More

    ಸುನಕ್​ ನೀತಿಗಳಿಗೆ ಸಮ್ಮತಿಸದ ಇಂಗ್ಲೆಂಡ್​ ಸಂಸತ್ತು; ಪ್ರಧಾನಿ ಪಟ್ಟ ಉಳಿಸಿಕೊಳ್ತಾರಾ ಭಾರತದ ಅಳಿಯ?

    ನವದೆಹಲಿ: ನಾವೆಲ್ಲರೂ ಭಾರತದ ಅಳಿಯ ಎಂದೆಲ್ಲ ಕೊಂಡಾಡಿದ್ದ ರಿಷಿ ಸುನಕ್​ ಪ್ರಧಾನಿಯಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಅಷ್ಟರಲ್ಲೇ ಅವರ ಪ್ರಧಾನಿ ಕುರ್ಚಿ ಅಲ್ಲಾಡುತ್ತಿದೆ. ಅವರ ಪಕ್ಷದಲ್ಲೇ ಬೋರಿಸ್​ ಜಾನ್ಸನ್​ರನ್ನು ಮತ್ತೇ ಪ್ರಧಾನಿ ಮಾಡುವ ಆಲೊಚನೆ ಕನ್ಸರ್​ವೇಟಿವ್​ ಪಕ್ಷದ ಒಂದು ಬಣದಲ್ಲಿ ನಡೆಯುತ್ತಿದೆ.

    ರಿಷಿ ಸುನಕ್​ರನ್ನು ಬ್ರಿಟನ್​ನ ಪ್ರಧಾನಿ ಮಾಡಿದ್ದೇ ಅಲ್ಲಿನ ಆರ್ಥಿಕತೆಯನ್ನು ಸರಿ ದಾರಿಗೆ ತರಲು. ಆದರೆ ಈಗ ಅವರ ಕಠಿಣ ಆರ್ಥಿಕ ನೀತಿಗೆ ಅಲ್ಲಿನ ಸಂಸತ್ತಿನಲ್ಲಿ ವಿರೋಧ ವ್ಯಕ್ತ ಆಗ್ತಾ ಇದೆ. ರಿಷಿ ಸುನಕ್​ ಬ್ರಿಟನ್​ನ ಆರ್ಥಿಕತೆಯನ್ನು ಸರಿ ದಾರಿಗೆ ತರಲು ವಾರ್ಷಿಕವಾಗಿ ಒಟ್ಟು 60 ಬಿಲಿಯನ್​ ಡಾಲರ್​ಗಳ ಉಳಿತಾಯ ಮಾಡಬೇಕು ಎಂದು ಸಲಹೆ ನೀಡಿದ್ದರು.

    ಈ ನೀತಿಯ ಪ್ರಕಾರ ಬ್ರಿಟನ್​ 2 ವರ್ಷಗಳ ಕಾಲ ಬ್ರಿಟನ್​ ಯಾವುದೇ ದೇಶಕ್ಕೆ ಫಾರಿನ್​ ಏಡ್​ ನೀಡಬಾರದು. ಈ ಹಣವನ್ನು ತಮ್ಮ ದೇಶದಲ್ಲೇ ಹೂಡಿಕೆ ಮಾಡಿ ಅಭಿವೃದ್ಧಿ ಮಾಡುವುದು ಸುನಕ್​ ಪ್ಲಾನ್​. ಇನ್ನು ಮುಂದಿನ ಹಂತವಾಗಿ ಬ್ರಿಟನ್​ನಲ್ಲಿ ತೆರಿಗೆಯನ್ನು ಹೆಚ್ಚಿಸಿ ಸರ್ಕಾರಿ ಖಜಾನೆಯನ್ನು ತುಂಬಿಸಲು ಸುನಕ್​ ಶ್ರಮ ಪಡುತ್ತಿದ್ದಾರೆ. ಈ ನೀತಿಗೆ ಅಲ್ಲಿನ ಸಂಸತ್ತಿನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಹಿಂದಿನ ಪ್ರಧಾನಿ ಲಿಝ್​ ಟ್ರಸ್​ ತೆರಿಗೆಯಲ್ಲಿ ಕಡಿತ ಮಾಡಿ ಆರ್ಥಿಕತೆಯನ್ನು ಕಾಪಾಡಲು ಮುಂದಾಗಿದ್ದರು. ಆದರೆ ಅದರಿಂದಾಗಿ ಶ್ರೀಮಂತರ ಜೇಬು ಮಾತ್ರ ತುಂಬಿತ್ತು.

    ಇನ್ನು ಬ್ರಿಟನ್​ ಪ್ರಧಾನಿ ಅಲ್ಲಿನ ಹಳ್ಳಿ ಪ್ರದೇಶದಲ್ಲಿ ಕಾಲೊನಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಮೂಲಕ ಅವರ ದೇಶದಲ್ಲೇ ರಿಯಲ್​ ಎಸ್ಟೇಟ್​ ಮೇಲೆ ಹೂಡಿಕೆ ಮಾಡಿ ಅಲ್ಲಿನ ನಿರಾಶ್ರಿತರಿಗೆ ಈ ಮನೆಗಳನ್ನು ನೀಡುವ ಉಪಾಯ ಮಾಡಿದ್ದರು. ಇದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ದೇಶದ ಹಣ ಉಳಿಸಬಹುದು.

    ಈ ಮನೆಗಳನ್ನು ನಗರದ ಪಕ್ಕದಲ್ಲಿರುವ ಹಳ್ಳಿಗಳ ಬಳಿ ಕಟ್ಟುವ ಆಲೊಚನೆಯಲ್ಲಿದ್ದರು. ಆದರೆ ಆ ಹಳ್ಳಿಗಳ ಜನರು ಈ ನೀತಿಯ ಕುರಿತು ಅಸಮಾಧಾನ ಹೊಂದಿದ್ದಾರೆ. ಇವರ ವೋಟ್​ಗಳೇ ಕನ್ಸರ್​ವೇಟಿವ್​ ಪಕ್ಷವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಆ ಕ್ಷೇತ್ರದ ಶಾಸಕರಿಗೂ ಇದು ಸವಾಲಾಗಿದೆ. ಈ ನಡುವೆ ಮರು ಚುನಾವಣೆ ನಡೆಸುವ ಆಲೋಚನೆಗಳೂ ಬ್ರಿಟನ್​ನಲ್ಲಿ ಹೆಚ್ಚಾಗುತ್ತಿದೆ.

    ಹೀಗೆ ಅನೇಕ ಸವಾಲುಗಳ ನಡುವೆ ರಿಷಿ ಸುನಕ್​ ಆಡಳಿತ ನಡೆಸುತ್ತಿದ್ದು ಅವರು ಯಾವ ರೀತಿ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುತ್ತಾರೆ ಎನ್ನುವುದೇ ಕುತೂಹಲದ ಸಂಗತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts