More

    ಆನೆ ಬಂತೊಂದಾನೆ, ಉಪಟಳ ಕೊಡ್ತಿದೆ ಶಾನೆ; ಒಂದು ತಿಂಗಳಿಂದ ಗ್ರಾಮಸ್ಥರಲ್ಲಿ ಆತಂಕ

    ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿಭಾಗವಾದ ಚಿತ್ತಗುಟ್ಟಹಳ್ಳಿಯಲ್ಲಿ ಒಂಟಿ ಆನೆಯ ಉಪಟಳ ಹೆಚ್ಚಾಗಿದ್ದು, ಸುಮಾರು ಒಂದು ತಿಂಗಳಿನಿಂದ ಈ ಪ್ರದೇಶದ ಜನರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಇದೀಗ ಸಂಜೆ ಮತ್ತೆ ಪ್ರತ್ಯಕ್ಷವಾಗಿರುವ ಒಂಟಿ ಆನೆ ಸುತ್ತಮುತ್ತಲ ಹಳ್ಳಿಗರ ತಲೆ ಕೆಡಿಸಿದೆ.

    ಗಡಿ‌ಭಾಗವಾದ ಚತ್ತಗುಟ್ಟಹಳ್ಳಿಯಲ್ಲಿ ಒಂಟಿಯಾಗಿ ಒಂದು ಆನೆ ಕಾಣಿಸಿಕೊಂಡಿದ್ದು, ಕತ್ತಲಾದರೂ ಹಳ್ಳಿಯ ಸುತ್ತಮುತ್ತಲೇ ಓಡಾಟ ನಡೆಸುತ್ತಿದ್ದು, ಕಾಡಾನೆಯಿಂದಾಗಿ ಭಯದ ವಾತಾವರಣ ಉಂಟಾಗಿದೆ.

    ಅರಣ್ಯ ಇಲಾಖೆಗೆ ನೀಡಿರುವ ಮಾಹಿತಿ ಪ್ರಕಾರ ಅವರು ಸ್ಥಳಕ್ಕೆ ಆಗಮಿಸಿದ್ದು, ಇಲಾಖೆಯವರು ಹಾಗೂ ಹಳ್ಳಿಯವರು ಒಟ್ಟಾಗಿ ಆನೆಯನ್ನು ಮರಳಿ ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಇಲ್ಲಿ ಆನೆಗಳ ಸಂಚಾರ ನಡೆಯುತ್ತಿದ್ದು, ಅವುಗಳ ಉಪಟಳದಿಂದ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.

    ಶಾಲೆ ಶುರು, ಬೆಂಚಿಗೊಬ್ರು ಅಥವಾ ಇಬ್ರು; ಆ ಕಡೆಯಿಂದ ಬಂದು ಈ ಕಡೆಯಿಂದ ಹೋಗ್ಬೇಕು, ಕೆಮ್ಮಿದ್ರೆ ಮನೆಗೆ: ಇಲ್ಲಿದೆ ಎಸ್​ಒಪಿ ಡಿಟೇಲ್ಸ್​..

    ಗಂಗಾನದಿಯಲ್ಲೊಂದು ಭಾರಿ ಶಾಕ್​; 30ಕ್ಕೂ ಅಧಿಕ ಮಂದಿಗೆ ಗಾಯ, ಸುಮಾರು 20 ಜನ ನಾಪತ್ತೆ!

    ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts