ಬೆಂಗಳೂರು: ಮುಂದಿನ ವರ್ಷ ಚಂದ್ರಯಾನ-3 ಉಡಾವಣೆ ಮಾಡಲು ಎದರು ನೋಡುತ್ತಿರುವ ಭಾರತೀಯ ಬಾಹಾಕ್ಯಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬೆಂಗಳೂರಿನಿಂದ ಸುಮಾರು 215 ಕಿ.ಮೀ ದೂರದ ಚಳ್ಳಕೆರೆಯ ಉಳ್ಳಾರ್ತಿ ಕಾವಲ್ನಲ್ಲಿ ಕೃತಕ ಚಂದ್ರನ ಕುಳಿಗಳನ್ನು ವರ್ಷದ ಕೊನೆಯಲ್ಲಿ ಸೃಷ್ಟಿಸಲಿದೆ.
ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಚಂದ್ರನ ಕುಳಿಗಳನ್ನು ನಿರ್ಮಾಣ ಮಾಡುವ ನಾಗರಿಕ ಸೇವಾ ಕಾರ್ಯಕ್ಕೆ ಸಂಸ್ಥೆಯನ್ನು ಗುರುತಿಸುವ ಪ್ರಕ್ರಿಯೆಯು ತಿಂಗಳ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಆರಂಭದ ವೇಳೆಗೆ ಪೂರ್ಣಗೊಳ್ಳಲಿದೆ. ಚಳ್ಳಕೆರೆ ಕ್ಯಾಂಪಸ್ನಲ್ಲಿ ಚಂದ್ರನ ಕುಳಿಗಳು ನಿರ್ಮಾಣವಾಗಲಿದ್ದು, ಇದಕ್ಕೆ ಸುಮಾರು 24.2 ಲಕ್ಷ ರೂ. ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪ್ರತಿ ವರ್ಷ ತಪ್ಪದೇ ನಟ ವಿಷ್ಣುವರ್ಧನ್ ಬರ್ತಡೇ ಆಚರಿಸುತ್ತಿದ್ದ ಅಭಿಮಾನಿ ನೇಣಿಗೆ ಶರಣು
ಚಂದ್ರನ ಕುಳಿಗಳು 10 ಮೀಟರ್ ವ್ಯಾಸ ಮತ್ತು 3-ಮೀಟರ್ ಆಳವನ್ನು ಹೊಂದಿರಲಿದೆ. ಚಂದ್ರನ ಮೇಲ್ಮೈನಲ್ಲಿರುವಂತೆಯೇ ನೈಜವಾಗಿ ಕುಳಿಗಳನ್ನು ನಿರ್ಮಿಸಿ, ಅದರ ಮೇಲೆ ಚಂದ್ರಯಾನ-3 ಲ್ಯಾಂಡರ್ ಅನ್ನು ಲ್ಯಾಂಡ್ ಮಾಡಲಾಗುವುದು. ಲ್ಯಾಂಡರ್ ಸೆನ್ಸರ್ ಮಹತ್ವದ ಪರೀಕ್ಷೆ ನಡೆಸಲಾಗುತ್ತದೆ. ವಿಮಾನದನಲ್ಲಿ ಲ್ಯಾಂಡರ್ ಸೆನ್ಸರ್ಗಳನ್ನಿಟ್ಟು ಕೃತಕ ಚಂದ್ರನ ಕುಳಿಗಳ ಮೇಲೆ ಹಾರಾಟ ನಡೆಸುವುದನ್ನು ಲ್ಯಾಂಡರ್ ಸೆನ್ಸರ್ ಕಾರ್ಯಕ್ಷಮತೆ ಪರೀಕ್ಷೆ ಒಳಗೊಂಡಿರುತ್ತದೆ. ಈ ಮೂಲಕ ಲ್ಯಾಂಡರ್ ಮಾರ್ಗದರ್ಶನಕ್ಕೆ ಸೆನ್ಸರ್ ಹೇಗೆ ಪರಿಣಾಮಕಾರಿ ಎಂಬುದನ್ನು ಪರೀಕ್ಷಿಸಲಾಗುತ್ತದೆ ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಚಂದ್ರಯಾನ-2ನಂತೆಯೇ ಮುಂದಿನ ಚಂದ್ರಯಾನವು ಸಹ ತುಂಬಾ ಮಹತ್ವದ್ದಾಗಿದ್ದು, ಇದು ಸಹ ಹೆಚ್ಚು ಸ್ವಾಯತ್ತತೆಯನ್ನು ಹೊಂದಿರುತ್ತದೆ. ಇದರಲ್ಲಿ ಲ್ಯಾಂಡಿಂಗ್ ಸ್ಥಳದಿಂದ ಅದರ ಎತ್ತರವನ್ನು ನಿರ್ಣಯಿಸಲು, ವೇಗವನ್ನು ನಿರ್ಧರಿಸಲು ಹಾಗೂ ಬಂಡೆಗಳು ಮತ್ತು ಚಂದ್ರನ ಮೇಲಿನ ಅಸಮತೋಲನ ಮೇಲ್ಮೈಯನ್ನು ದೂರವಿರಿಸಲು ಮಾಡಿರುವ ವಿನ್ಯಾಸಗಳು ಸೇರಿದಂತೆ ಅನೇಕ ಸೆನ್ಸರ್ಗಳನ್ನು ಚಂದ್ರಯಾನ-3 ಹೊಂದಿರಲಿದೆ.
ಇದನ್ನೂ ಓದಿ: ಹಬ್ಬಕ್ಕೆಂದು ಅಜ್ಜಿ ಊರಿಗೆ ಹೋದ ಯುವಕ ಮರಳಿದ್ದು ಶವವಾಗಿ: ತಡರಾತ್ರಿ ನಡೆಯಿತು ಭೀಕರ ಘಟನೆ
ಅಂದಹಾಗೆ ಚಂದ್ರನ ಮೇಲೆ ಇಳಿಯುವಾಗ ಲ್ಯಾಂಡರ್ ಬಹುಮುಖ್ಯ. ಕಳೆದ ಚಂದ್ರಯಾನ-2 ವೇಳೆ ಇನ್ನೇನು ಚಂದ್ರನ ಮೇಲೆ ಇಳಿಯಬೇಕೆನ್ನುವಷ್ಟರಲ್ಲಿ ವಿಕ್ರಮ್ ಲ್ಯಾಂಡರ್ ತನ್ನ ಸಂಪರ್ಕ ಕಡಿದುಕೊಂಡಿತ್ತು. (ಏಜೆನ್ಸೀಸ್)
ನಿಶ್ಚಿತಾರ್ಥವಾಗಿದ್ರೂ ಬೇರೊಬ್ಬಳ ಜತೆ ತಿರುಗಾಟ: ಭಾವಿ ಪತಿಗೆ ತನ್ನ ಉಗ್ರರೂಪ ತೋರಿದ ಯುವತಿ!