More

    ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಯಾಕೆ ಬೌಲಿಂಗ್ ಮಾಡುತ್ತಿಲ್ಲ ಗೊತ್ತೇ?

    ಬೆಂಗಳೂರು: ಟೀಮ್ ಇಂಡಿಯಾವನ್ನು ದೀರ್ಘಕಾಲದಿಂದ ಕಾಡುತ್ತಿದ್ದ ಸಮರ್ಥ ವೇಗದ ಬೌಲಿಂಗ್ ಆಲ್ರೌಂಡರ್‌ನ ಕೊರತೆಯನ್ನು ನೀಗಿಸಿದವರು ಹಾರ್ದಿಕ್ ಪಾಂಡ್ಯ. ಸ್ಫೋಟಕ ಬ್ಯಾಟಿಂಗ್‌ನ ಜತೆಗೆ ಕರಾರುವಾಕ್ ವೇಗದ ಬೌಲಿಂಗ್ ದಾಳಿಯಿಂದ ಉಪಯುಕ್ತ ವಿಕೆಟ್ ಕಬಳಿಸುವ ಆಟಗಾರ. ಆದರೆ ಐಪಿಎಲ್ 13ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರೀಗ ಕೇವಲ ಬ್ಯಾಟ್ಸ್‌ಮನ್ ಆಗಿ ಮುಂಬೈ ಇಂಡಿಯನ್ಸ್ ಆಡುತ್ತಿದ್ದಾರೆ. ಬೌಲಿಂಗ್‌ನಿಂದ ಅವರು ಈಗ ಸಂಪೂರ್ಣ ದೂರ ಉಳಿದಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ತಂದಿದೆ.

    ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಹೇಲ ಜಯವರ್ಧನೆ ಇದಕ್ಕೆ ಕಾರಣವನ್ನೂ ವಿವರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್, ಬೌಲಿಂಗ್‌ನಿಂದ ದೂರ ಉಳಿಯಲು ಪ್ರಮುಖ ಕಾರಣವಾಗಿದೆ. ‘ದಿನದಿಂದ ದಿನಕ್ಕೆ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸುಧಾರಣೆ ಕಾಣುತ್ತಿದೆ. ಆದರೆ ನಾವು ಯಾವುದೇ ಅಪಾಯ ಎದುರಿಸಲು ಸಿದ್ಧರಿಲ್ಲ. ಹೀಗಾಗಿ ಅವರಿಗೆ ಬೌಲಿಂಗ್ ನೀಡುತ್ತಿಲ್ಲ. ಅವರು ಬೌಲಿಂಗ್ ಮಾಡಲು ಸಂಪೂರ್ಣ ಸಮರ್ಥ ಎನಿಸಿದಾಗ ನಾವು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಮಹೇಲ ಜಯವರ್ಧನೆ ತಿಳಿಸಿದ್ದಾರೆ.

    ಇನ್ನು ಮುಂಬೈ ಇಂಡಿಯನ್ಸ್ ತಂಡದ ಮೂಲಗಳು ಹೇಳುವ ಪ್ರಕಾರ, ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿರಲು ಇನ್ನೂ ಒಂದು ಕಾರಣವಿದೆ. ಅದು ಕಾರ್ಯದೊತ್ತಡಕ್ಕೆ ಸಂಬಂಧಿಸಿದ್ದು. ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ ನಂತರದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸದ ವೇಳೆ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಟೀಮ್ ಇಂಡಿಯಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಹೀಗಾಗಿ, ಬಿಸಿಸಿಐ ಸೂಚನೆಯ ಮೇರೆಗೆ ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್‌ಮೆಂಟ್, ಹಾರ್ದಿಕ್ ಪಾಂಡ್ಯ ಅವರನ್ನು ಕೇವಲ ಬ್ಯಾಟ್ಸ್‌ಮನ್ ಆಗಿ ಬಳಸಿಕೊಳ್ಳುವ ಮೂಲಕ ಅವರ ಕಾರ್ಯದೊತ್ತಡವನ್ನು ಕಡಿಮೆ ಮಾಡಿದೆ.

    ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಗಾಯದ ಸಮಸ್ಯೆಗೆ ಸಿಲುಕಿಕೊಳ್ಳದೆ, ಆಸ್ಟ್ರೇಲಿಯಾ ಪ್ರವಾಸಕ್ಕೆ ಸಂಪೂರ್ಣ ಫಿಟ್ ಆಗಿರಬೇಕೆಂಬುದು ಇದರ ಉದ್ದೇಶವಾಗಿದೆ. ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿದ ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಪೂರ್ಣ ಪ್ರಮಾಣದ ಸರಣಿ ಆಡಲಿದೆ. ಅದರ ಬೆನ್ನಲ್ಲೇ ಮತ್ತೊಂದು ಐಪಿಎಲ್ ಟೂರ್ನಿ ಬರಲಿದೆ. ಈ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು 27 ವರ್ಷದ ಹಾರ್ದಿಕ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲಾಗುತ್ತಿದೆ ಎನ್ನಲಾಗಿದೆ.

    13ನೇ ಬಾರಿ ಫ್ರೆಂಚ್ ಓಪನ್​ ಕಿರೀಟ ಗೆದ್ದ ನಡಾಲ್, 20 ಗ್ರಾಂಡ್ ಸ್ಲಾಂ ಗೆಲುವಿನ ಫೆಡರರ್ ದಾಖಲೆ ಸಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts