More

    ಈ ಚಳಿಗಾಲದಲ್ಲಿ ಕಾಶ್ಮೀರದ ಗುಲ್ಮಾರ್ಗ್ ಏಕೆ ಹಿಮರಹಿತವಾಗಿದೆ? ಇದರ ಪರಿಣಾಮವೇನು? ವಿವರ ಇಲ್ಲಿದೆ..

    ಶ್ರೀನಗರ: ಭೂಲೋಕದ ಸ್ವರ್ಗದಂತಿರುವ ಕಾಶ್ಮೀರ ಕಣಿವೆ ಉಗ್ರರ ಉಪಟಳ ದೂರವಾಗಿ ಪ್ರಶಾಂತವಾಗಿದೆ. ಆದರೆ ಕಣಿವೆಯಲ್ಲಿ ಈ ಬಾರಿ ಕಡಿಮೆ ಹಿಮಪಾತವಾಗಿರುವುದರಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಲ್ಲಿ ಸ್ವಲ್ಪಮಟ್ಟಿಗೆ ವಿಫಲವಾಗಿದೆ. ಹಿಮಪಾತ ಕಡಿಮೆಯಾದರೆ ಹಚ್ಚಹಸುರಿನಿಂದ ಕಂಗೊಳಿಸಬೇಕಾದ ಪರಿಸರ ನೀರಿನ ಕೊರತೆ ಎದುರಿಸಿ ಒಣಗಿದಂತೆ ಬಾಸವಾಗುತ್ತದೆ. ಇದರ ಜತೆಗೆ ನದಿ, ಸರೋವರ, ತೊರೆಗಳಲ್ಲಿ ನೀರು ಕಡಿಮೆಯಾಗುತ್ತದೆ. ಇನ್ನು ಕುಡಿಯುವ ನೀರಿನ ಕೊರತೆ ಎದುರಾಗುತ್ತದೆ. ಹೀಗಾಗಿ ಪ್ರವಾಸಿಗರು ಹೆಚ್ಚಾಗಿ ಬರುವುದಿಲ್ಲ. ಅಷ್ಟೇ ಏಕೆ ಇದು ಪರಿಸರ ಮತ್ತು ನಿವಾಸಿಗಳ ದೈನಂದಿನ ಜೀವನದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತಿದೆ.

    ಇದನ್ನೂ ಓದಿ: ಏಪ್ರಿಲ್​ನಿಂದ ಫಾಸ್ಟ್​ ಟ್ಯಾಗ್ ಬಂದ್​..! ಕಾರಣ ಇದೇ ನೋಡಿ..

    ಕಾಶ್ಮೀರ ಕಣಿವೆಯು ಈ ವರ್ಷ ಅತ್ಯಂತ ಅಸಾಮಾನ್ಯ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಜನವರಿ, ಫೆಬ್ರವರಿಯಲ್ಲಿ ಮೈನಡುಗಿಸುವ ಚಳಿ ಇರಬೇಕಾಗಿತ್ತು. ಆದರೆ ಕಣಿವೆಯು ಈ ಬಾರಿ ತೀವ್ರವಾದ ಶುಷ್ಕ ವಾತಾವರಣವನ್ನು ನೋಡುತ್ತಿದೆ. ಪರಿಸ್ಥಿತಿಯು ಆತಂಕವನ್ನು ಹೆಚ್ಚಿಸಿದೆ. ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಆತಂಕವನ್ನು ಮೂಡಿಸಿದೆ.

    ಕಾಶ್ಮೀರ ಕಣಿವೆಯ ಸುಪ್ರಸಿದ್ಧ ಪ್ರವಾಸಿ ತಾಣವಾದ ಗುಲ್ಮಾರ್ಗ್ ನಲ್ಲಿ ಕಡಿಮೆ ಹಿಮಪಾತ ದಾಖಲಾಗಿದೆ. ಈ ಪರಿಸ್ಥಿತಿಯು ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಶುಷ್ಕ ಸ್ಥಿತಿಗೆ ಕಾರಣವಾಗಿದೆ. ಗುಲ್ಮಾರ್ಗ್‌ಗೆ ಬಂದ ಪ್ರವಾಸಿಗರು ಈ ಪ್ರದೇಶದ ಚುಮು ಚುಮು ಚಳಿಯ ಅನುಭವ ಪಡೆಯದೆ ನಿರಾಶೆಗೊಂಡಿದ್ದಾರೆ.

    ಗುಲ್ಮಾರ್ಗ್ ಏಕೆ ಹಿಮರಹಿತವಾಗಿದೆ?: ಜಮ್ಮು ಮತ್ತು ಕಾಶ್ಮೀರ ಹವಾಮಾನ ಇಲಾಖೆಯ ಪ್ರಕಾರ, ಮಳೆ ಕೊರತೆಯು ಸಹ ಹಿಮಪಾತ ಕಡಿಮೆಯಾಗಲು ಕಾರಣವಾಗಿದೆ. ಡಿಸೆಂಬರ್ ಮತ್ತು ಜನವರಿ ಪೂರ್ತಿ ಶುಷ್ಕವಾತಾವರಣವಿತ್ತು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಗೆ ಹೋಲಿಸಿದರೆ ಆರಂಭಿಕ ಹಿಮಪಾತ ಈ ವರ್ಷ ಕಾಣೆಯಾಗಿದೆ. ಯಾವುದೇ ಪ್ರಮುಖ ಬದಲಾವಣೆಯಿಲ್ಲ. ಎಲ್ ನಿನೋ ನವೆಂಬರ್‌ನಿಂದ ಮುಂದುವರೆದಿದೆ. ಕಣಿವೆಯಲ್ಲಿನ ಗುಡ್ಡಗಾಡು ಪ್ರದೇಶಗಳು ಸರಾಸರಿಗಿಂತ ಕಡಿಮೆ ಹಿಮಪಾತವನ್ನು ಕಂಡಿವೆ. ಬಯಲು ಪ್ರದೇಶಗಳು ಹಿಮಪಾತವನ್ನು ಕಂಡೇ ಇಲ್ಲ ಎಂದು ಕಾಶ್ಮೀರ ಹವಾಮಾನ ಕೇಂದ್ರದ ನಿರ್ದೇಶಕ ಮುಖ್ತಾರ್ ಅಹ್ಮದ್ ತಿಳಿಸಿದ್ದಾರೆ. ಈ ಪರಿಸ್ಥಿತಿಯು ಕಾಶ್ಮೀರ ಕಣಿವೆಯಲ್ಲಿ ನೀರಿನ ಕೊರತೆಗೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದು ಸಂಭಾವ್ಯ ಆಹಾರ ಬಿಕ್ಕಟ್ಟಿಗೆ ಸಹ ಕಾರಣವಾಗಬಹುದು ಎನ್ನುತ್ತಾರೆ.
    ಇನ್ನು ಗುಲ್ಮಾರ್ಗ್‌ನಂತೆಯೇ ಪ್ರವಾಸಿ ತಾಣಗಳಾದ ಪಹಲ್ಗಾಮ್ ಮತ್ತು ಸೋನ್ಮಾರ್ಗ್ ಕೂಡ ಚಳಿಗಾಲದ ಯಾವುದೇ ಅನುಭವ ಒಡುತ್ತಿಲ್ಲ. ಹಿಮವಿಲ್ಲದೆ, ಪ್ರವಾಸಿಗರಿಲ್ಲದೆ, ಸ್ಥಳೀಯ ಜನರಿಗೆ ಆಹಾರ, ನೀರಿನ ಕೊರತೆಯಾಗಿ ಕಣಿವೆಯು ಬಣಗುಡುತ್ತಿದೆ.

    ಪಾಕಿಸ್ತಾನದಲ್ಲಿ ಲೈವ್ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಭೂಕಂಪನದ ಅನುಭವ; ವಿಡಿಯೋ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts