More

    ವೃತ್ತಿ ಗೌರವಕ್ಕೆ ಧಕ್ಕೆಯಾಗದಂತೆ ಸೇವೆ ಸಲ್ಲಿಸಿ

    ಕೋಲಾರ: ನಗರದ ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆಗೆ ಮಂಗಳವಾರ ಆರೋಗ್ಯ ಇಲಾಖೆಯ ಜಾಗೃತಿ ಅಧಿಕಾರಿ ಶ್ರೀನಿವಾಸ್​ ಭೇಟಿ ನೀಡಿ, ಪರಿಶೀಲಿಸಿದರು.

    ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ತುರ್ತು ವಿಭಾಗ, ಸಿಟಿ ಸ್ಕಾ$ನ್​, ಎಂಆರ್​ಐ, ಡಯಾಲಿಸಿಸ್​, ಸಾಮಾನ್ಯ ವಾರ್ಡ್​, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಿಭಾಗ, ರಕ್ತ ಪರೀಾ ಕೇಂದ್ರ, ಮಕ್ಕಳ ವಾರ್ಡ್​ಗೆ ಭೇಟಿ ನೀಡಿದರು. ರೋಗಿಗಳ ಯೋಗಕ್ಷೇಮ ವಿಚಾರಿಸಿ, ಆಸ್ಪತ್ರೆಯಲ್ಲಿ ಸೌಲಭ್ಯಗಳು ದೊರೆಯುವಿಯೇ, ಔಷಧ ಆಸ್ಪತ್ರೆಯಿಂದಲೇ
    ಕೊಡುತ್ತಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದರು.

    ಮಕ್ಕಳ ವಾರ್ಡ್​ಗೆ ಭೇಟಿ ನೀಡಿದಾಗ ಹೊರಗಿನಿಂದ ಔಷಧ ತರಿಸಿರುವುದು ಕಂಡುಬಂತು. ಈ ಕುರಿತು ವೈದ್ಯರನ್ನು ಕೇಳಿದಾಗ ನಮ್ಮಲ್ಲಿ ಸ್ಟಾಕ್​ ಇರಲಿಲ್ಲ. ಹೀಗಾಗಿ ಹೊರಗಿನಿಂದ ತರಿಸಲಾಗಿದೆ ಎಂದು ನುಣುಚಿಕೊಂಡರು.

    ಶೌಚಗೃಹಗಳಲ್ಲಿ ಸ್ವಚ್ಛತೆಯಿಲ್ಲದೆ ಇರುವುದು, ಕಸದ ಬುಟ್ಟಿಗಳನ್ನು ವಿಲೇವಾರಿ ಮಾಡದಿರುವುದು, ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಇರುವ ಬಗ್ಗೆ ಸಾರ್ವಜನಿಕರು ಶ್ರೀನಿವಾಸ್​ಗೆ ಮಾಹಿತಿ ನೀಡಿದರು. ಇದನ್ನು ಗಮನಿಸಿದ ಅವರು, ಆಸ್ಪತ್ರೆಗೆ ರೋಗಿ, ಬಾಣಂತಿ, ಗರ್ಭಿಣಿಯರಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದರೆ ಹೇಗೆ ಎಂದು ಆಸ್ಪತ್ರೆಯ ಶುಶ್ರೂಷಾಧಿಕಾರಿ ವಿಜಯಮ್ಮ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್​ ಅವರನ್ನು ತರಾಟೆಗೆ ತೆಗೆದುಕೊಂಡರು. “ಡಿ’ ಗ್ರೂಪ್​ ನೌಕರರ ಸಮಸ್ಯೆಗಳನ್ನು ಆಲಿಸಿದಾಗ, ಐದು ತಿಂಗಳಿಂದ ವೇತನ ಬಾಕಿ ಇರುವ ಬಗ್ಗೆ ತಿಳಿಸಿದರು. ಇದಕ್ಕೆ ಕಾರಣ ಕೇಳಿದಾಗ ಹೊರಗುತ್ತಿಗೆ ಸಿಬ್ಬಂದಿಗೆ ಕೆಲವರಿಗೆ ವೇತನ ಆಗದೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಗುತ್ತಿಗೆದಾರನೊಂದಿಗೆ ಚರ್ಚಿಸಿ ಬಾಕಿ ವೇತನ ಪಾವತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಡಾ.ವಿಜಯಕುಮಾರ್​ ತಿಳಿಸಿದರು.

    ಪರೀಕ್ಷೆಗಳ ವರದಿ ಸಕಾಲಕ್ಕೆ ನೀಡಿ
    ಸುದ್ದಿಗಾರರೊಂದಿಗೆ ಮಾತನಾಡಿದ ಜಾಗೃತಾಧಿಕಾರಿ ಶ್ರೀನಿವಾಸ್​, ಆರೋಗ್ಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ವೃತ್ತಿ ಗೌರವ ಹೆಚ್ಚುತ್ತದೆ. ಲಂಚಮುಕ್ತರಾಗಿ ಕೆಲಸ ಮಾಡಬೇಕು. ಸಾರ್ವಜನಿಕರಿಂದ ದೂರುಗಳು ಬಂದರೆ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ವೈದ್ಯರಿಂದ ಉತ್ತಮ ಸೇವೆ ಸಿಗುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅಪರಾಧ, ರಕ್ತದ ಪರೀೆ ವರದಿ ಕಾಲಮಿತಿಯೊಳಗೆ ಲಭ್ಯವಾಗುವಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗೆ ಬಡವರು ಹೆಚ್ಚಾಗಿ ಬರುವುದರಿಂದ ವೈದ್ಯರು ಹಣದ ನಿರೀಕ್ಷೆ ಮಾಡದೆ, ಉತ್ತಮ ಸೇವೆ ಸಲ್ಲಿಸಬೇಕು. ಹೊರಗಡೆಯಿಂದ ಔಷಧ ತರುವಂತೆ ಚೀಟಿ ಬರೆದು ಕೊಡಬಾರದು ಎಂದರು.

    ವ್ಯವಸ್ಥೆ ಸರಿಪಡಿಸಲು ಮನವಿ
    ಎಸ್​ಎನ್​ಆರ್​ ಆಸ್ಪತ್ರ ಲಂಚದ ಗುಂಡಿಯಾಗಿದ್ದು ಬಡವರಿಗೆ ಮತ್ತು ಸಾಮಾನ್ಯ ಜನತೆಗೆ ಉಚಿತ ಚಿಕಿತ್ಸೆ ಸಿಗುವುದು ಗಗನ ಕುಸುಮವಾಗಿದೆ. ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಕ್ರಮೈಗೊಳ್ಳಬೇಕು ಎಂದು ಭಾರತೀಯ ದಲಿತ ಒಕ್ಕೂಟ ಅಧ್ಯಕ್ಷ ಕೆ.ಎಂ.ಅನಂತ ಕೀರ್ತಿ ಜಾಗೃತಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಹಲವು ಶುಶ್ರೂಷಕಿಯರು ಹಲವಾರು ವರ್ಷಗಳಿಂದ ಹೆರಿಗೆ ವಾರ್ಡ್​ನಲ್ಲೆ ಠಿಕಾಣೆ ಹೂಡಿದ್ದಾರೆ. ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರೆ ಜನಪ್ರತಿನಿಧಿಗಳಿಂದ ರಾಜಕೀಯ ಒತ್ತಡ ತಂದು ಹಾಲಿ ಸ್ಥಳದಲ್ಲೆ ಮುಂದುವರಿಯುತ್ತಾರೆ, ಹೊಸಬರು ಹೆರಿಗೆ ವಾರ್ಡ್​ನಲ್ಲಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ದೂರಿದರು.
    ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕವಾದ 98 ಮಂದಿ ಡಿ ಗ್ರೂಪ್​ ನೌಕರರಲ್ಲಿ 11 ಮಂದಿ ಅಂಗವಿಕಲರಾಗಿದ್ದಾರೆ. 30 ಮಂದಿ ಡೇಟಾ ಅಪರೇಟರ್​ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಸ್ವಚ್ಛತಾ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. 108 ಸರ್ಕಾರಿ ಆಂಬುಲೆನ್ಸ್​ ಇದ್ದರು, ಖಾಸಗಿ ಅಂಬುಲೆನ್ಸ್​ ಮಾಲೀಕರ ಒತ್ತಡಕ್ಕೆ ಮಣಿದು ರೋಗಿಗಳನ್ನು ಕಳುಹಿಸಿಕೊಡುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕಿ ಬಡವರಿಗೆ, ಸಾಮಾನ್ಯ ಜನತೆ ಗುಣಮಟ್ಟದ ಸೇವೆ ಕಲ್ಪಿಸಲು ಕ್ರಮವಹಿಸಬೇಕು ಎಂದು ಅನಂತ ಕೀರ್ತಿ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts