More

    ಆಮೀರ್​, ರಾಣಾ, ರಾಕುಲ್​ಗೆ ರಿಯಾ ಫೋನ್​ ಮಾಡಿದ್ದೇಕೆ?

    ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಕಳೆದ ವರ್ಷ ಯೂರೋಪ್​ ಟ್ರಿಪ್​ಗೆ ಹೋದ ಸಂದರ್ಭದಲ್ಲಿ ಏನೇನಾಯಿತು ಎಂಬುದನ್ನು ರಿಯಾ ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದರು. ಈಗ ಈ ಪ್ರಕರಣದಲ್ಲಿ ಇನ್ನಷ್ಟು ವಿಚಾರಗಳು ಬಯಲಿಗೆ ಬಂದಿವೆ.

    ಪ್ರಮುಖವಾಗಿ ಆಮೀರ್​ ಖಾನ್​, ಶ್ರದ್ಧಾ ಕಪೂರ್​, ರಾಕುಲ್​ ಪ್ರೀತ್​ ಸಿಂಗ್, ಆದಿತ್ಯ ರಾಯ್​ ಕಪೂರ್​, ರಾಣಾ ದಗ್ಗುಬಾಟಿ, ಸರೋಜ್​ ಖಾನ್​, ಸನ್ನಿ ಸಿಂಗ್​ ಮುಂತಾದವರಿಗೆ ರಿಯಾ ಚಕ್ರವರ್ತಿ ಹಲವು ಬಾರಿ ಫೋನ್​ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಯಾವ ವಿಷಯವಾಗಿ ಮಾತನಾಡಿದ್ದಾರೆ ಎಂಬ ವಿಷಯ ಇನ್ನಷ್ಟೇ ತನಿಖೆಯಾಗಬೇಕಿದೆ.

    ಇದನ್ನೂ ಓದಿ: ಮಲ್ನಾಡ್​ ಮಂಕಿಯನ್ನು ನೋಡ್ಬೇಕಾ?; ದಿಗಂತ್​ ತೋರಿಸ್ತಿದ್ದಾರೆ ನೋಡಿ..

    ಇತ್ತೀಚೆಗೆ ರಿಯಾ ಅವರ ಕಾಲ್​ ಡೀಟೇಲ್​ ರೆಕಾರ್ಡ್ಸ್​ ತೆಗೆಸಲಾಗಿದ್ದು, ಈ ಪೈಕಿ ಅವರು ಕೆಲವರಿಗೆ ಫೋನ್​ ಮಾಡಿದ್ದಾರೆ ಎಂದು ಹೇಳಲಾಗಿದೆ. ಪ್ರಮುಖವಾಗಿ ಆಮೀರ್​ ಖಾನ್​ಗೆ ರಿಯಾ ಒಮ್ಮೆ ಫೋನ್​ ಮಾಡಿದ್ದು, ಇದಕ್ಕೆ ಬದಲಿಯಾಗಿ ಆಮೀರ್​ ಮೂರು ಎಸ್​.ಎಂ.ಎಸ್​ಗಳನ್ನು ಕಳಿಸಿದ್ದಾರಂತೆ.

    ಇನ್ನು ರಾಕುಲ್​ ಪ್ರೀತ್​ ಸಿಂಗ್​​ಗೆ ರಿಯಾ 30 ಬಾರಿ ಕಾಲ್​ ಮಾಡಿದ್ದು, ಬದಲಿಯಾಗಿ ರಾಕುಲ್​ 14 ಬಾರಿ ಫೋನ್​ ಮಾಡಿದ್ದಾರಂತೆ. ಅವರಿಬ್ಬರ ಮಧ್ಯೆ ಹಲವು ಎಸ್​.ಎಂ.ಎಸ್​ಗಳು ಎಕ್ಸ್​ಚೇಂಜ್​ ಆಗಿವೆ. ಇನ್ನು ಆದಿತ್ಯ ರಾಯ್​ ಕಪೂರ್​ಗೆ ರಿಯಾ 16 ಬಾರಿ ಫೋನ್​ ಮಾಡಿದರೆ, ಅವರು ರಿಯಾಗೆ ಏಳು ಬಾರಿ ಫೋನ್​ ಮಾಡಿದ್ದಾರೆ. ಶ್ರದ್ಧಾ ಕಪೂರ್​ಗೆ ರಿಯಾ ಮೂರು ಬಾರಿ ಕಾಲ್​ ಮಾಡಿದರೆ, ಶ್ರದ್ಧಾ ಎರಡು ಬಾರಿ ವಾಪಸ್ಸು ಮಾಡಿದ್ದಾರೆ.

    ಇದನ್ನೂ ಓದಿ: ಪುನೀತ್​ ಬಿಡುಗಡೆ ಮಾಡಲಿದ್ದಾರೆ ಧನಂಜಯ್​ ಹೊಸ ಚಿತ್ರದ ಟೈಟಲ್​ …

    ಎಲ್ಲಕ್ಕಿಂತ ಹೆಚ್ಚು ವಿಶೇಷ ಎಂದರೆ, ‘ಬಾಹುಬಲಿ’ ಖ್ಯಾತಿಯ ರಾಣಾ ದಗ್ಗುಬಾಟಿಗೆ ರಿಯಾ ಏಳು ಬಾರಿ ಕಾಲ್​ ಮಾಡಿರುವುದು. ಇತ್ತೀಚೆಗಷ್ಟೇ ಸಪ್ತಪದಿ ತುಳಿದ ರಾಣಾಗೂ ರಿಯಾಗೂ ಹೇಗೆ ಪರಿಚಯ ಎಂಬ ವಿಷಯ ಹಲವರನ್ನು ಕಾಡುತ್ತಿದೆ.

    ಇವರಷ್ಟೇ ಅಲ್ಲ, ತಮ್ಮ ಕುಟುಂಬದವರು ಮತ್ತು ಸುಶಾಂತ್​ ಮ್ಯಾನೇಜರ್​ಗಳ ಜತೆಗೂ ರಿಯಾ ಹಲವು ಬಾರಿ ಕಾಲ್​ ಮಾಡಿ ಮಾತಾಡಿದ್ದಾರೆ. ಇನ್ನು ಸುಶಾಂತ್​ ಜತೆ 2019ರ ಡಿಸೆಂಬರ್​ನಿಂದ ಈ ವರ್ಷದ ಜೂನ್​ 14ರವರೆಗೂ 51 ಬಾರಿ ಫೋನ್​ನಲ್ಲಿ ಮಾತಾಡುವುದರ ಜತೆಗೆ, ಎರಡು ಎಸ್​.ಎಂ.ಎಸ್​ಗಳನ್ನೂ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಅವರಿಬ್ಬರ ಮಧ್ಯದ ಫೋನ್​ ಸಂಭಾಷಣೆ ಜೂನ್​ 5ರಂದು ಕೊನೆಯ ಬಾರಿಗೆ ಆಗಿದೆ. ಅದಾಗಿ ಒಂಬತ್ತು ದಿನಗಳಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅತೀ ಹೆಚ್ಚು ಸಂಭಾವನೆ ಪಡೆಯುವ ನಟ … ಫೋರ್ಬ್ಸ್ ಪಟ್ಟಿಯಲ್ಲಿ ಏಕೈಕ ಭಾರತೀಯ ಅಕ್ಷಯ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts