More

    ಕರೊನಾ ಲಸಿಕೆಗೆ ಟ್ಯಾಕ್ಸ್ ಏಕೆ ಬೇಕು? ನಿರ್ಮಲಾ ಸೀತಾರಾಮನ್​ ಕೊಟ್ಟ ಉತ್ತರ ಇಲ್ಲಿದೆ ನೋಡಿ..

    ನವದೆಹಲಿ: ಕರೊನಾ ಲಸಿಕೆ ವಿತರಣೆ ಅಭಿಯಾನ ದೇಶದಾದ್ಯಂತ ನಡೆಯುತ್ತಿದೆ. ರಾಜ್ಯಗಳಿಗೆ ಹಂಚಿಕೆಯಾಗುತ್ತಿರುವ ಲಸಿಕೆಗೆ ತೆರಿಗೆ ಹಾಕುತ್ತಿರುವ ವಿಚಾರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಕರಾರು ತೆಗೆದ ಬೆನ್ನಲ್ಲೇ, ಲಸಿಕೆಗೆ ತೆರಿಗೆ ಏಕೆ ಎನ್ನುವ ಪ್ರಶ್ನೆಗೆ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮಾನ್​ ಉತ್ತರ ಕೊಟ್ಟಿದ್ದಾರೆ.

    ಯಾವುದೇ ಲಸಿಕೆ ಅಥವಾ ಸಾಮಾಗ್ರಿ ತಯಾರಾಗುತ್ತಿದೆಯೆಂದರೆ ಅದಕ್ಕೆ ಒಂದಿಷ್ಟು ಕಚ್ಚಾ ವಸ್ತು ಬೇಕಾಗುತ್ತದೆ. ಲಸಿಕೆ ತಯಾರಕಾ ಸಂಸ್ಥೆಗಳು ಆ ಕಚ್ಚಾ ಸಾಮಾಗ್ರಿಯನ್ನು ತೆರಿಗೆ ಕೊಟ್ಟೇ ಖರೀದಿ ಮಾಡಿರುತ್ತಾರೆ. ಆದರೆ ಒಮ್ಮೆ ಅಂತಿಮ ಲಸಿಕೆ ಉತ್ಪಾದನೆ ಆದ ಮೇಲೆ ಅವರು ಆ ಕಚ್ಚಾ ವಸ್ತುವಿನ ತೆರಿಗೆಯನ್ನು ಮರುಪಾವತಿ ಮಾಡಿಸಿಕೊಳ್ಳಬಹುದು. ಈ ಸೌಲಭ್ಯ ಜಿಎಸ್​ಟಿ ಕಟ್ಟುವ ಲಸಿಕೆ ಅಥವಾ ಸಾಮಾಗ್ರಿಗೆ ಮಾತ್ರವೇ ಅನ್ವಯವಾಗುತ್ತದೆ.

    ಈಗೊಂದು ವೇಳೆ ನಾವು ಲಸಿಕೆಯ ಮೇಲಿನ ಜಿಎಸ್​ಟಿಯನ್ನು ತೆಗೆದರೆ, ಆಗ ಉತ್ಪಾದಕರಿಗೆ ಕಚ್ಚಾ ವಸ್ತುವಿನ ಮೇಲಿನ ತೆರಿಗೆ ಹೊರೆಯೆನಿಸುತ್ತದೆ. ಆದ್ದರಿಂದ ಅವರು ಆ ಹಣವನ್ನು ಗ್ರಾಹಕರಿಂದ ಪಡೆಯುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಜಿಎಸ್​ಟಿಗೆ ಒಳಪಡದ ಸಾಮಾಗ್ರಿ ಅಥವಾ ಲಸಿಕೆಗೆ ಕಚ್ಚಾ ವಸ್ತುವಿನ ಮೇಲಿನ ತೆರಿಗೆಯನ್ನು ಮರು ಪಡೆಯಲು ಆಗುವುದಿಲ್ಲ. ಇವೆರೆಡರಿಂದಲೂ ಹೊಡೆತ ಬೀಳುವುದು ಗ್ರಾಹಕನಿಗೇ. ಹಾಗಾಗಿ ಲಸಿಕೆಯನ್ನು ಜಿಎಸ್​ಟಿ ಹೊರೆತಾಗಿ ಮಾರಾಟ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸಚಿವೆ ತಿಳಿಸಿದ್ದಾರೆ.

    ಅದರಲ್ಲೂ ಲಸಿಕೆ ಮತ್ತು ಅದರ ಸಾಮಾಗ್ರಿಗಳ ರಫ್ತು ತೆರಿಗೆ ತೆಗೆದುಹಾಕಲಾಗಿದೆ. ಹಾಗೆಯೇ ಶೇ. 70 ಐಜಿಎಸ್​ಟಿಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಲಸಿಕೆಗೆ ಹಾಕಲಾಗುತ್ತಿರುವ ತೆರಿಗೆಯನ್ನು ಕೂಡಲೇ ತೆಗೆದು ಹಾಕಬೇಕೆಂದು ಮಮತಾ ಬ್ಯಾನರ್ಜಿ ಅವರು ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಅದಕ್ಕೆ ಉತ್ತರವಾಗಿ ನಿರ್ಮಲಾ ಸೀತಾರಾಮನ್​ ಅವರು 16 ಟ್ವೀಟ್​ಗಳಲ್ಲಿ ಈ ಉತ್ತರ ನೀಡಿದ್ದಾರೆ. (ಏಜೆನ್ಸೀಸ್)

    ‘ಸರ್ಜಿಕಲ್​ ಮಾಸ್ಕ್​ ನಿಮಗ್ಯಾಕೆ? ಈ ಮಾಸ್ಕ್ ಹಾಕದೆ ನಮ್ಮನ್ನು ರಕ್ಷಿಸಿ’ ವೈದ್ಯರ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts