More

    ತ್ರಿವಳಿ ತಲಾಕ್, ಪತ್ನಿಗೆ ಜೀವನಾಂಶ

    ಲಖನೌ: ದಿಢೀರ್ ತ್ರಿವಳಿ ತಲಾಕ್ ಘೋಷಿಸಿದ್ದನ್ನು ವಿರೋಧಿಸಿ ಹೋರಾಟ ನಡೆಸಿದ್ದ ಉತ್ತರ ಪ್ರದೇಶ ಸಹರಣಪುರದ ಅತಿಯಾ ಸಬ್ರಿ, ಐದು ವರ್ಷಗಳ ನಂತರ ಜೀವನಾಂಶ ಗೆದ್ದುಕೊಂಡಿದ್ದಾರೆ. ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲಯ ಅತಿಯಾ ಪರವಾಗಿ ತೀರ್ಪು ನೀಡಿದೆ. ಪ್ರಕರಣ ಕೋರ್ಟ್ ನಲ್ಲಿದ್ದ 5 ವರ್ಷ ಕಾಲದ ಬಾಕಿ ಜೀವನಾಂಶ -ರೂ;13.4 ಲಕ್ಷವನ್ನು ಅತಿಯಾಗೆ ಕೂಡಲೇ ಪಾವತಿಸುವಂತೆ ಕೋರ್ಟ್ ಆದೇಶ ನೀಡಿದೆ. ಅಲ್ಲದೆ, ಪ್ರತಿ ತಿಂಗಳು -ರೂ;21,000 ಜೀವನ ನಿರ್ವಹಣೆಗಾಗಿ ನೀಡಬೇಕು ಎಂದು ಪತಿ ವಾಜಿದ್ ಆಲಿಗೆ ಕೋರ್ಟ್ ಸೂಚಿಸಿದೆ.

    ಪ್ರಕರಣದ ಹಿನ್ನೆಲೆ: 2015ರಲ್ಲಿ ಎರಡನೇ ಹೆಣ್ಣುಮಗುವಿಗೆ ಜನ್ಮ ನೀಡಿದ ಅತಿಯಾಳನ್ನು ಪತಿ ಮತ್ತು ಅತ್ತೆ, ಮಾವ ಮನೆಯಿಂದ ಹೊರಹಾಕಿದ್ದರು. 20 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪೀಡಿಸಿದ್ದರು. ನವೆಂಬರ್ 2ರಂದು ಬಿಳಿ ಹಾಳೆಯ ಮೇಲೆ ಮೂರು ಬಾರಿ ತಲಾಕ್ ಎಂದು ಬರೆದು ವಾಜಿದ್ ಅಲಿ ಹೊರಟು ಹೋಗಿದ್ದ. ಇದರಿಂದ ಬೇಸತ್ತ ಅತಿಯಾ ನವೆಂಬರ್ 24ರಂದು ಸಹರಣಪುರ ಕೋರ್ಟ್​ನಲ್ಲಿ ದೂರು ದಾಖಲಿಸಿದ್ದರು.

    ‘ನನ್ನ ಮುಂದೆ ಎರಡು ದಾರಿ ಇತ್ತು. ತ್ರಿವಳಿ ತಲಾಕ್ ವಿರುದ್ಧ ಹೋರಾಟ ನಡೆಸುವುದು, ಇನ್ನೊಂದು ಜೀವನಾಂಶ ಪಡೆಯಲು ಹೋರಾಟ ನಡೆಸುವುದು. ಜೀವನಾಂಶ ಪಡೆಯುವಲ್ಲಿ ನಾನು ಯಶಸ್ವಿಯಾದೆ. ದಿಢೀರ್ ತ್ರಿವಳಿ ತಲಾಕ್ ನೀಡುವುದು ಅಸಾಂವಿಧಾನಿಕ ಎಂಬ ಸುಪ್ರೀಂ ಕೋರ್ಟ್ ತೀರ್ಪು ವರದಾನವಾಗಿದೆ. ಈ ರೀತಿ ದಿಢೀರ್ ತ್ರಿವಳಿ ತಲಾಖ್ ತೊಂದರೆಗೆ ಒಳಗಾದ ಮಹಿಳೆಯರು ಮುಂದಾಗಬೇಕು’ ಎಂದು ಅತಿಯಾ ಆಗ್ರಹಿಸಿದ್ದಾರೆ.

    ‘ಮಹಾರಾಷ್ಟ್ರ ಸಿಎಂ ಠಾಕ್ರೆ ಮಾಡೋ ಕೆಲಸ ಬಿಟ್ಟು, ಜನರಿಗೆ ಲಾಕ್​ಡೌನ್ ಭೂತ ತೋರಿಸುತ್ತಿದ್ದಾರೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts