More

    ಸೈಬರ್ ವಂಚನೆಯಿಂದ 1.5 ಲಕ್ಷ ಕಳೆದುಕೊಂಡ ಪತ್ನಿ; ತ್ರಿವಳಿ ತಲಾಕ್ ಎಂದ ಗಂಡ!

    ಒಡಿಶಾ: ಸೈಬರ್ ವಂಚಕರಿಂದ ಮೋಸಕ್ಕೊಳಗಾದ ಮಹಿಳೆಯೊಬ್ಬರು 1.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇದೀಗ ವಂಚನೆಗೆ ಬಲಿಯಾದ ಮಹಿಳೆಗೆ ಆಕೆಯ ಗಂಡ ತ್ರಿವಾಳಿ ತಲಾಕ್ ನೀಡಿದ್ದಾನೆ. ಪತ್ನಿಗೆ ತಲಾಕ್ ನೀಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಗುಜರಾತ್​ನಲ್ಲಿರುವ ಪತಿಗೆ ಕಳೆದ ಏಪ್ರಿಲ್ 1ರಂದು ಕರೆಮಾಡಿ 1.5 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ತಿಳಿಸಿದ್ದೇನೆ. ವಂಚನೆಗೆ ಒಳಗಾಗಿರುವುದು ತಿಳಿಯುತ್ತಿದ್ದಂತೆ ಪತಿ ದೂರವಾಣಿ ಮೂಲಕ ತ್ರಿವಳಿ ತಲಾಕ್ ಹೇಳಿ, ಕಾನೂನು ಬಾಹಿರವಾಗಿ ವಿಚ್ಛೇದನ ಪಡೆದಿದ್ದಾನೆ ಎಂದು ಒಡಿಶಾದ ಕೇಂದ್ರಪಾರ ಜಿಲ್ಲೆಯ 32 ವರ್ಷದ ಮಹಿಳೆ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

    ಇದನ್ನೂ ಓದಿ: ದೇವನಹಳ್ಳಿ | ಪ್ರೀತಿಸಿ ಮದುವೆಯಾಗಿದ್ದ ಯುವತಿಯ ದುರಂತ ಅಂತ್ಯ; ಮಗಳದ್ದು ಹತ್ಯೆ ಎಂದ ಕುಟುಂಬಸ್ಥರು!

    ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಮುಸ್ಲಿಂ ಮಹಿಳೆಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರಪಾರ ಸದರ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸರೋಜ್ ಕುಮಾರ್ ಸಾಹೂ ತಿಳಿಸಿದ್ದಾರೆ. 

    ಸಂತ್ರಸ್ತೆ ಮಹಿಳೆ ವಿವಾಹವಾಗಿ 15 ವರ್ಷಗಳ ಕಳೆದಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ವರದಕ್ಷಿಣೆ ಸಂಬಂಧಿತ ಚಿತ್ರಹಿಂಸೆಗೂ ಒಳಗಾಗಿರುವುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ವರದಕ್ಷಿಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ಕೂಡ ದಾಖಲಿಸಲಾಗಿದೆ ಎಂದು ಸಾಹೂ ಹೇಳಿದ್ದಾರೆ. ಮಹಿಳೆ ಹೇಗೆ ಸೈಬರ್ ವಂಚನೆಗೆ ಒಳಗಾಗಿದ್ದಾರೆ ಎಂಬುದರ ಬಗ್ಗೆ ಇನ್ನೂ ವರದಿಯಾಗಿಲ್ಲ. ಸದ್ಯ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ಪ್ರಭಾವಿ ರಾಜಕಾರಣಿಯೊಬ್ಬರಿಂದ ಚುನಾವಣಾ ಪ್ರಚಾರಕ್ಕೆ ಬರುವಂತೆ ಯಶ್​​ಗೆ ಆಹ್ವಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts