More

    ಮತ್ತೆ ದೊರೆಯಿತು ವಿಂಡ್ ಟರ್ಬೈನ್ ಜನರೇಟರ್‌ ಗುತ್ತಿಗೆ: ಪವನ ಶಕ್ತಿ ಕಂಪನಿ ಷೇರು ಖರೀದಿಗೆ ಮುಗಿಬಿದ್ದ ಹೂಡಿಕೆದಾರರು

    ಮುಂಬೈ: ಪವನ ಶಕ್ತಿ ಪರಿಹಾರ ಪೂರೈಕೆದಾರ ಐನಾಕ್ಸ್ ವಿಂಡ್ ಲಿಮಿಟೆಡ್​ (Inox Wind Ltd.) ಮತ್ತೊಮ್ಮೆ ಹೀರೋ ಫ್ಯೂಚರ್ ಎನರ್ಜಿಸ್ (ಎಚ್‌ಎಫ್‌ಇ) ನಿಂದ ದೊಡ್ಡ ಆರ್ಡರ್​ ಪಡೆದುಕೊಂಡಿದೆ. ಈ ಕಾಮಗಾರಿ ಆದೇಶದ ಪ್ರಕಾರ, ಕಂಪನಿಯು 210 ಮೆಗಾ ವ್ಯಾಟ್‌ನ ಗುತ್ತಿಗೆಯನ್ನು ಪಡೆದುಕೊಂಡಿದೆ. ಇದಲ್ಲದೆ,ಈ ಕಾಮಗಾರಿ ಪೂರ್ಣಗೊಂಡ ನಂತರ ಬಹು-ಹಂತದ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಸೇವೆಗಳನ್ನು ಸಹ ಒದಗಿಸುತ್ತದೆ.

    ಈ ಒಪ್ಪಂದವು (IWL) ಐನಾಕ್ಸ್ ವಿಂಡ್ ಲಿಮಿಟೆಡ್‌ನ ಅತ್ಯಾಧುನಿಕ ಮೂರು MW ವಿಂಡ್ ಟರ್ಬೈನ್ ಜನರೇಟರ್​ಗೆ (WTG) ಸಂಬಂಧಿಸಿದ್ದಾಗಿದೆ. ಕೆಲವು ಇತರ ಸೇವೆಗಳೊಂದಿಗೆ ಸಲಕರಣೆ ಸರಬರಾಜುಗಳನ್ನು ಕೂಡ ಈ ಒಪ್ಪಂದ ಒಳಗೊಂಡಿದೆ.

    ಐನಾಕ್ಸ್ ವಿಂಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕೈಲಾಶ್ ತಾರಾಚಂದಾನಿ, “ನಮ್ಮ ದೀರ್ಘಕಾಲದ ಪಾಲುದಾರ ಹೀರೋ ಫ್ಯೂಚರ್ ಎನರ್ಜಿಸ್‌ನಿಂದ 210 ಮೆಗಾವ್ಯಾಟ್ ಗುತ್ತಿಗೆಯನ್ನು ಮತ್ತೆ ಪಡೆದುಕೊಂಡಿರುವುದನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ಈ ಒಪ್ಪಂದವು 3MW WTG ನಲ್ಲಿ ನಮ್ಮ ವಿಶ್ವಾಸವನ್ನು ಬಲಪಡಿಸುತ್ತದೆ, ಇದು ಈ ವರ್ಗದ ಅತ್ಯಂತ ಪರಿಣಾಮಕಾರಿ ಟರ್ಬೈನ್‌ಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ.

    ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ, ಹೂಡಿಕೆದಾರರು ಐನಾಕ್ಸ್ ವಿಂಡ್ ಲಿಮಿಟೆಡ್ ಷೇರುಗಳ ಖರೀದಿಗೆ ಮುಗಿಬಿದ್ದರು. ಶುಕ್ರವಾರ ಈ ಷೇರಿನ ಬೆಲೆ 569.05 ರೂ.ಗೆ ತಲುಪಿತ್ತು. ಇದು ಹಿಂದಿನ ದಿನಕ್ಕೆ ಹೋಲಿಸಿದರೆ ಅಂದಾಜು 5 ಪ್ರತಿಶತದಷ್ಟು ಹೆಚ್ಚಳವಾಗಿದೆ.

    ಕಂಪನಿಯು ದೊಡ್ಡ ವಾಣಿಜ್ಯ ಮತ್ತು ಕೈಗಾರಿಕಾ ಆಟಗಾರರಿಂದ 279 MW ನ ದೊಡ್ಡ ಆದೇಶವನ್ನು ಪಡೆಯಿತು. ಅದೇ ರೀತಿ, ನವರತ್ನ CPSU ಅಂದರೆ NLC ಇಂಡಿಯಾದಿಂದ 50 MW ನ ಆದೇಶವನ್ನು ಸ್ವೀಕರಿಸಲಾಗಿದೆ ಮತ್ತು CESC ನಿಂದ 1,500 MW ನ ಅತಿದೊಡ್ಡ ಮೆಗಾ ಆರ್ಡರ್ ಅನ್ನು ಸ್ವೀಕರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts