More

    ಅನುಮಾನಾಸ್ಪದ ಅಂತ್ಯ ಕಂಡ ಉದ್ಯಮಿ ಪ್ರದೀಪ್​ ಗನ್​ ಖರೀದಿಸಿದ್ದು ಏಕೆ?

    ಬೆಂಗಳೂರು: ರಾಜಕಾರಣಿಯೊಬ್ಬರ ಹೆಸರು ಸೇರಿದಂತೆ ಪ್ರಭಾವಿಗಳ ಹೆಸರು ಉಲ್ಲೇಖಿಸಿ ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಸಂಚಲನ ಸೃಷ್ಟಿಸಿತ್ತು. ಬೆಂಗಳೂರಿನ ಎಚ್​​ಎಸ್​ಆರ್ ಲೇಔಟ್ ಬಳಿಯ ಅಮಲೀಪುರದ ನಿವಾಸಿ ಪ್ರದೀಪ್ (47) ಆತ್ಮಹತ್ಯೆಗೆ ಶರಣಾಗಿದ್ದು ಸಾವಿಗೂ ಮುನ್ನ ಮಾಜಿ ಸಚಿವ ಹಾಗೂ ಐವರು ಉದ್ಯಮಿಗಳ ಹೆಸರನ್ನು ಡೆತ್​ನೋಟ್​ನಲ್ಲಿ ಬರೆದಿದ್ದರು. ಅಂದ ಹಾಗೆ ಇವರು ಯಾವ ಕಾರಣ ಕೊಟ್ಟು ಗನ್​ ಪಡೆದರು ಎನ್ನುವ ಮಾಹಿತಿಯೂ ಬಹಿರಂಗವಾಗಿದೆ.

    ತಲೆಗೆ ಗುಂಡು ಹಾರಿಸಿಕೊಂಡ ಉದ್ಯಮಿ ಪ್ರದೀಪ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಮೂರು ಡೆತ್ ನೋಟ್ ಪತ್ತೆಯಾಗಿವೆ. ಒಂದು ಕಡೆ ಮಿಸ್ ಆದರೂ ಮತ್ತೊಂದು ಕಡೆ ಡೆತ್ ‌ನೋಟ್ ಸಿಗಬೇಕು, ತನಗಾದ ಅನ್ಯಾಯ ಸಮಾಜಕ್ಕೆ ಗೊತ್ತಾಗಬೇಕು ಅಂತ ಈ ರೀತಿ ಮೂರು ಡೆತ್ ನೋಟ್ ಬರೆಯುವ ನಿರ್ಧಾರವನ್ನು ಉದ್ಯಮಿ ಮಾಡಿದ್ದರು ಎನ್ನುವುದು ತಿಳಿದುಬಂದಿದೆ.

    ಹಾಗಾದ್ರೆ ಉದ್ಯಮಿ ಪ್ರದೀಪ್ ಯಾವಾಗ ಯಾಕೆ ಗನ್ ಪಡೆದಿದ್ರು? ಗನ್ ಲೈಸೆನ್ಸ್ ಗೆ ಅಪ್ಲೆ ಮಾಡುವಾಗ ಏನೆಲ್ಲಾ ಕಾರಣಗಳನ್ನು ನೀಡಿದ್ರು? 2017-18 ರಲ್ಲಿ ಬೆಳ್ಳಂದೂರಿನಲ್ಲಿ ಉದ್ಯಮಿ ಪ್ರದೀಪ್, ಓಪೋಸ್ ಅನ್ನೋ ಪಬ್​ ತೆರೆಸಿದ್ದರು. ತನ್ನ ಐವರು ಸ್ನೇಹಿತರ ಜೊತೆಗೂಡಿ 2.25 ಕೋಟಿ ಬಂಡವಾಳ ಹಾಕಿ ಪಬ್ ಶುರು ಮಾಡಿದ್ದರು. ಓಪೋಸ್ ಪಬ್ ತೆರೆಯುವಾಗ ಗನ್ ಸೈಲೆನ್ಸ್​ಗೆ ಅರ್ಜಿ ಸಲ್ಲಿಸಿದ್ದರು.

    ‘ಉದ್ಯಮಿ ಆಗಿದ್ದ ಕಾರಣಕ್ಕೆ ವ್ಯವಹಾರ ನಿಮಿತ್ತವಾಗಿ ಓಡಾಡುತ್ತಾ ಇರ್ತೀನಿ. ಹೀಗಾಗಿ ಗನ್ ಲೈಸನ್ಸ್ ಕೊಡಿ’ ಎಂದು ಹೇಳಿ ಉದ್ಯಮಿ ಪ್ರದೀಪ್ ಅರ್ಜಿ ಸಲ್ಲಿಸಿದ್ದರು. 2018ರಿಂದ ಪ್ರತಿ ವರ್ಷವೂ ಗನ್​ ಲೈಸೆನ್ಸ್​ ರಿನಿವಲ್ ಮಾಡಿಸುತ್ತಾ ಇದ್ದರು. ಕೋವಿಡ್ ನಿಂದ 2019 ರಲ್ಲಿ ಪಬ್ ಕ್ಲೋಸ್ ಆಗಿದ್ದು ಇದುವರೆಗೂ ಓಪನ್ ಆಗಿಲ್ಲ. ಆದರೆ 2022ರಲ್ಲಿಯೂ ಪ್ರದೀಪ್, ಗನ್​ ಲೈಸೆನ್ಸಸ್​​ ರಿನಿವಲ್ ಮಾಡಿಕೊಂಡಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಗನ್​ ಲೈಸೆನ್ಸ್​ಗೆ ಅರ್ಜಿ ಸಲ್ಲಿಸುವಾಗ ಇವರಿಗೆ ಯಾವುದಾದರು ರೀತಿಯ ಬೆದರಿಕೆಗಳು ಇದ್ದವೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts