More

    ಆಸ್ಟ್ರೇಲಿಯಾವನ್ನು ಮಣಿಸಲು ಬೇಕು ಒಟ್ಟು 356 ರನ್​ಗಳು; ಈ ಬಾರಿ ಇಂಗ್ಲೆಂಡ್​ ಸೋಲುತ್ತಾ ಇಲ್ಲಾ ಗೆಲ್ಲುತ್ತಾ..?

    ನವದೆಹಲಿ: ಈ ಬಾರಿಯ ಆಸ್ಟ್ರೇಲಿಯಾ ಇಂಗ್ಲೆಂಡ್​ ನಡುವಿನ ಪಂದ್ಯ ಕ್ರಿಕೆಟ್​ ಪ್ರೇಮಿಗಳನ್ನು ಕಾಲ ತುದಿಯ ಮೇಲೆ ನಿಲ್ಲಿಸಿರುವುದು ಸುಳ್ಳಲ್ಲ. ಈಗ ಆಸ್ಟ್ರೇಲಿಯಾ ಬ್ಯಾಟಿಂಗ್​ ಮುಗಿಸಿದ್ದು ಒಟ್ಟು 356 ರನ್​ಗಳ ಗುರಿಯನ್ನು ಇಂಗ್ಲೆಂಡ್​ಗೆ ನೀಡಿದೆ. ಸದ್ಯ ಇಂಗ್ಲೆಂಡ್​ 71 ರನ್​ಗಳನ್ನು ಪಡೆದಿದ್ದು ಇನ್ನೂ 30 ಓವರ್​ಗಳಲ್ಲಿ 293 ರನ್​ಗಳನ್ನು ಪಡೆಯಬೇಕಿದೆ.

    ಅಂದಹಾಗೆ ಆಸ್ಟ್ರೇಲಿಯಾ ಕೇವಲ 5 ವಿಕೆಟ್​ ಕಳೆದುಕೊಂಡು 355 ರನ್​ಗಳಿಸಿತ್ತು. ಆಸ್ಟ್ರೇಲಿಯಾ ಆಟ ಆಡುವ ವೇಳೆ 48ನೇ ಓವರ್​ನಲ್ಲಿ ಡಿಎಲ್​ಎಸ್​ ಅಡ್ಜಸ್ಟ್​ಮೆಂಟ್​ ಮಾಡಬೇಕಾದ ಕಾರಣ ಅವರು ಬ್ಯಾಟಿಂಗ್​ ನಿಲ್ಲಿಸಬೇಕಾಯಿತು. ಆದರೆ ಇದರಿಂದ ಇಂಗ್ಲೆಂಡ್​ಗೆ ಏನೂ ಪ್ರಯೋಜನ ಆದ ಹಾಗೆ ಕಾಣುತ್ತಿಲ್ಲ. 19 ಓವರ್​ಗಳು ಮುಗಿದಿದ್ದರೂ ಇನ್ನೂ ಇಂಗ್ಲೆಂಡ್​​ನ ರನ್​ ರೇಟ್​ 3.83 ಇದೆ. ಆದರೆ ಅವರು ಈ ಪಂದ್ಯವನ್ನು ಗೆಲ್ಲಬೇಕು ಎಂದಿದ್ದರೆ ಪ್ರತೀ ಓವರ್​ಗೆ 10.2 ರನ್​ಗಳನ್ನು ಪಡೆಯುವುದು ಅನಿವಾರ್ಯ. ಸದ್ಯದ ವೇಗದಲ್ಲೇ ಇಂಗ್ಲೆಂಡ್​ ಆಟವಾಡಿದರೆ ಹೀನಾಯ ಸೋಲು ಖಚಿತ.

    19ನೇ ಓವರ್​ನಲ್ಲಿ ವಿನ್ಸ್​ ಮತ್ತು ಮೊಯೀನ್​ ಆಡುತ್ತಿದ್ದು ವಿನ್ಸ್​ 14 ರನ್​ ಗಳಿಸಿದ್ದರೆ ಮೊಯೀನ್​ 5 ರನ್​ ಗಳಿಸಿದ್ದಾರೆ. 20ನೇ ಓವರ್​ಗೆ ಪಂದ್ಯ ಕಾಲಿಟ್ಟಿದ್ದರೂ ಬ್ಯಾಟ್ಸ್​ಮನ್​ಗಳು ವೇಗ ಪಡೆದುಕೊಂಡಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts