೇಳಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು.

  ಇದನ್ನೂ ಓದಿ: ಚಿಕಿತ್ಸೆ ನೀಡುತ್ತಾ ಕರೊನಾ ಸೋಂಕಿಗೆ ಒಳಗಾಗಿ ಚರ್ಮದ ಬಣ್ಣವೇ ಕಪ್ಪಾಗಿದ್ದ ಚೀನಾ ವೈದ್ಯ ಮೃತ

  ಮಲಯಾಳಂನ “ಒರು ಅಡಾರ್​ ಲವ್​” ಚಿತ್ರದ ಕಣ್ಸನ್ನೆ ದೃಶ್ಯದಿಂದ ರಾತ್ರೋರಾತ್ರಿ ಇಂಟರ್ನೆಟ್​ ಸೆನ್ಸೇಷನ್​ ಆಗಿ ಹೊರಹೊಮ್ಮಿದ ಪ್ರಿಯಾ ನ್ಯಾಶನಲ್​ ಕ್ರಶ್​ ಎಂಬ ಹೆಸರು ಗಳಿಸಿದ್ದಲ್ಲದೇ, 7.3 ಮಿಲಿಯನ್​ ಫಾಲೋವರ್ಸ್​ಗಳನ್ನು ಪಡೆಯುವ ಮೂಲಕ ಸ್ಟಾರ್​ ನಟ-ನಟಿಯರನ್ನೇ ಹಿಂದಿಕ್ಕಿದ್ದಾರೆ.

  ಮೇನಲ್ಲಿ ಇನ್​ಸ್ಟಾಗ್ರಾನಿಂದ ಸರಿದುಕೊಂಡಿದ್ದ ಪ್ರಿಯಾ ಇದೀಗ ಎರಡು ವಾರಗಳ ನಂತರ ಮರಳಿ ಗೂಡಿಗೆ ಬಂದಿದ್ದಾರೆ. ಸೋಮವಾರವಷ್ಟೇ ಇನ್​ಸ್ಟಾಗ್ರಾಂ ಖಾತೆ ಆಕ್ಟಿವೇಟ್​ ಮಾಡಿಕೊಂಡಿರುವ ಪ್ರಿಯಾ ಸ್ವಲ್ಪ ಸಮಯ ದಿಢೀರನೇ ದೂರ ಉಳಿಯಲು ಕಾರಣ ಏನೆಂಬುದನ್ನು ಬಿಚ್ಚಿಟ್ಟಿದ್ದಾರೆ.

  ಇನ್​ಸ್ಟಾಗ್ರಾಂನಿಂದ ನಾನು ವಿರಾಮ ಪಡೆಯಲು ಬಯಸಿದ್ದೆ. ಕೇವಲ ಎರಡು ವಾರಗಳ ಸಮಯ ಆಗಿದ್ದರೂ ಸಹ ಸಾಕಷ್ಟು ಎಂಜಾಯ್​ ಮಾಡಿದ್ದೇನೆ ಹಾಗೂ ತುಂಬಾ ಆರಾಮದಾಯಕ ಸಮಯವೂ ಆಗಿತ್ತು. ಲಾಕ್​ಡೌನ್​ ಸಮಯದಲ್ಲಿ ಲೈಕ್ಸ್​, ಫಾಲೋವರ್ಸ್​ ಮತ್ತು ಕಮೆಂಟ್​ಗಳಿಂದ ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ಹೀಗಾಗಿ ಅದರಿಂದ ಕೊಂಚ ವಿರಾಮ ಪಡೆಯುವುದು ಅಗತ್ಯವೆನಿಸಿತು ಎಂದು ಕಾರಣ ತಿಳಿಸಿದ್ದಾರೆ.

  ಇದನ್ನೂ ಓದಿ: 12 ಲಕ್ಷ ರೂಪಾಯಿ ಬೆಲೆಯ ಸೈಕಲ್!

  ಇದೇ ವೇಳೆ ಟ್ರೋಲ್​​ಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾ, ನಾನು ಆರೋಗ್ಯಯುತ ಟ್ರೋಲ್​ಗಳಿಗೆ ಬೆಂಬಲ ನೀಡುತ್ತೇನೆ. ಆದರೆ, ಟ್ರೋಲ್​ ಹೆಸರಿನಲ್ಲಿ ಕೆಟ್ಟ ಪದಗಳನ್ನು ಬಳಸುವುದನ್ನು ಟೀಕಿಸುತ್ತೇನೆ. ಒಳ್ಳೆಯ ಟ್ರೋಲ್​ಗೆ ನನ್ನ ಸ್ವಾಗತವಿದೆ. ಆದರೆ, ಕೆಟ್ಟ ಟ್ರೋಲ್​ ಕೆಟ್ಟ ಪರಿಣಾಮವನ್ನೇ ಬೀರುತ್ತದೆ. ಅವು ತುಂಬಾ ತೊಂದರೆ ನೀಡುತ್ತವೆ ಎಂದರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts