More

    ಮಾನಸಿಕ ಅಸ್ವಸ್ಥರಿಗೆ ವಿಮೆ ಏಕಿಲ್ಲ?

    ನವದೆಹಲಿ: ಮಾನಸಿಕ ಆರೋಗ್ಯಕ್ಕೆ ವಿಮೆ ಸೌಲಭ್ಯ ಏಕಿಲ್ಲ ಎಂದು ಪ್ರಶ್ನಿಸಿರುವ ಸವೋನ್ನತ ನ್ಯಾಯಾಲಯ, ಮಾನಸಿಕ ಅಸ್ವಸ್ಥತೆಗೆ ಕೂಡ ವಿಮೆಯ ಹಣಕಾಸು ಪರಿಹಾರ ವಿಸ್ತರಿಸುವಂತೆ ಸಲಹೆ ಮಾಡಿದೆ. ಮಾನಸಿಕ ಅಸ್ವಸ್ಥರಿಗೂ ವಿಮೆ ಪರಿಹಾರ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಪೀಠ, ಕೇಂದ್ರ ಸರ್ಕಾರ ಮತ್ತು ಭಾರತೀಯ ವಿಮೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ಐಆರ್​ಡಿಎಐ) ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಅರ್ಜಿಯ ವಿಚಾರಣೆಯನ್ನು 2 ವಾರ ಮುಂದೂಡಿದೆ.

    ಸಮಾನ ಚಿಕಿತ್ಸೆ

    ದೈಹಿಕ ಅನಾರೋಗ್ಯ ಪೀಡಿತರನ್ನು ನೋಡಿಕೊಳ್ಳುವ ರೀತಿಯಲ್ಲೇ ಮಾನಸಿಕ ಅಸ್ವಸ್ಥತೆ ಇರುವವರಿಗೆ ವೈದ್ಯಕೀಯ ಆರೈಕೆ ಒದಗಿಸಬೇಕು ಎಂದು 2017ರ ಮಾನಸಿಕ ಆರೈಕೆ ಕಾಯ್ದೆ ಹೇಳುತ್ತದೆ.

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮತ್ತು ಕೋವಿಡ್-19 ಸಾಂಕ್ರಾಮಿಕತೆಯ ನಡುವೆ ಖಿನ್ನತೆ ಹಾಗೂ ಆತಂಕದಂಥ ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುನ್ನೆಲೆಗೆ ತಂದಿದೆ.

    2018ರ ಉಪಕ್ರಮ: ವಿಮಾ ಪಾಲಿಸಿಗಳಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಒಳಗೊಳಿಸಲು ನಿಯಮ ರೂಪಿಸುವಂತೆ ಐಆರ್​ಡಿಎಐ 2018ರಲ್ಲಿ ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಿತ್ತು. 2018ರ ಮೇ ತಿಂಗಳಿಂದ ಅನುಷ್ಠಾನಕ್ಕೆ ಬಂದ ಮಾನಸಿಕ ಆರೈಕೆ ಕಾನೂನು 2017ಅನ್ನು ಉಲ್ಲೇಖಿಸಿದ್ದ ವಿಮಾ ಪ್ರಾಧಿಕಾರ, ದೈಹಿಕ ಅಸ್ವಸ್ಥತೆ ಚಿಕಿತ್ಸೆಗೆ ವೈದ್ಯಕೀಯ ವಿಮೆ ಒದಗಿಸುವ ರೀತಿಯಲ್ಲೇ ಮನೋರೋಗ ಚಿಕಿತ್ಸೆಗೂ ವಿಮೆ ಒದಗಿಸುವ ಕುರಿತು ನಿಯಮ ರೂಪಿಸುವಂತೆ ಕಂಪನಿಗಳಿಗೆ ಸೂಚಿಸಿತ್ತು.

    ಚೀನಾ-ಭಾರತ ಸಂಘರ್ಷ: ಭಾರತದ 20 ಯೋಧರು ಹುತಾತ್ಮ, 40ಕ್ಕೂ ಹೆಚ್ಚು ಚೀನಾ ಯೋಧರೂ ಹತರಾಗಿರುವ ಶಂಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts