More

    ಬಾಲಿವುಡ್​ನಲ್ಲಿ ಬಿಡುಗಡೆಯಾಗಲಿರುವ ಮೊದಲ ದೊಡ್ಡ ಚಿತ್ರ ಯಾವುದು?

    ಮುಂಬೈ: ಲಾಕ್​ಡೌನ್​ ನಂತರ ಎಲ್ಲಾ ಭಾಷೆಗಳಲ್ಲೂ ದೊಡ್ಡ ಬಜೆಟ್​ನ ಮತ್ತು ಸ್ಟಾರ್​ ನಟರ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಹಿಂದೇಟು ಹಾಕಿದ್ದವು. ಜನರು ಚಿತ್ರಮಂದಿರಕ್ಕೆ ಬರುತ್ತಾರಾ ಎಂಬ ಸಂಶಯದಲ್ಲಿ ಕಳೆದ ವರ್ಷ ಬಿಡುಗಡೆಯಾಗಬೇಕಿದ್ದ ಎಲ್ಲಾ ದೊಡ್ಡ ಚಿತ್ರಗಳು ಈ ವರ್ಷಕ್ಕೆ ಮುಂದೂಡಲ್ಪಟ್ಟವು.

    ಇದನ್ನೂ ಓದಿ: ಆಸ್ಕರ್​ ಸ್ಪರ್ಧೆಗೆ ಎಂಟ್ರಿ ಕೊಟ್ಟ ‘ಸೂರರೈ ಪೋಟ್ರು’

    ಈಗ ಎಲ್ಲಾ ಭಾಷೆಗಳಲ್ಲೂ ದೊಡ್ಡ ಬಜೆಟ್​ನ ಮತ್ತು ಸ್ಟಾರ್​ ಚಿತ್ರಗಳ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಸ್ಯಾಂಡಲ್​ವುಡ್​, ಕಾಲಿವುಡ್​, ಟಾಲಿವುಡ್​ ಹೀಗೆ ಎಲ್ಲಾ ವುಡ್​ಗಳಲ್ಲಿ ದೊಡ್ಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿದರೆ, ಬಾಲಿವುಡ್​ನಲ್ಲಿ ಮಾತ್ರ ಸಲ್ಮಾನ್​ ಖಾನ್​ ಅಭಿನಯದ ‘ರಾಧೇ’ ಚಿತ್ರವೊಂದನ್ನು ಬಿಟ್ಟು, ಬೇರೆ ಯಾರೂ ಚಿತ್ರವನ್ನು ಘೋಷಿಸಿಲ್ಲ.

    ಹಾಗೆ ನೋಡಿದರೆ, ಅಕ್ಷಯ್​ ಕುಮಾರ್​ ಅಭಿನಯದ ‘ಸೂರ್ಯವಂಶಿ’, ರಣವೀರ್​ ಸಿಂಗ್​ ಅಭಿನಯದ ’83’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾವುದಕ್ಕೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷ ಮಾರ್ಚ್​ನಲ್ಲೇ ಈ ಚಿತ್ರಗಳು ಬಿಡುಗಡೆಯಾಗಬೇಕಿದ್ದವು. ಆದರೆ, ಲಾಕ್​ಡೌನ್​ನಿಂದ ಇದುವರೆಗೂ ಬಿಡುಗಡೆಯಾಗುವುದಕ್ಕೆ ಸಾಧ್ಯವಾಗಿಲ್ಲ.

    ಇದೀಗ ಚಿತ್ರಮಂದಿರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಾಜರಾತಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಿರುವುದರಿಂದ, ಯಾವೆಲ್ಲಾ ಚಿತ್ರಗಳು ಬರುತ್ತವೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈಗಾಗಲೇ ‘ರಾಧೇ’ ಚಿತ್ರವು ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಘೋಷಿಸಲಾಗಿದೆ. ಈ ವರ್ಷ ಬಾಲಿವುಡ್​ನಲ್ಲಿ ಅದೇ ಮೊದಲ ದೊಡ್ಡ ಚಿತ್ರವಾಗುತ್ತದೋ ಅಥವಾ ಅದಕ್ಕಿಂತ ಮುಂಚೆ ‘ಸೂರ್ಯವಂಶಿ’, ’83’ ಮುಂತಾದ ಚಿತ್ರಗಳು ಬಿಡುಗಡೆಯಾಗುತ್ತವೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಇದನ್ನೂ ಓದಿ: ಸಿನಿಮಾಗಳಲ್ಲೇ ಮುಳುಗಿದ ಹರಿಪ್ರಿಯಾ

    ಆದರೆ, ಇದುವರೆಗೂ ದೊಡ್ಡ ಬಜೆಟ್​ನ ಮತ್ತು ಸ್ಟಾರ್​ ಚಿತ್ರಗಳ ಯಾವೊಬ್ಬ ನಿರ್ಮಾಪಕರು ಸಹ ಮೊದಲ ಮೂರ್ನಾಲ್ಕು ತಿಂಗಳುಗಳಲ್ಲಿ ತಮ್ಮ ಚಿತ್ರವನ್ನು ಘೋಷಿಸಿಲ್ಲ. ಒಂದು ಪಕ್ಷ ‘ಸೂರ್ಯವಂಶಿ’ ಚಿತ್ರವೇನಾದರೂ ಮುಂದಿನ ಎರಡ್ಮೂರು ತಿಂಗಳುಗಳಲ್ಲಿ ಬಿಡುಗಡೆಯಾದರೆ, ಅದೇ ಈ ವರ್ಷದ ಬಾಲಿವುಡ್​ನ ಮೊದಲ ಬಿಗ್​ ಚಿತ್ರವಾದಂತಾಗುತ್ತದೆ. ಯಾವುದಕ್ಕೂ ಇನ್ನೂ ಒಂದಿಷ್ಟು ದಿನ ಕಾದು ನೋಡಬೇಕಿದೆ.

    ಘೋಷಣೆಯಾಯ್ತು ಅಲ್ಲು ಅರ್ಜುನ್‌ ಅಭಿನಯದ ʻಪುಷ್ಪʼ ಬಿಡುಗಡೆ ದಿನಾಂಕ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts