INDIAಗೆ ಯಾರ ನೇತೃತ್ವ?: ಮಲ್ಲಿಕಾರ್ಜುನ ಖರ್ಗೆ ಉತ್ತರ ಇದು..

UPA
Published on

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಯ ಮೈತ್ರಿಕೂಟವನ್ನು ಮಣಿಸಲು ಯುಪಿಯ ಮೈತ್ರಿಕೂಟದ ಪಕ್ಷಗಳೆಲ್ಲ ಒಂದಾಗಿದ್ದು, ಬೆಂಗಳೂರಿನಲ್ಲಿ ತಮ್ಮ ಕಾರ್ಯತಂತ್ರವನ್ನು ರೂಪಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದಲ್ಲಿ 26 ಪಕ್ಷಗಳು ಎನ್​ಡಿಎ ವಿರುದ್ಧ ಒಂದುಗೂಡಿದ್ದು, ಈ ಒಕ್ಕೂಟಕ್ಕೆ 'INDIA' ಎಂದು ಹೊಸ ಹೆಸರೊಂದನ್ನು ಇಡಲಾಗಿದೆ. INDIA ಅಂದರೆ ಇಂಡಿಯನ್ ನ್ಯಾಶನಲ್ ಡೆಮಾಕ್ರಟಿಕ್ ಇನ್‌ಕ್ಲೂಸಿವ್​ ಅಲಯನ್ಸ್.

I: Indian

N: National

D: Democractic

I: Inclusive

A: Alliance

ಹೀಗೆ ತಮ್ಮ ಒಕ್ಕೂಟಕ್ಕೆ INDIA ಎಂದು ಹೆಸರಿಟ್ಟ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರಕರ್ತರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಈ ಒಕ್ಕೂಟದ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಗ್ಗೆ ಚರ್ಚಿಸಿದ್ದೀರಾ ಎಂಬ ಪ್ರಶ್ನೆಗೆ, ಆಕ್ಷೇಪಣೆ ಆಹ್ವಾನಿಸಲಾಗಿದೆ. ನಾವು ಅದರ ಬಗ್ಗೆ ಚರ್ಚೆ ಮಾಡಿಲ್ಲ. ಬೆಲೆ ಏರಿಕೆ, ಮಣಿಪುರ, ನಿರುದ್ಯೋಗ ವಿಚಾರ ಚರ್ಚೆ ಮಾಡಿದ್ದೇವೆ ಎಂದು ಖರ್ಗೆ ಉತ್ತರಿಸಿದ್ದಾರೆ.

ಪ್ರಾದೇಶಿಕ ಪಕ್ಷಗಳು ಆತಂಕದಲ್ಲಿವೆಯೇ ಎಂಬ ಪ್ರಶ್ನೆಗೆ ಖರ್ಗೆ, ಮಹಾರಾಷ್ಟ್ರದ ಬೆಳವಣಿಗೆಯಲ್ಲಿ‌ ಎನ್​ಸಿಪಿ ಸೃಷ್ಟಿಕರ್ತ ಇಲ್ಲಿದ್ದಾರೆ, ಜನರ ಅವರೊಟ್ಟಿಗಿದ್ದಾರೆ.‌ ನಮಗೆ ಗೆಲುವಾಗುತ್ತದೆ ಎಂದಷ್ಟೇ ಹೇಳಿದರು.

ಮುಂದಿನ ಚುನಾವಣೆಯಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಅದೊಂದು ದೊಡ್ಡ ವಿಷಯವಲ್ಲ. ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಖರ್ಗೆ ಉತ್ತರಿಸಿದ್ದಾರೆ.

26 ಪಕ್ಷಗಳನ್ನು ಒಳಗೊಂಡ 'INDIA'ಗೆ ನೇತೃತ್ವ ಯಾರದ್ದು ಎಂಬ ಪ್ರಶ್ನೆಗೆ, ಅದರ ಮುಂದಾಳತ್ವ ತೆಗೆದುಕೊಳ್ಳಲು ಹನ್ನೊಂದು ಮಂದಿಯ ಸಮನ್ವಯ ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯೇ ಅದನ್ನು ತೀರ್ಮಾನ ಮಾಡಲಿದೆ ಎಂದ ಖರ್ಗೆ, ಒಟ್ಟಿಗೆ ಹೋರಾಡುವುದೇ ನಮ್ಮ ಉದ್ದೇಶ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net