More

    ತೆಲಂಗಾಣ ಚುನಾವಣಾ ಫಲಿತಾಂಶದ ನಂತರ ಕಿಂಗ್‌ ಮೇಕರ್ ಆಗ್ತಾರಾ ಓವೈಸಿ?, ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಈ ಸೂಚನೆ!

    ಹೈದರಾಬಾದ್: ತೆಲಂಗಾಣದಲ್ಲಿ ಸಮ್ಮಿಶ್ರ ಸರ್ಕಾರ ಸಾಧ್ಯತೆಯ ಬಗ್ಗೆ ಎಕ್ಸಿಟ್ ಪೋಲ್‌ಗಳು ಸುಳಿವು ನೀಡಿದ್ದು, ಡಿಸೆಂಬರ್ 3 ರಂದು ಪ್ರಕಟವಾಗಲಿರುವ ಚುನಾವಣಾ ಫಲಿತಾಂಶದ ನಂತರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಕಿಂಗ್ ಮೇಕರ್ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ. ಹೆಚ್ಚಿನ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ, ಆದರೆ ಅಂಕಿಅಂಶಗಳ ಪ್ರಕಾರ ಸಮಿಶ್ರ ಸರ್ಕಾರ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.

    ತೆಲಂಗಾಣ ಎಕ್ಸಿಟ್ ಪೋಲ್ ಫಲಿತಾಂಶಗಳು
    ತೆಲಂಗಾಣ ಚುನಾವಣಾ ಫಲಿತಾಂಶದ ಮುನ್ನ, ಆರು ಎಕ್ಸಿಟ್ ಪೋಲ್‌ಗಳ ಪೈಕಿ ನಾಲ್ಕು ಸಮ್ಮಿಶ್ರ ಸರ್ಕಾರ ರಚನೆಯ ಸಾಧ್ಯತೆಯ ಬಗ್ಗೆ ಸುಳಿವು ನೀಡಿವೆ. ತೆಲಂಗಾಣದ ವಿವಿಧ ಎಕ್ಸಿಟ್ ಪೋಲ್‌ಗಳ ಫಲಿತಾಂಶಗಳು ಈ ಕೆಳಗಿನಂತಿವೆ.

    Survey BRS Congress BJP AIMIM
    ABP News-C Voter 38-54 49-65 5-13 5-9
    India TV-CNX 31-47 63-79 2-4 5-7
    Jan ki Baat 40-55 48-64 7-13 4-7
    Republic TV-Matrize 46-56 58-68 4-9 5-7
    Times Now-ETG 37-45 60-70 6-8 5-7
    TV 9 Bharatvarsh – Potstrat 48-58 49-59 5-10 6-8

    ಎಐಎಂಐಎಂ ಹೇಗೆ ಕಿಂಗ್‌ಮೇಕರ್ ಪಾತ್ರ ವಹಿಸುತ್ತದೆ? 
    ತೆಲಂಗಾಣ ಚುನಾವಣಾ ಫಲಿತಾಂಶಕ್ಕೆ ಮುನ್ನ ಎಐಎಂಐಎಂ 4-9 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳುತ್ತಿವೆ. ಬಿಆರ್​ಎಸ್​​​ ಮ್ಯಾಜಿಕ್ ಸಂಖ್ಯೆ 60 ಕ್ಕಿಂತ ಕಡಿಮೆಯಾದರೆ, ಎಐಎಂಐಎಂ ಮೈತ್ರಿಗೆ ಬೆಂಬಲವನ್ನು ನೀಡಬಹುದು. ಬಿಆರ್​​ಎಸ್​​ ಮತ್ತು ಕಾಂಗ್ರೆಸ್ ಎರಡೂ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ವಿಫಲವಾದರೆ, ಎಐಎಂಐಎಂ ಕಿಂಗ್ ಮೇಕರ್ ಆಗಿ ಹೊರಹೊಮ್ಮುತ್ತದೆ. ಆದರೂ ಎಕ್ಸಿಟ್​​​​ ಪೋಲ್​​​​​ ಕೇವಲ ಸೂಚಕವಾಗಿದೆ. ಡಿಸೆಂಬರ್ 3 ರಂದು ಹೊರಬೀಳಲಿರುವ ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶವು ರಾಜ್ಯದಲ್ಲಿ ಯಾವ ಪಕ್ಷವು ಸರ್ಕಾರವನ್ನು ರಚಿಸುತ್ತದೆ ಎಂಬುದನ್ನು ಮಾತ್ರ ನಿರ್ಧರಿಸುತ್ತದೆ.

    ಎರಡು ದಿನಗಳ ನಂತರ ಢಾಕಾದಿಂದ ಕೋಲ್ಕತ್ತಾ ತಲುಪಿದ ನೂತನ MV Rajarhat-C; ‘ಸುಂದರ ಅನುಭವ …’ ಎಂದ ಪ್ರಯಾಣಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts