More

    ಎರಡು ದಿನಗಳ ನಂತರ ಢಾಕಾದಿಂದ ಕೋಲ್ಕತ್ತಾ ತಲುಪಿದ ನೂತನ MV Rajarhat-C; ‘ಸುಂದರ ಅನುಭವ …’ ಎಂದ ಪ್ರಯಾಣಿಕರು

    ಕೋಲ್ಕತ್ತಾ: ಢಾಕಾದ ಹಸ್ನಾಬಾದ್ ಕಾರ್ನಿವಲ್ ಜೆಟ್ಟಿಯಿಂದ ಬುರಿಗಂಗಾ ನದಿಯಲ್ಲಿ ಹೊರಟ, 89 ಪ್ರಯಾಣಿಕರನ್ನು ಹೊತ್ತ ಮೂರು ಅಂತಸ್ತಿನ ಹಡಗು ಎರಡು ದಿನಗಳ ನಂತರ ಶುಕ್ರವಾರ ಮಧ್ಯಾಹ್ನ ಕೋಲ್ಕತ್ತಾದ ಕಿಡ್ಡರ್‌ಪೋರ್ ಡಾಕ್‌ನಲ್ಲಿರುವ ಇಂಡೆಂಚರ್ ಮೆಮೊರಿಯಲ್ ಜೆಟ್ಟಿಯನ್ನು ತಲುಪಿದೆ. ಈ ಜಲಮಾರ್ಗ ಸಾರಿಗೆಯು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವಾಯು ಮತ್ತು ರಸ್ತೆ ಸಂಪರ್ಕ ಕಲ್ಪಿಸುತ್ತದೆ. 300 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಈ ಹಡಗಿನ ಹೆಸರು ಎಂವಿ ರಾಜರಹತ್-ಸಿ (MV Rajarhat-C). 

    “ಹಡಗಿನಲ್ಲಿ ಸುಂದರಬನ್ಸ್‌ನ ಮ್ಯಾಂಗ್ರೋವ್ ಕಾಡಿನ ಮೂಲಕ ಪ್ರಯಾಣಿಸುವುದು ಒಂದು ಸುಂದರ ಅನುಭವವಾಗಿದೆ” ಎಂದು ಢಾಕಾದ ಪ್ರಯಾಣಿಕ ಅಲಾ ಅಮೀನ್ ಹೊಸೈನ್ ಸೊಜೋಲ್ ಹೇಳಿದ್ದಾರೆ. 

    ಈ ಹಡಗಿನ ಉದ್ಘಾಟನೆಗೂ ಮುನ್ನ ಬಾಂಗ್ಲಾದೇಶ ಶಿಪ್ಪಿಂಗ್ ಸೆಕ್ರೆಟರಿ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 13 ರಂದು ಸಭೆ ನಡೆಯಿತು. ಸಭೆಯಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ, ವಿಶೇಷವಾಗಿ ರಾತ್ರಿಯಲ್ಲಿ ಸ್ಥಳೀಯ ಕರಾವಳಿ ಪೊಲೀಸ್ ಠಾಣೆಗಳಿಂದ ಎರಡೂ ಕಡೆಗಳಲ್ಲಿ ಕಟ್ಟುನಿಟ್ಟಾದ ನಿಗಾ ವಹಿಸಲು ನಿರ್ಧರಿಸಲಾಯಿತು. ವಿಶೇಷವಾಗಿ ಜಲ ಸಾರಿಗೆಯಲ್ಲಿ ಓಡಾಡುವ ಪ್ರವಾಸಿಗರಿಗೆ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಒಳನಾಡು ಜಲ ಸಾರಿಗೆ ಮತ್ತು ವ್ಯಾಪಾರಕ್ಕಾಗಿ ವೀಸಾ ಪ್ರಕ್ರಿಯೆಯನ್ನು ಪ್ರೋಟೋಕಾಲ್‌ಗೆ ಅನುಗುಣವಾಗಿ ಸರಾಗಗೊಳಿಸಲಾಗುವುದು ಎಂದು ಸಚಿವ ಖಾಲಿದ್ ಮಹಮ್ಮದ್ ಚೌಧರಿ ಅವರು ಭರವಸೆ ನೀಡಿದರು.

    ಎಂವಿ ರಾಜರಹತ್-ಸಿನಲ್ಲಿ ಒಂದು ಕಡೆ ಪ್ರಯಾಣಿಸಲು 5,000 ರೂ ಮತ್ತು ಪ್ರೀಮಿಯಂ ವಿಐಪಿ ಕ್ಯಾಬಿನ್ ಎರಡಕ್ಕೆ 38,000 ರೂ.ವೆಚ್ಚವಾಗುತ್ತದೆ. ಈ ಹಡಗು ಬುಧವಾರ ಕೋಲ್ಕತ್ತಾದಿಂದ ಹಿಂದಿರುಗಲಿದೆ.

    ಡಿ.4ರ ವೇಳೆಗೆ ತಮಿಳುನಾಡು ಕರಾವಳಿ ದಾಟಲಿದೆ ಮೈಚಾಂಗ್ ಚಂಡಮಾರುತ; ಹೈ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts