More

    IPL 2024: ಐಪಿಎಲ್​ಗೆ ಎಂಟ್ರಿ ಕೊಟ್ಟ 17 ವರ್ಷದ ಕ್ವೆನಾ ಮಫಕಾ! ಯಾರೀ ‘ಬೇಬಿ ರಬಾಡ’?

    ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್ 2024ರ ಸೀಸನ್​ ಆರಂಭಗೊಂಡ ಮೊದಲ ದಿನದಿಂದಲೂ ಕ್ರಿಕೆಟ್ ಅಭಿಮಾನಿಗಳಲ್ಲಿ ಅದೇನೋ ಉತ್ಸಾಹ, ಕಿಚ್ಚು! ತಮ್ಮ ನೆಚ್ಚಿನ ತಂಡ ಅದ್ದೂರಿ ಪ್ರದರ್ಶನದಿಂದ ಪ್ಲೇ-ಆಫ್​ಗೆ ಎಂಟ್ರಿ ಕೊಡಬೇಕು, ಅಲ್ಲಿಂದ ಫೈನಲ್ ತಲುಪಿ ಎದುರಾಳಿಯನ್ನು ಭಾರೀ ಅಂತರದಿಂದ ಮಣಿಸಿ, ಟ್ರೋಫಿ ಗೆದ್ದು ಬೀಗಬೇಕು ಎಂಬ ಆಸೆ. ಆದರೆ, ಇದು ಈಡೇರುವುದು ಅಷ್ಟು ಸುಲಭದ ಮಾತಲ್ಲ.

    ಇದನ್ನೂ ಓದಿ: ಅಕ್ರಮ ಕಟ್ಟಡಗಳ ವಿರುದ್ಧ ಹೆಮ್ಮಿಗೆಪುರ ನಿವಾಸಿಗಳ ಹೋರಾಟ ; ಭೂಗಳ್ಳರ ವಿರುದ್ಧ ಸಮರ

    ಇನ್ನು ಇಂದು (ಮಾ.27) ಹೈದರಾಬಾದ್​ನಲ್ಲಿ ನಡೆಯುತ್ತಿರುವ ಸನ್​ರೈಸರ್ಸ್​ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯಗಳು ಬಹಳ ರೋಚಕವಾಗಿ ಆರಂಭಗೊಂಡಿದ್ದು, ಟಾಸ್​ ಗೆದ್ದ ಎಂಐ ಮೊದಲು ಬೌಲ್ ಮಾಡಲು ಆಯ್ದುಕೊಂಡಿತು. ಇನ್ನು ಇದೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ 17 ವರ್ಷದ ಕ್ವೆನಾ ಮಫಕಾ ಎಂಬ ಹುಡುಗ, ಇಂದಿನ ಎಸ್​ಆರ್​ಎಚ್​ ವಿರುದ್ಧದ ಪಂದ್ಯದ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ.

    17 ವರ್ಷದ ಹುಡುಗ ಐಪಿಎಲ್​ಗೆ? ಅದರಲ್ಲೂ ಮುಂಬೈ ಇಂಡಿಯನ್ಸ್ ಪರವೇ? ಯಾರು ಈ ಯುವ ವೇಗಿ ಎಂಬ ನಿಮ್ಮ ಹತ್ತು ಹಲವು ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ. 2024ರ ಅಂಡರ್​ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ತಮ್ಮ ವೇಗದ ಬೌಲಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟಿಸಿದ್ದಾರೆ ಈ ಹುಡುಗ. ಈತ ನೋಡಲು ಸೌತ್ ಆಫ್ರಿಕಾದ ಕಗಿಸೋ ರಬಾಡರಂತೆಯೇ ಕಾಣುತ್ತಾರೆ.

    ಇದನ್ನೂ ಓದಿ: ಚುನಾವಣಾ ಬಾಂಡ್ ಹಗರಣ ಕುರಿತು ಸುಪ್ರೀಂಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಸಿಪಿಐ (ಎಂ) ಒತ್ತಾಯ

    ವೇಗಿ ಕಗಿಸೊ ರಬಾಡರಂತೆಯೇ ಹೋಲುವ ಕ್ವೆನಾ ಮಫಾಕಾರನ್ನು ‘ಬೇಬಿ ರಬಾಡ’ ಎಂದೇ ಕರೆಯುತ್ತಾರೆ. ಅಂಡರ್-19 ವಿಶ್ವಕಪ್‌ನಲ್ಲಿ ಅದ್ಭುತ ವೇಗಿ ಆಗಿ ಹೊರಹೊಮ್ಮಿದ್ದ ದಕ್ಷಿಣ ಆಫ್ರಿಕಾದ ಈ ಯುವ ಬೌಲರ್ ಕ್ವೆನಾ ಮಫಾಕಾ, ಇಂದಿನ ಪಂದ್ಯದ ಮೂಲಕ ಐಪಿಎಲ್​ಗೆ ಎಂಟ್ರಿಕೊಟ್ಟಿರುವುದು ಅನೇಕರಲ್ಲಿ ಆಶ್ಚರ್ಯ ಉಂಟುಮಾಡಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದಿರುವ ಈತ ಇಂಜುರಿಯಿಂದ ಈ ಬಾರಿಯ ಟೂರ್ನಿಯಿಂದ ಹೊರಗುಳಿದ ಶ್ರೀಲಂಕಾದ ವೇಗದ ಬೌಲರ್ ದಿಲ್ಶನ್ ಮಧುಶಂಕ ಬದಲಿಗೆ ಆಡಲಿದ್ದಾರೆ.

    ವಿಶ್ವ ಕ್ರಿಕೆಟ್‌ನಲ್ಲಿ ಬಹಳ ಬೇಗನೇ ಹೊರಹೊಮ್ಮುತ್ತಿರುವ ಅತ್ಯುತ್ತಮ ವೇಗದ ಬೌಲರ್​ಗಳಲ್ಲಿ ಒಬ್ಬರಾಗಿದ್ದಾರೆ ಈ ಯುವ ವೇಗಿ. ಇತ್ತೀಚೆಗಷ್ಟೇ ಮುಗಿದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ವೇಳೆ ಶ್ರೀಲಂಕಾದ ವೇಗದ ಬೌಲರ್ ದಿಲ್ಶನ್ ಮಧುಶಂಕ ಗಾಯಗೊಂಡಿದ್ದರು. ಐಪಿಎಲ್ ಹರಾಜಿನಲ್ಲಿ 4.6 ಕೋಟಿ ರೂ.ಗೆ ಇವರನ್ನು ಖರೀದಿಸಲಾಗಿತ್ತು. ನಿರೀಕ್ಷಿಸಿದಂತೆ ಈ ಬಾರಿ ಮುಂಬೈ ಇಂಡಿಯನ್ಸ್ ಪರ ಇವರು ಆಡಬೇಕಿತ್ತು. ಆದರೆ, ಇಂಜುರಿಯಿಂದ ಹೊರಗುಳಿದ ಕಾರಣ, ಮಧುಶಂಕ ಬದಲಿಗೆ ಬೇಬಿ ರಬಾಡ ಕಣಕ್ಕಿಳಿದಿದ್ದಾರೆ,(ಏಜೆನ್ಸೀಸ್). 

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts