More

    ಬಡಮಕ್ಕಳ ಶಾಪ ಯಡಿಯೂರಪ್ಪ ಅವರ ಮಕ್ಕಳು, ಮೊಮ್ಮಕ್ಕಳಿಗೆ ತಟ್ಟದೆ ಬಿಡಲ್ಲ ಎಂದು ಮಾಜಿ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ ?

    ಹಾಸನ: ಎಷ್ಟು ಬೇಕಾದರೂ ದುಡ್ಡು ಹೊಡೆದುಕೊಳ್ಳಿ, ಆದರೆ ಬಡವರ ಬದುಕಿಗೆ ಅನುಕೂಲವಾಗುವುದನ್ನು ಸ್ವಲ್ಪವಾದರೂ ಮಾಡಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ರಾಜ್ಯದ ಎಷ್ಟೋ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕೊಠಡಿ, ಆಸನ, ಕಂಪ್ಯೂಟರ್, ಶಿಕ್ಷಕರ ಕೊರತೆಯಿದ್ದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಶಿಕ್ಷಣಕ್ಕಾಗಿ 2 ಸಾವಿರ ಕೋಟಿ ರೂ. ಹೆಚ್ಚುವರಿ ಮೀಸಲಿಡಬೇಕು. ಬಡಮಕ್ಕಳಿಗೆ ತೊಂದರೆ ನೀಡಿದರೆ ಅವರ ಪಾಲಕರ ಶಾಪ ನಿಮಗೆ ತಟ್ಟದೆ ಇರುವುದಿಲ್ಲ. ಯಡಿಯೂರಪ್ಪ ಅವರ ಮಕ್ಕಳು, ಮೊಮ್ಮಕ್ಕಳಿಗೆ ಬಡವರ ಶಾಪ ಖಂಡಿತ ತಗುಲುತ್ತದೆ ಎಂದರು.

    ಜಿಲ್ಲೆಗೆ ಮಂಜೂರಾಗಿದ್ದ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗೆ ಇಲ್ಲಿನ ಶಾಸಕರ ಸೂಚನೆಯಂತೆ ಸರ್ಕಾರ ತಡೆ ಹಿಡಿದಿದ್ದು ದ್ವೇಷದ ರಾಜಕಾರಣ ಎಷ್ಟು ದಿನ ಬಾಳುತ್ತದೆಂಬುದನ್ನು ನೋಡುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಅನುಮೋದನೆಗೊಂಡು ಟೆಂಡರ್ ಹಂತದಲ್ಲಿದ್ದ ಸಾಕಷ್ಟು ಕಾಮಗಾರಿಗೆ ತಡೆ ನೀಡಿದ್ದಾರೆ. ಕೇಂದ್ರ ಸಚಿವ ನಿತೀನ್ ಗಡ್ಕರಿ ಭೂಮಿ ಪೂಜೆ ನೆರವೇರಿಸಿದ್ದ ರಸ್ತೆ ಕೆಲಸಕ್ಕೂ ಅಡ್ಡಗಾಲಾಗಾಗಿದ್ದಾರೆ. ಚನ್ನಪಟ್ಟಣ ಕೆರೆ ಅಭಿವೃದ್ಧಿಗಾಗಿ ರೂಪಿಸಿದ್ದ 144 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಸ್ಥಳೀಯ ಶಾಸಕ ಪತ್ರ ಬರೆದು ತಡೆದಿದ್ದಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts