More

    ಪೋರ್ಟ್​ಫೋಲಿಯೊದಲ್ಲಿ ಮಲ್ಟಿ ಅಸೆಟ್​ ಫಂಡ್ ಏಕಿರಲೇಬೇಕು?

    | ಪಿ.ಯು. ಮೋನಪ್ಪ ನಿರ್ದೇಶಕ, ವಿತ್ತ ಕ್ಯಾಪಿಟಲ್ ಸರ್ವಿಸಸ್

    ಬಹು ಆಸ್ತಿ ನಿಧಿ ಅರ್ಥಾತ್​ ಮಲ್ಟಿ ಅಸೆಟ್ ಫಂಡ್.. ಹೆಸರೇ ಸೂಚಿಸುವಂತೆ ಇದು ಒಂದಕ್ಕಿಂತ ಹೆಚ್ಚಿನ ಆಸ್ತಿ ವರ್ಗಕ್ಕೆ ಸೇರಿದ ಮ್ಯೂಚುವಲ್ ಫಂಡ್. ​ಅಂದರೆ ಇಂಥ ಯೋಜನೆಗಳಲ್ಲಿ ಹೂಡಿಕೆದಾರರ ಹಣ ಈಕ್ವಿಟಿ, ಸಾಲ, ಚಿನ್ನ ಇತ್ಯಾದಿಯಂಥ ಒಂದೇ ಆಸ್ತಿವರ್ಗದಲ್ಲಿ ಕೇಂದ್ರೀಕೃತವಾಗುವ ಬದಲು, ಸೂಕ್ತ ಮಲ್ಟಿ ಅಸೆಟ್​ ಫಂಡ್​ ಹಂಚಿಕೆ ಕಾರ್ಯತಂತ್ರದ ಮೂಲಕ ಆಸ್ತಿ ವಿಕೇಂದ್ರೀಕರಣ ಮಾಡಲಾಗುತ್ತದೆ. ಇದರಿಂದ ಒಂದೇ ಕಡೆ ಹೂಡಿಕೆಯಿಂದಾಗುವ ಅಪಾಯ ದೂರ ಮಾಡಲಾಗುತ್ತದೆ.

    ಆಸ್ತಿ ವರ್ಗೀಕರಣ ಎಂಬುದು ಯಾವುದೇ ಹೂಡಿಕೆದಾರ ಹೂಡಿಕೆ ಮಾಡುವಾಗ ಮಾರುಕಟ್ಟೆ ವರ್ತುಲಕ್ಕೆ ಹೊರತಾಗಿಯೂ ಗಮನಿಸಬೇಕಾದ ಅತ್ಯಂತ ಮುಖ್ಯ ವಿಚಾರ. ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆಯ ಸಮರ್ಪಕ ಹಂಚಿಕೆ ಅಪಾಯವನ್ನು ತಗ್ಗಿಸುವುದಷ್ಟೇ ಅಲ್ಲದೆ ಸುಸ್ಥಿರ ಹಾಗೂ ಹಣದುಬ್ಬರಕ್ಕೂ ಮೀರಿದ ಆದಾಯ ತಂದುಕೊಡಬಲ್ಲದು.

    ಸೆಬಿ (SEBI) ಕೆಟಗರಿ ವ್ಯಾಖ್ಯಾನದ ಪ್ರಕಾರ ಮಲ್ಟಿ ಅಸೆಟ್ ಫಂಡ್​ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ವರ್ಗಕ್ಕೆ ಕನಿಷ್ಠ ಶೇ. 10 ತೆರೆದುಕೊಂಡಿರುತ್ತದೆ. ಅದಾಗ್ಯೂ ಮಾರುಕಟ್ಟೆಯ ಪರಿಸ್ಥಿತಿ ಮತ್ತು ಇತರ ವಿವಿಧ ಅಂಶಗಳಿಗೆ ಅನುಗುಣವಾಗಿ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಮಲ್ಟಿ ಅಸೆಟ್​ ಫಂಡ್ ಹಂಚಿಕೆಯಲ್ಲಿ ಕಾರ್ಯತಾಂತ್ರಿಕವಾಗಿ ಬದಲಾವಣೆ ಮಾಡಲಾಗುತ್ತದೆ. ಅಂಥ ಫಂಡ್​ಗಳಲ್ಲಿ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಈಕ್ವಿಟಿ ಎಕ್ಸ್​ಪೋಸರ್​ ಶೇ. 10ರಿಂದ 80ರ ವರೆಗೂ ಇರುತ್ತದೆ. ಸಾಮಾನ್ಯ ಮಾರುಕಟ್ಟೆ ವರ್ತುಲಗಳಲ್ಲಿ ಬಹು-ಆಸ್ತಿ ನಿಧಿಗಳು ಈಕ್ವಿಟಿಗೆ ಕನಿಷ್ಠ ಶೇ.65 ಹಂಚಿಕೆಯನ್ನು ಇರಿಸಿಕೊಳ್ಳಲು ಒಲವು ತೋರುತ್ತವೆ. ಆದರೆ ಸಾಲ, ಚಿನ್ನ, ಆರ್​​ಇಐಟಿ, ಐಎನ್​ವಿಐಟಿ ಎಕ್ಸ್​ಪೋಸರ್ ವಲಯವು ಕ್ರಮವಾಗಿ ಶೇ. 10ರಿಂದ 35, ಶೇ. 10ರಿಂದ 30 ಮತ್ತು ಶೂನ್ಯದಿಂದ ಶೇ. 10ರ ವರೆಗೆ ಇರುತ್ತವೆ. ಒಬ್ಬರ ಪೋರ್ಟ್​ಫೋಲಿಯೊದ ಕಾಲುಭಾಗ ಮಲ್ಟಿ ಅಸೆಟ್​ ಯೋಜನೆ ಹೊಂದಿರಬೇಕು, ಇದರಿಂದ ಸಂಪತ್ತು ಸೃಷ್ಟಿಯ ಸಮಯದಲ್ಲಿ ಹೂಡಿಕೆಯು ವಿವಿಧ ಮಾರುಕಟ್ಟೆ ವರ್ತುಲಗಳ ಮೂಲಕ ಸರಾಗವಾಗಿ ಸಾಗುವುದು ಖಚಿತವಾಗಿರುತ್ತದೆ.

    ಮಲ್ಟಿ ಅಸೆಟ್​ ಯೋಜನೆಯೇ ಏಕೆ? ಅದಕ್ಕೆ ಮುಖ್ಯ ಕಾರಣಗಳು ಇವು..

    1. ಆಸ್ತಿ ವಿಕೇಂದ್ರೀಕರಣ
    2. ಕಡಿಮೆ ಅಪಾಯ ಮತ್ತು ಸ್ಥಿರ ಲಾಭ
    3. ಮಾರುಕಟ್ಟೆ ಬಂಡವಾಳದಲ್ಲಿ ಹೊಂದಿಕೊಳ್ಳುವಂಥ ಈಕ್ವಿಟಿ ಹಂಚಿಕೆ
    4. ವೈವಿಧ್ಯಮಯ ಡೆಬ್ಟ್​ ಪೋರ್ಟ್​ಫೋಲಿಯೊ
    5. ಹಣದುಬ್ಬರದ ವಿರುದ್ಧ ರಕ್ಷಣೆ

    ಇನ್ನು ಈ ಕೆಟಗರಿಯಲ್ಲಿ ವಿವಿಧ ಕೊಡುಗೆಗಳಿದ್ದರೂ ಹೂಡಿಕೆಯಲ್ಲಿ ಸತತವಾಗಿ ಧನಾತ್ಮಕ ಅನುಭವ ನೀಡುತ್ತಿರುವ ಫಂಡ್​ಗಳಲ್ಲಿ ಪ್ರಮುಖವಾದದ್ದೆಂದರೆ ಐಸಿಐಸಿಐ ಪ್ರುಡೆನ್ಷಿಯಲ್​ ಮಲ್ಟಿ ಅಸೆಟ್ ಫಂಡ್. ಈ ಯೋಜನೆಯು ವ್ಯತಿರಿಕ್ತ ಕರೆಗಳನ್ನು ತೆಗೆದುಕೊಳ್ಳುವುದರಿಂದ ಇದು ಅಲ್ಪಾವಧಿಯಲ್ಲಿ ಕಾರ್ಯಗತವಲ್ಲ. ಅದಾಗ್ಯೂ ದೀರ್ಘಾವಧಿಯಲ್ಲಿ ಈ ಯೋಜನೆ ಸ್ಥಿರ ಆದಾಯ ಕೊಡುವ ನಿರೀಕ್ಷೆ ಇದೆ. ಇದು 5 ಮತ್ತು 10 ವರ್ಷಗಳ ಅವಧಿಯಲ್ಲಿನ ನೈಜಾಂಶಗಳನ್ನು ಪರಿಗಣಿಸಿ ಖಚಿತಪಟ್ಟಿದ್ದು, ಈ ಯೋಜನೆ ಋಣಾತ್ಮಕವಾದ ಉದಾಹರಣೆ ಇಲ್ಲ. ಈ ಕೆಟಗರಿಯಲ್ಲಿ ಈ ಫಂಡ್ ಅತ್ಯುತ್ಕೃಷ್ಟ ಎನಿಸಿಕೊಂಡಿದೆ.

    ‘ನಾನು ನಿಮ್ಮ ಓಲ್ಡ್ ಸ್ಟುಡೆಂಟ್..’ ಎಂದು ಹೇಳಿ ಶಿಕ್ಷಕಿಗೇ ಮೋಸ ಮಾಡಿದ ವಂಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts