More

    ಚಿರು ಚಿತ್ರಗಳಿಗೆ ಡಬ್​ ಮಾಡ್ತಾರಾ ಧ್ರುವ ಸರ್ಜಾ?

    ಚಿರಂಜೀವಿ ಸರ್ಜಾ ಅಭಿನಯದ ಚಿತ್ರಗಳ ಮುಂದಿನ ಕಥೆ ಏನು?

    ಕಳೆದ ನಾಲ್ಕು ದಿನಗಳಿಂದ ಈ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಪ್ರಮುಖವಾಗಿ ಚಿರಂಜೀವಿ ಸರ್ಜಾ ಅಭಿನಯದ ರಾಜ ಮಾರ್ತಾಂಡ ಮತ್ತು ಕ್ಷತ್ರಿಯ ಚಿತ್ರಗಳೆರಡೂ ಪ್ರೊಡಕ್ಷನ್​ ಹಂತದಲ್ಲಿದೆ. ಈ ಪೈಕಿ ರಾಜ ಮಾರ್ತಾಂಡ ಚಿತ್ರೀಕರಣ ಸಂಪೂರ್ಣವಾಗಿ, ಚಿರು ಡಬ್ಬಿಂಗ್​ ಮಾತ್ರ ಬಾಕಿ ಇತ್ತಂತೆ. ಇನ್ನು ಕ್ಷತ್ರಿಯ ಚಿತ್ರದ ಅರ್ಧ ಚಿತ್ರೀಕರಣವಾಗಿದ್ದು, ಆ ಪೈಕಿ ಮೊದಲಾರ್ಧದ ಸಂಪೂರ್ಣವಾಗಿ ಡಬ್ಬಿಂಗ್​ ಸಹ ಮಾಡಿದ್ದರಂತೆ.

    ಇದನ್ನೂ ಓದಿ: ವರ್ಷಾರಂಭದಿಂದ ಚಿರಂಜೀವಿ ಸರ್ಜಾ ಹೆಸರು ಬದಲಾಗಿತ್ತು, ಗಮನಿಸಿದ್ದೀರಾ?

    ಈಗ ಆ ಚಿತ್ರಗಳು ಹೇಗೆ ಮುಂದುವರೆಯುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಏಕೆಂದರೆ, ರಾಜ ಮಾರ್ತಾಂಡ ಚಿತ್ರದಲ್ಲಿ ಚಿರು ಇದ್ದಾರಾದರೂ, ಅವರ ಮಾತುಗಳಿಲ್ಲ. ಕೆಲವು ದಿನಗಳ ಹಿಂದಷ್ಟೇ ಚಿರು, ರಾಜ ಮಾರ್ತಾಂಡ ಚಿತ್ರವನ್ನು ನೋಡಿ, ಸದ್ಯದಲ್ಲೇ ಡಬ್ಬಿಂಗ್​ ಮಾಡುವುದಾಗಿ ಹೇಳಿದ್ದರಂತೆ. ಆದರೆ, ಅಷ್ಟರಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕ್ಷತ್ರಿಯ ಚಿತ್ರಕ್ಕೆ ಚಿರು ಅವರೇ ಮೊದಲಾರ್ಧದ ಅರ್ಧ ಡಬ್ಬಿಂಗ್​ ಮುಗಿಸಿಕೊಟ್ಟಿದ್ದಾರೆ. ಹಾಗಾಗಿ ಇನ್ನುಳಿದ ಭಾಗದ ಡಬ್ಬಿಂಗ್​ ಕಥೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜ.

    ಈ ಮಧ್ಯೆ ಕನ್ನಡ ಚಿತ್ರರಂಗ ಧ್ರುವ ಸರ್ಜಾ ಕಡೆ ನೋಡುತ್ತಿದೆ. ಚಿರಂಜೀವಿ ಸರ್ಜಾ ಬಾಕಿ ಉಳಿಸಿದ ಡಬ್ಬಿಂಗ್​ ಕೆಲಸವನ್ನು ಧ್ರುವ ಮುಗಿಸಿಕೊಡುತ್ತಾರಾ ಎಂದು ಕುತೂಹಲದಿಂದ ಕಾಯುತ್ತಿದೆ. ಈ ಹಿಂದೆ, ಶಂಕರ್​ ನಾಗ್​ ಅವರ ಅಪಘಾತದಲ್ಲಿ ಅಕಾಲಿಕ ನಿಧನರಾದಾಗ, ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದರು. ಈ ಪೈಕಿ ನಿಗೂಢ ರಹಸ್ಯ ಚಿತ್ರ ಸಹ ಒಂದು. ಆ ಚಿತ್ರಕ್ಕೆ ಶಂಕರ್​ ನಾಗ್​ ಅವರು ಡಬ್ಬಿಂಗ್​ ಮಾಡಿರಲಿಲ್ಲವಾದ್ದರಿಂದ, ಅನಂತ್​ ನಾಗ್​ ಅವರು ಮುಂದೆ ಬಂದು ಡಬ್ಬಿಂಗ್​ ಮುಗಿಸಿಕೊಟ್ಟಿದ್ದರು. ನಿಗೂಢ ರಹಸ್ಯ ಚಿತ್ರದಲ್ಲಿ ಶಂಕರ್​ ನಾಗ್​ ಅವರು ನಟಿಸಿದ್ದರಾದರೂ, ಅವರಿಗೆ ಧ್ವನಿ ನೀಡಿರುವುದು ಅನಂತ್​ ನಾಗ್​.

    ಇದನ್ನೂ ಓದಿ: ಲಾಕ್​ಡೌನ್​ ಅವಧಿಯೇ ಚಿರು ಸಾವಿಗೆ ಮುಳುವಾಯ್ತಾ?; ಅದಕ್ಕೆ ಇಲ್ಲಿದೆ ಕಾರಣ …

    ಚಿರಂಜೀವಿ ಮತ್ತು ಧ್ರುವ ಅವರ ಧ್ವನಿಯಲ್ಲಿ ಹೋಲಿಕೆ ಇರುವುದರಿಂದ, ಈಗ ಚಿರಂಜೀವಿ ಚಿತ್ರಗಳಿಗೆ ಧ್ರುವ ಮುಂದೆ ಬಂದು ಡಬ್ಬಿಂಗ್​ ಮಾಡಿಕೊಡುತ್ತಾರಾ? ಎಂದು ಚಿತ್ರರಂಗ ಕಾಯುತ್ತಿದೆ. ಈ ಕುರಿತು ಎರಡೂ ಚಿತ್ರತಂಡಗಳು ಇನ್ನೂ ಧ್ರುವ ಜತೆಗೆ ಮಾತಾಡಿಲ್ಲವಂತೆ. ಹಾಗಾಗಿ ಈ ಕುರಿತು ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಮುಂದೆ ಮಾತುಕಥೆಗಳಾದ ಮೇಲೆ ಒಂದು ಸ್ಪಷ್ಟ ಚಿತ್ರಣ ಸಿಗಬಹುದೇನೋ?

    ಆದರೂ ಚಿರಂಜೀವಿ ಅವರ ಎರಡು ಚಿತ್ರಗಳಿಗೆ ಧ್ರುವ ಅವರ ಧ್ವನಿ ಇರುತ್ತದೋ ಅಥವಾ ಬೇರೆ ಯಾರಾದರೂ ವೃತ್ತಿಪರ ಕಲಾವಿದರಿಂದ ಡಬ್ಬಿಂಗ್​ ಕೆಲಸ ಮಾಡಿಸಲಾಗುತ್ತದಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಸಾಯಿ ಪಲ್ಲವಿಯವರ ಫಸ್ಟ್​ ಸಿನಿಮಾ ಪ್ರೇಮಂ ಅಲ್ಲ: ಮೊದಲ ಚಿತ್ರದಲ್ಲೇ ಆಗಿತ್ತಂತೆ ಕೆಟ್ಟ ಅನುಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts