More

    ಮಹಿಳೆ ಸಾವು, ಶಾಸಕರ ಮೇಲೆ ಹಲ್ಲೆ, 6 ಸಾಕಾನೆಗಳ ಕಾರ್ಯಾಚರಣೆ ಬಳಿಕ ಸಿಕ್ಕಿತು ಒಂದು ಕಾಡಾನೆ..

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಾಡಾನೆ ಹಾವಳಿಗೆ ಮಹಿಳೆಯೊಬ್ಬಳು ಬಲಿಯಾಗಿದ್ದಕ್ಕೆ ಜನರು ಆಕ್ರೋಶಗೊಂಡು ಮೂಡಿಗೆರೆ ಶಾಸಕರ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದ ಪ್ರಕರಣ ನಡೆದ ಬಳಿಕ ಕೈಗೊಂಡ ತೀವ್ರ ಕಾರ್ಯಾಚರಣೆಯಲ್ಲಿ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪ್ರದೇಶದಲ್ಲಿ ಇಂದು ಬೆಳಗಿನಿಂದ ಆರು ಸಾಕಾನೆಗಳನ್ನು ಬಳಸಿಕೊಂಡು ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿದ್ದು, ಕೊನೆಗೂ ಒಂದು ಕಾಡಾನೆಯನ್ನು ಹಿಡಿಯುವಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿದೆ.

    ಈ ಪ್ರದೇಶದಲ್ಲಿ ಮೂರು ಕಾಡಾನೆಗಳಿಂದ ಹಾವಳಿ ಉಂಟಾಗಿದ್ದು, ಮೊನ್ನೆಮೊನ್ನೆಯಷ್ಟೆ ಮಹಿಳೆಯೊಬ್ಬರು ಬಲಿಯಾಗಿದ್ದರು. ಹೀಗೆ ಪದೇಪದೆ ಕಾಡಾನೆ ದಾಳಿಗೆ ಜನರು-ಜಾನುವಾರು ಬಲಿಯಾಗುತ್ತಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕದ್ದರಿಂದ ರೊಚ್ಚಿಗೆದ್ದಿದ್ದ ಜನರು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು.

    ಇದನ್ನೂ ಓದಿ: ಶಾಸಕರಿಗೇ ಹೊಡೆದು ಬಟ್ಟೆ ಹರಿದು ಹಾಕಿದ ಜನರು; ಕತ್ತಲಲ್ಲಿ ಹರಿದ ಅಂಗಿಯಲ್ಲೇ ಪರಿಸ್ಥಿತಿ ವಿವರಿಸಿದ ಕುಮಾರಸ್ವಾಮಿ..

    ಈ ಎಲ್ಲ ಹಿನ್ನೆಲೆಯಲ್ಲಿ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಇಂದು ಮೂರು ಕಾಡಾನೆಗಳ ಪೈಕಿ ಒಂದು ಮೂಡಿಗೆರೆ ತಾಲೂಕಿನ ಕುಂದೂರಿನ ಕೆಂಜಿಗೆ ಭಾಗದಲ್ಲಿ ಸೆರೆ ಸಿಕ್ಕಿದೆ. ಸೆರೆಯಾದ ಕಾಡಾನೆಯನ್ನು ನಾಗರಹೊಳೆಯ ದುಬಾರೆ ಆನೆಕ್ಯಾಂಪ್​​ಗೆ ಸ್ಥಳಾಂತರಿಸಲಾಗಿದೆ.

    ಹಿಂದಿ ಹೇರಿಕೆ ವಿರೋಧಿಸಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಕೊಂಡು ಸತ್ತ ಪ್ರತಿಭಟನಾಕಾರ!

    ಶಾಲಾ ಶೌಚಗೃಹದಲ್ಲೇ ಮಗುವಿಗೆ ಜನ್ಮನೀಡಿದ ಅಪ್ರಾಪ್ತ ವಯಸ್ಕೆ; ಆಕೆಯ ಕಸಿನ್ ವಿರುದ್ಧವೇ ಕೇಸು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts