More

    ಬಾರ್​ಗಳ ಮುಂದೆ ಮಹಿಳೆಯರದ್ದೂ ಕಾರುಬಾರು!

    ಬೆಂಗಳೂರು: ಈಗ ಎಲ್ಲೆಲ್ಲೂ ಮದ್ಯದ್ದೇ ಸದ್ದು. ಮದ್ಯವೆಲ್ಲಿ ಖಾಲಿಯಾಗಿ ಹೋಗತ್ತೋ ಎಂದುಕೊಂಡು ನಿನ್ನೆ ಬೆಳಗ್ಗೆಯಿಂದಲೇ ಮದ್ಯಪ್ರೇಮಿಗಳು ಬಿಸಿಲು, ಮಳೆ ಎನ್ನದೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆಯನ್ನೂ ಮಾಡದೇ ಮದ್ಯದ ಬಗ್ಗೆಯೇ ಚಿಂತಿಸುತ್ತ ಭಕ್ತಿಯಿಂದ ಕಾಯುತ್ತಿದ್ದ ದೃಶ್ಯ ರಾಜ್ಯದ ಬಹುತೇಕ ಮದ್ಯದ ಮಳಿಗೆಗಳ ಎದುರು ಕಂಡುಬಂದಿದೆ.

    ಕೆಲವೊಂದು ಪ್ರಸಿದ್ಧ ದೇವಾಲಯಗಳ ಎದುರು ಹಬ್ಬದ ದಿನಗಳಲ್ಲಿ ಕಿಲೋಮೀಟರ್​ಗಟ್ಟಲೆ ಕ್ಯೂ ನಿಲ್ಲುವಂತೆ, ಮದ್ಯದ ಭಕ್ತರು ತಮ್ಮ ಇಷ್ಟದ ಬ್ರ್ಯಾಂಡ್​ ಪಡೆಯಲು ಈ ರೀತಿ ನಿಂತಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ ಯುವ ಜನರ ಮೇಲೆ ಕರೊನಾ ಮುನಿಸು- ಅಧಿಕ ಪ್ರಕರಣ ದಾಖಲು!

    ಇನ್ನೊಂದೆಡೆ, ಮದ್ಯದಂಗಡಿಗಳನ್ನು ತೆರೆಯಬೇಡಿ, ನಮ್ಮ ಯಜಮಾನ, ಮಗನನ್ನು ಹುಡುಕರನ್ನಾಗಿ ಮಾಡಬೇಡಿ, ನಮ್ಮ ಸಂಸಾರವನ್ನು ಬೀದಿಗೆ ತರಬೇಡಿ, ಒಂದು ತಿಂಗಳಿನಿಂದ ಮದ್ಯ ಇಲ್ಲದೇ ಬದುಕಿದವರು, ಮುಂದೆಯೂ ಬದುಕುತ್ತಾರೆ ಎಂದೆಲ್ಲಾ ಹಲವಾರು ಮಹಿಳೆಯರು ರೋಧಿಸುತ್ತಿರುವ ದೃಶ್ಯವೂ ಸಾಮಾನ್ಯವಾಗಿದೆ. ಆದರೆ ರಾಜ್ಯದ ಬೊಕ್ಕಸಕ್ಕೆ ತೀವ್ರ ನಷ್ಟ ಉಂಟಾಗಿರುವ ಕಾರಣ, ಮದ್ಯದಂಗಡಿ ತೆರೆಯಲೇಬೇಕು ಎಂದು ಸರ್ಕಾರ ತೀರ್ಮಾನಿಸಿದ್ದೂ ಆಯ್ತು, ಅಂಗಡಿಗಳನ್ನು ತೆರೆಯೂ ಆಯ್ತು.

    ಆದರೆ ಅದೇ ಮತ್ತೊಂದೆಡೆ, ಪುರುಷರಿಗೆ ತಾವೇನೂ ಕಮ್ಮಿ ಎನ್ನುವಂತೆ ರಾಜ್ಯದ ಬಹುತೇಕ ಬಾರ್​ಗಳ ಮುಂದೆ ಯುವತಿಯರು ಹಾಗೂ ಮಹಿಳೆಯರು ಸಾಲಿನಲ್ಲಿ ನಿಂತಿರುವ ದೃಶ್ಯವೂ ಕಂಡುಬಂದಿದೆ. ಇದರ ಪೈಕಿ ಹೆಚ್ಚಿನವರು ಯುವತಿಯರೇ. ಬೆಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕೆಲವು ಕಡೆಗಳಲ್ಲಿ ಇಂಥ ದೃಶ್ಯಗಳು ಕಂಡುಬಂದಿವೆ.

    ಇದನ್ನೂ ಓದಿ: ಆಟದಲ್ಲಿ ಸೋಲ್ತಾ ಇದ್ದೇನೆಂದು ಹೆಂಡ್ತಿ ಸೊಂಟ ಮುರಿಯೋದಾ? ಅಬ್ಬಬ್ಬಾ ಈ ಪತಿ ಮಹಾಶಯ!

    ಈಗ ಹೇಗಿದ್ದರೂ ಮುಖಕ್ಕೆ ಮಾಸ್ಕ್​ ಇದೆಯಲ್ಲ, ತಮ್ಮನ್ನು ಸುಲಭದಲ್ಲಿ ಗುರುತಿಸುವುದು ಕಷ್ಟ ಎಂದುಕೊಂಡೋ ಏನೋ, ಯಾವ ಮುಜುಗರವೂ ಇಲ್ಲದೇ ಯುವತಿಯರು ಕೆಲವು ಕಡೆಗಳಲ್ಲಿ ಸರತಿಯಲ್ಲಿ ನಿಂತಿದ್ದಾರೆ. ಇನ್ನು ಕೆಲವು ವರ್ಗದ ಯುವತಿಯರಿಗೆ ಮದ್ಯ ಸೇವನೆ ಹೊಸ ವಿಷಯವಲ್ಲ. ಆದ್ದರಿಂದ ಅವರೂ ಯಾರಿಗೂ ಕ್ಯಾರೇ ಅನ್ನದೆ ಆರಾಮಾಗಿ ನಿಂತುಕೊಂಡಿದ್ದರು.

    ಇನ್ನು ಬೆಂಗಳೂರು ಎಂದ ಮೇಲೆ ಕೇಳಬೇಕೆ? ಹೈಫೈ ಸ್ಥಳಗಳಲ್ಲಿ ಇರುವ ಬಹುತೇಕ ಮದ್ಯದಂಗಡಿ ಎದುರು ಮಹಿಳಾಮಣಿಗಳದ್ದೇ ಕಾರುಬಾರು. ರಾತ್ರಿ ಸರಿಯಾಗಿ ನಿದ್ದೆಯನ್ನೂ ಮಾಡದೇ ನಸುಕಿನಲ್ಲಿಯೇ ನಿದ್ದೆಗಣ್ಣಿನಲ್ಲಿ ಎದ್ದು ಬಂದು ಸರತಿಯಲ್ಲಿ ನಿಂತಿರುವ ದೃಶ್ಯ ಅನೇಕ ಕಡೆಗಳಲ್ಲಿ ಕಂಡುಬಂದಿದೆ.

    ಇದನ್ನೂ ಓದಿ: ವಿಮಾನಕ್ಕಾಗಿ ಕಾಯ್ತಾ ಇದ್ದೀರಾ? ಬೆಲೆ ನೋಡೋ ಮೊದ್ಲು ಎದೆ ಗಟ್ಟಿ ಮಾಡ್ಕೊಳಿ

    ಅಂತೂ ಅದೆಷ್ಟು ಮಂದಿ, ಮದ್ಯವಿಲ್ಲದೇ ಪರಿತಪಿಸುತ್ತಿದ್ದರು ಎಂಬ ಸತ್ಯ ಇದೀಗ ಸಾಕ್ಷಿ ರೂಪದಲ್ಲಿ ಸಿಗುತ್ತಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts