More

    ಸಿದ್ದು-ಡಿಕೆಶಿ ನಡುವೆ ಸಿಎಂ ಕುರ್ಚಿಗಾಗಿ ಪೈಪೋಟಿ; ‘ನೂತನ ಸಿಎಂಗೆ ಶುಭಾಶಯ’ ಕೋರಿ ಬ್ಯಾನರ್ ಅಳವಡಿಸಿದ ಬೆಂಬಲಿಗರು!

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ, ರಾಜ್ಯದ ನೂತನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತಹೂಲ ರಾಜ್ಯದ ಜನರಲ್ಲಿ ಹೆಚ್ಚಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ನಡುವೆ ಸಿಎಂ ಕುರ್ಚಿಗಾಗಿ ಕಸರತ್ತು ನಡೆಯುತ್ತಿದೆ. ಇದೆಲ್ಲದರ ನಡುವೆ ಬೆಂಬಲಿಗರು ಮಾತ್ರ ತಮ್ಮ ತಮ್ಮ ನಾಯಕರ ಭಾವಚಿತ್ರ ಬಳಸಿಕೊಂಡು “ರಾಜ್ಯದ ನೂತನ ಮುಖ್ಯಮಂತ್ರಿ”ಗೆ ಶುಭಾಶಯ ಎಂದು ಬ್ಯಾನರ್ ಅಳವಡಿಸುತ್ತಿದ್ದಾರೆ.

    ಇದನ್ನೂ ಓದಿ: ಸಿಎಂ ಸ್ಥಾನ ಸಿಗದಿದ್ದರೆ ಸಚಿವ ಸ್ಥಾನವೂ ಬೇಡ: ಡಿಕೆಶಿ ಬಿಗಿ ಪಟ್ಟು, ಕಾಂಗ್ರೆಸ್​ ಹೈಕಮಾಂಡ್ ಕಂಗಾಲು

    ಸಿದ್ದು-ಡಿಕೆಶಿ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ!

    ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ ಡಿಕೆಶಿ, ಬಿಗಿ ಪಟ್ಟು ಹಿಡಿದಿರುವುದರಿಂದ ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸದ್ಯ ಕಾಂಗ್ರೆಸ್​ ಮುಂದು ಎರಡೂವರೆ ವರ್ಷ ಸಿದ್ದರಾಮಯ್ಯ ಇನ್ನೆರೆಡೂವರೆ ವರ್ಷ ಡಿಕೆಶಿ ಎಂಬ ಸೂತ್ರ ರೆಡಿಯಾಗಿದೆ. ಆದರೆ, ಈ ಸೂತ್ರಕ್ಕೆ ಡಿಕೆಶಿ ಒಪ್ಪಿಗೆ ನೀಡುತ್ತಿಲ್ಲ ಎಂಬ ಮಾತುಗಳು ಕಾಂಗ್ರೆಸ್​ ವಲಯದಲ್ಲಿ ಕೇಳಿಬರುತ್ತಿದೆ. ಸಿಎಂ ಸ್ಥಾನ ಸಿಗದಿದ್ದರೆ ಸಚಿವ ಸ್ಥಾನವೂ ಬೇಡ ಎಂದು ಡಿಕೆಶಿ ಹೇಳುತ್ತಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯ ಹತ್ಯೆ ಪ್ರಕರಣ | ಆರೋಪಿಗೆ ಯಾವುದೇ ಮಾನಸಿಕ ಸಮಸ್ಯೆಗಳಿಲ್ಲ; ವೈದ್ಯರಿಂದ ಸ್ಪಷ್ಟನೆ

    ಪಟ್ಟು ಬಿಡದ ಡಿಕೆಶಿ

    ಡಿಕೆಶಿ ಬಿಗಿ ಪಟ್ಟಿಗೆ ಇದೀಗ ಕಾಂಗ್ರೆಸ್​ ಹೈಕಮಾಂಡ್​ ಕಂಗಲಾಗಿದೆ. ಕಾಂಗ್ರೆಸ್​ ಅಧಿಕಾರಕ್ಕೆ ತರುವಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರದ್ದೂ ಪಾತ್ರವಿದೆ. ಆದರೆ, ಸಿದ್ದರಾಮಯ್ಯರನ್ನು ಕಡೆಗಣಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಇದೇ ರೀತಿ ಡಿಕೆಶಿ ಪಟ್ಟನ್ನು ಅಲ್ಲಗಳೆಯುವಂತಿಲ್ಲ. ಇದೀಗ ಈ ಕಗ್ಗಂಟ್ಟನ್ನು ಕಾಂಗ್ರೆಸ್​ ಹೈಕಮಾಂಡ್​ ಹೇಗೆ ಬಗೆಹರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts