ಅಮೀರ್ ಖಾನ್ ಟರ್ಕಿಗೆ ಹೋಗಿದ್ದು ಯಾಕೆ?

blank

ಕಳೆದ ವಾರವಷ್ಟೇ ಅಕ್ಷಯ್ ಕುಮಾರ್ ತಮ್ಮ ತಂಡದ ಜತೆಗೆ `ಬೆಲ್ ಬಾಟಮ್’ ಶೂಟಿಂಗ್‍ಗೆಂದು ಸ್ಕಾಟ್‍ಲ್ಯಾಂಡ್‍ಗೆ ಪ್ರಯಾಣ ಬೆಳೆಸಿದ್ದರು. ಅದಾಗಿ ಕೆಲವೇ ದಿನಗಳ ಅಂತರದಲ್ಲಿ ಅಮೀರ್ ಖಾನ್ ಸಹ ತಮ್ಮ `ಲಾಲ್ ಸಿಂಗ್ ಛಡ್ಡಾ’ ಚಿತ್ರದ ಚಿತ್ರೀಕರಣಕ್ಕೆ ಟರ್ಕಿಗೆ ಹೋಗುತ್ತಾರೆ ಎಂಬ ಸುದ್ದಿಯಾಯಿತು.

blank

ಅಷ್ಟೇ ಅಲ್ಲ, ಸೋಮವಾರ ಇಂಟರ್‍ನೆಟ್‍ನಲ್ಲಿ ಅಮೀರ್ ಖಾನ್ ಅವರು ಏರ್‍ಪೋರ್ಟ್‍ನಲ್ಲಿ ನಿಂತಿರುವ ಫೋಟೋಗಳು ಹರಿದಾಡಿದರೆ, ಮಂಗಳವಾರ ಅವರು ಅದಾಗಲೇ ಶೂಟಿಂಗ್ ಪ್ರಾರಂಭಿಸಿಯೇ ಬಿಟ್ಟಿದ್ದಾರೆ ಎಂಬ ಸುದ್ದಿಗಳು ಅಲೆದಾಡುತ್ತಿವೆ. ಇಷ್ಟಕ್ಕೂ ಏನಾಗುತ್ತಿದೆ ಎಂದು ಹುಡುಕಹೊರಟರೆ, ಸಿಕ್ಕಿದ್ದು ಬೇರೆಯದೇ ಸುದ್ದಿ.

ಇದನ್ನೂ ಓದಿ: ನಟ ವಿಜಯ್​ ರಾಘವೇಂದ್ರರ ಕಾರಿಗೆ ಪೆಟ್ರೋಲ್​ ಬದಲು ಡೀಸೆಲ್​ ಹಾಕಿದ ಬಂಕ್ ಸಿಬ್ಬಂದಿ​: ಕಾರಣ ಹೀಗಿದೆ…

ಅಮೀರ್ ಖಾನ್ ಟರ್ಕಿಗೆ ಹೋಗಿದ್ದೇನೋ ನಿಜ. ಆದರೆ, ಅವರು ಹೋಗಿದ್ದು ಚಿತ್ರೀಕರಣಕ್ಕಲ್ಲ ಎಂಬುದು ಗೊತ್ತಿರಲಿ. ಚಿತ್ರದ ಶೂಟಿಂಗ್ ಶುರುವಾಗುವುದೇನಿದ್ದರೂ ಅಕ್ಟೋಬರ್‍ನಲ್ಲಂತೆ. ಅದಕ್ಕೂ ಮುನ್ನ, ಅಮೀರ್ ಖಾನ್ ತಮ್ಮ ತಂಡದವರ ಜತೆಗೆ ಲೊಕೇಶನ್ ನೋಡುವುದಕ್ಕೆ ಟರ್ಕಿಗೆ ಹೋಗಿದ್ದಾರೆ. ಎಲ್ಲೆಲ್ಲಿ ಏನೇನು ಚಿತ್ರೀಕರಣ ಮಾಡಬೇಕು ಎಂಬುದನ್ನು ನೋಡುವುದಕ್ಕೆ ಅವರೇ ಟರ್ಕಿಗೆ ಪ್ರಯಾಣ ಬೆಳೆಸಿದ್ದಾರೆ.

ಸದ್ಯಕ್ಕೆ ಲೊಕೇಶನ್ ಹಂಟಿಂಗ್‍ನಲ್ಲಿ ತೊಡಗಿಸಿಕೊಂಡಿರುವ ಅಮೀರ್ ಖಾನ್, ಇನ್ನು ಕೆಲವು ದಿನಗಳ ನಂತರ ಭಾರತಕ್ಕೆ ವಾಪಸ್ಸು ಬರಲಿದ್ದಾರೆ. ಇಲ್ಲಿ ಕೂತು ಇನ್ನೊಂದಿಷ್ಟು ಪ್ಲಾನ್ ಮಾಡಿ ಮತ್ತೆ ಅಕ್ಟೋಬರ್ ವೇಳೆಗೆ ತಮ್ಮ ತಂಡವನ್ನು ಕರೆದುಕೊಂಡು ಟರ್ಕಿಗೆ ಹೋಗಿ ಅಲ್ಲಿ ಚಿತ್ರೀಕರಣ ಮುಗಿಸಿ ಬರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಾಣಾ ಮದುವೆಗೆ ಪ್ರಭಾಸ್ ಯಾಕೆ ಹೋಗಲಿಲ್ಲ? ಕಾರಣ ಇಲ್ಲಿದೆ …

ಅಕ್ಟೋಬರ್‍ನಲ್ಲಿ ಪ್ರಾರಂಭವಾಗುವ ಕೊನೆಯ ಹಂತದ ಶೂಟಿಂಗ್ ವರ್ಷದ ಕೊನೆಯ ವೇಳೆಗೆ ಮುಗಿದರೂ, ಚಿತ್ರ ಬಿಡುಗುಡೆಯಾಗುವುದೇನಿದ್ದರೂ 2021ರ ಕ್ರಿಸ್ಮಸ್‍ಗೆ. ಈಗಾಗಲೇ ಚಿತ್ರತಂಡ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

`ಲಾಲ್ ಸಿಂಗ್ ಛಡ್ಡಾ’ ಚಿತ್ರವು ಹಾಲಿವುಡ್‍ನ `ಫಾರೆಸ್ಟ್ ಗಂಪ್’ನ ರೀಮೇಕ್ ಆಗಿದ್ದು, ಚಿತ್ರದಲ್ಲಿ ಅಮೀರ್ ಖಾನ್, ಕರೀನಾ ಕಪೂರ್, ವಿಜಯ್ ಸೇತುಪತಿ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

PHOTOS: ರಿಷಬ್ ಶೆಟ್ಟಿ ಪುತ್ರನ ಕೃಷ್ಣನ ಅವತಾರ ಹೇಗಿದೆ ನೋಡಿ…

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank