More

    ಈ ಕಾರಣಕ್ಕೆ ಇನ್ಸ್ಟಾಗ್ರಾಂ ಡಿ-ಆ್ಯಕ್ಟಿವೇಟ್​ ಮಾಡಿದ್ರಾ ಕಣ್ಸನ್ನೆ ಹುಡುಗಿ ಪ್ರಿಯಾ!

    ಒಂದೇ ಒಂದು ಕಣ್ಸನ್ನೇ ಇಡೀ ದೇಶದ ನಿದ್ದೆಗೆಡಿಸಿತ್ತು. ರಾತ್ರೋರಾತ್ರಿ ದಕ್ಷಿಣ ಭಾರತದ ಹುಡುಗಿ ಸೆನ್ಷೆಷನ್​ ಸ್ಟಾರ್ ಆಗಿ ಬೆಳೆದರು. ಅವರ ಸಾಮಾಜಿಕ ಜಾಲತಾಣದಲ್ಲೂ ಲಕ್ಷ ಲಕ್ಷ ಫಾಲೋವರ್ಸ್​. ಆದರೆ, ಇದೀಗ ಇದೇ ಕಣ್ಸನ್ನೆ ಹುಡುಗಿ ಇನ್ಸ್​ಸ್ಟಾಗ್ರಾಂ ಅನ್ನು ಡಿಆ್ಯಕ್ಟಿವೇಟ್​ ಮಾಡಿದ್ದಾರೆ. ಹಾಗೆ ಮಾಡಿದ್ದಕ್ಕೆ ಕಾರಣವೂ ಇಲ್ಲಿದೆ.
    ಪ್ರಿಯಾ ಪ್ರಕಾಶ್​ ವಾರಿಯರ್​ ಎಂದರೆ ಇಡೀ ದೇಶಕ್ಕೆ ಗೊತ್ತು. ಒರು ಅಡಾರ್​ ಲವ್​ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ, ಸಣ್ಣ ವಿಡಿಯೋ ತುಣುಕಿನಿಂದ ವಿಂಕ್​ ಗರ್ಲ್​ ಎಂದೇ ಖ್ಯಾತಿಯಾದವರು. ಬಳಿಕ ಹಲವು ಸಿನಿಮಾಗಳಲ್ಲೂ ಪ್ರಿಯಾ ನಟಿಸಿದರು. ಕನ್ನಡದ ಎರಡು ಸಿನಿಮಾ ಕೆಲಸಗಳೂ ನಡೆಯುತ್ತಿವೆ.

    ಇದನ್ನೂ ಓದಿ: ಪವರ್​ಸ್ಟಾರ್​ಗೆ ಪುಟಾಣಿ ಅಭಿಮಾನಿಯ ಪತ್ರ; ಸುದೀರ್ಘ ಪತ್ರದಲ್ಲಿ ಏನೇನಿದೆ?

    ಹೀಗಿರುವಾಗಲೇ ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ ಏಳು ಮಿಲಿಯನ್​ಗೂ ಅಧಿಕ ಫಾಲೋವರ್ಸ್ ಹೊಂದಿದ್ದ ಪ್ರಿಯಾ, ಶನಿವಾರ ತಮ್ಮ ಖಾತೆಯನ್ನು ನಿಷ್ಕ್ರೀಯಗೊಳಿಸಿದ್ದಾರೆ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
    ಹಾಗಾದರೆ, ಅವರ ಖಾತೆ ನಿಷ್ಕ್ರೀಯಗೊಳ್ಳಲು ಕಾರಣವಾದ್ರೂ ಏನು? ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಟ್ರೋಲ್​ಗೆ ಒಳಗಾಗುತ್ತಿರುವುದರಿಂದ, ಕೆಲವರು ಪ್ರಿಯಾ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಎಲ್ಲೆಂದರಲ್ಲಿ ಅಪ್​ಲೋಡ್​ ಮಾಡುತ್ತಿರುವುದರಿಂದ ರೋಸಿ ಹೋಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಜಾಲತಾಣಗಳಿಂದ ತಾತ್ಕಾಲಿಕ ಬ್ರೇಕ್​ ಪಡೆದುಕೊಳ್ಳುವುದಕ್ಕೆ ಪ್ರೀಯಾ ಈ ರೀತಿ ಮಾಡಿದ್ದಾರೆ ಎಂದೂ ಸುದ್ದಿ ಹರಿದಾಡುತ್ತಿದೆ. (ಏಜೆನ್ಸೀಸ್​)

    ಕಡುಗೆಂಪು ಸೀರೆಯಲ್ಲಿ ಕೆಂದಾವರೆ ಮಾರಲು ಹೊರಟ ಶ್ರದ್ಧಾ ಶ್ರೀನಾಥ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts