More

    ಡಬ್ಲ್ಯುಎಚ್​ಒ ದೇಣಿಗೆ ಜಟಾಪಟಿ

    ಜಗತ್ತಿಗೇ ಕಂಟಕಪ್ರಾಯವಾದ ಕರೊನಾ ವೈರಸ್ ನಿರ್ವಹಣೆ ಹಾಗೂ ಚೀನಾ ಮೇಲಿನ ಅವಲಂಬನೆ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ (ಡಬ್ಲ್ಯುಎಚ್​ಒ) ಮುನಿಸಿಕೊಂಡಿರುವ ಅಮೆರಿಕ, ಸಂಸ್ಥೆಯಿಂದ ಹೊರ ನಡೆಯುವುದಾಗಿಯೂ ಬೆದರಿಕೆ ಹಾಕಿದೆ. ಜಾಗತಿಕ ಆರೋಗ್ಯ ವೇದಿಕೆಯೊಂದಿಗೆ ‘ದೊಡ್ಡಣ್ಣ’ನ ಸಂಬಂಧ ಹಾಗೂ ಅದರ ಆರ್ಥಿಕ ಸ್ಥಿತಿಗತಿ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಬಿಟ್ಟು 30 ದಿನದೊಳಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಧೋರಣೆ ಪ್ರದರ್ಶಿಸದಿದ್ದರೆ ಆರ್ಥಿಕ ನೆರವನ್ನು ಕಾಯಂ ಆಗಿ ಸ್ಥಗಿತಗೊಳಿಸುವುದಾಗಿ ಇತ್ತೀಚೆಗೆ ಡಬ್ಲ್ಯುಎಚ್​ಒ. ಮಹಾ ಕಾರ್ಯದರ್ಶಿ ಟೆಡ್ರೋಸ್ ಘಬ್ರಿಯೆಸಸ್​ರಿಗೆ ಬರೆದ ಪತ್ರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

    ನೀತಿನಿರ್ಧಾರಕ ಸಮಿತಿ: ವಿಶ್ವ ಆರೋಗ್ಯ ಅಧಿವೇಶನ (ಡಬ್ಲ್ಯುಎಚ್​ಎ) ನೀತಿ ನಿರ್ಧಾರಕ ಸಮಿತಿಯಾಗಿದ್ದು ಪ್ರತಿ ವರ್ಷ ಜಿನೀವಾದಲ್ಲಿ ನಡೆಯುವ ಅಧಿವೇಶನವು ಜಾಗತಿಕ ಆರೋಗ್ಯ ವೇದಿಕೆಯ ವಾರ್ಷಿಕ ಕಾರ್ಯಕ್ರಮ ರೂಪಿಸುತ್ತದೆ. ಮಹಾ ನಿರ್ದೇಶಕರ ನೇಮಕ ಅಧಿಕಾರವೂ ಅಧಿವೇಶನಕ್ಕಿರುತ್ತದೆ.

    ಇದನ್ನೂ ಓದಿ:  ನಿಮಗೆ ತಿಳಿದಿರಲಿ- ಪ್ರಾಣಿ ಸಂಕುಲಕ್ಕೂ ಅವುಗಳದ್ದೇ ಆದ ಕಾರಿಡಾರ್​ಗಳಿವೆ….

    ಯಾರಿಂದ ಎಷ್ಟು ದೇಣಿಗೆ?: ಡಬ್ಲ್ಯುಎಚ್​ಒ ಸ್ಥಾಪನೆಯಲ್ಲಿ ವಿಶ್ವದ ಬಹುತೇಕ ದೇಶಗಳು, ಸಂಘಟನೆಗಳು, ವಿಶ್ವಸಂಸ್ಥೆ ಮೊದಲಾದವುಗಳ ದೇಣಿಗೆ ಪಾತ್ರ ಡಬ್ಲ್ಯುಎಚ್​ಒ ದೇಣಿಗೆ ಜಟಾಪಟಿದೊಡ್ಡದಿದೆ. ಅಮೆರಿಕದಂಥ ಪ್ರಮುಖ ಸದಸ್ಯ ದೇಶಗಳ ಕೊಡುಗೆ ಶೇ. 35.41, ಪ್ರಮಾಣೀಕೃತ (ಅಸೆಸ್ಡ್) ದೇಣಿಗೆ ಶೇ. 15.66, ಸಂಘಟನೆಗಳ ಕೊಡುಗೆ ಶೇ. 9.33 ಆಗಿದೆ. ವಿಶ್ವಸಂಸ್ಥೆ ಶೇ. 8.1 ದೇಣಿಗೆ ಸಲ್ಲಿಸಿದ್ದು ಉಳಿದ ಹಣ ಸಣ್ಣಪುಟ್ಟ ದೇಣಿಗೆಗಳಿಂದ ಬರುತ್ತದೆ. ಡಬ್ಲೂ್ಯಎಚ್​ಒ ಒಟ್ಟು ಹಣಕಾಸಿನಲ್ಲಿ ಅಮೆರಿಕದ ಪಾಲು ಶೇಕಡಾ 15ರಷ್ಟಿದ್ದು, ಸದಸ್ಯ ರಾಷ್ಟ್ರಗಳ ಕೊಡುಗೆಯಲ್ಲಿ ಅಮೆರಿಕದ ಪಾಲು ಶೇ. 31 ಆಗಿದೆ. ಎರಡೂ ವಿಷಯಗಳಲ್ಲಿ ಇದು ಅತಿ ದೊಡ್ಡ ಕೊಡುಗೆಯಾಗಿದೆ. ಸದಸ್ಯ

    ರಾಷ್ಟ್ರಗಳ ಪಾಲಿನಲ್ಲಿ ಭಾರತದ ಕೊಡುಗೆ ಶೇ.1 ಮಾತ್ರ. ಎಷ್ಟು ಕೊಡುಗೆ ನೀಡ ಬೇಕೆಂಬುದನ್ನು ಸದಸ್ಯ ದೇಶಗಳು ನಿರ್ಧರಿಸುತ್ತವೆ. ಅವುಗಳು ದೇಣಿಗೆ ನೀಡದಿರಲೂ ಬಹುದು. ಇಂಥ ಸನ್ನಿವೇಶದಲ್ಲಿ ಒಟ್ಟು ಹಣಕಾಸಿನ ಶೇಕಡಾ 15ರಷ್ಟು ಕಳೆದುಕೊಂಡರೆ ಡಬ್ಲ್ಯುಎಚ್​ಓ ಅನುಭವಿಸಬಹುದಾದ ಅಗಾಧ ನಷ್ಟ ಊಹಿಸಿಕೊಳ್ಳಬಹುದು. ಅಮೆರಿಕ ಹೊರತಾಗಿ ಇತರ ದೇಶಗಳು ದೇಣಿಗೆ ನೀಡಿದರೆ ಗಂಭೀರ ಸಮಸ್ಯೆ ಆಗಲಾರದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ

    ಯಾರಿಗೆ ಎಷ್ಟು?: ಆಫ್ರಿಕಾ ದೇಶಗಳು ಡಬ್ಲ್ಯುಎಚ್​ಒ ಯೋಜನೆಗಳಿಗಾಗಿ 60 ಕೋಟಿ ಡಾಲರ್ ನೆರವು ಪಡೆದಿವೆ. ಭಾರತ ಸಹಿತ ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ 375 ಮಿಲಿಯನ್ ಡಾಲರ್, ಅಮೆರಿಕಕ್ಕೆ 62.2 ಮಿಲಿಯನ್ ಡಾಲರ್ ನೆರವು ಸಿಕ್ಕಿದೆ. ಅತಿ ಹೆಚ್ಚು ನಿಧಿ ಕೊಡುವ ರಾಷ್ಟ್ರ ಅಮೆರಿಕಕ್ಕೆ ಅತಿ ಕಡಿಮೆ ನೆರವು ಲಭ್ಯವಾಗುತ್ತಿದೆ. ಭಾರತ ಡಬ್ಲ್ಯುಎಚ್​ಒದ ಆಗ್ನೇಯ ಏಷ್ಯಾ ವಲಯದ ಸದಸ್ಯ ದೇಶವಾಗಿದೆ.

    ಚಟುವಟಿಕೆ ಏನು?: ಡಬ್ಲ್ಯುಎಚ್​ಒ ಜಗತ್ತಿನಾದ್ಯಂತ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುತ್ತದೆ. ಆರೋಗ್ಯ ಸಂಬಂಧಿ ಕಾರ್ಯಕ್ರಮಗಳಿಗೆ ನೆರವು ನೀಡುತ್ತದೆ. ಉದಾಹರಣೆಗೆ, 2018-19ರಲ್ಲಿ ಪೋಲಿಯೋ ನಿಮೂಲನೆ ಕಾರ್ಯಕ್ರಮಕ್ಕೆ ಅದು ಶೇ. 19.36 ರಷ್ಟು (ಅಂದರೆ ನೂರು ಕೋಟಿ ಡಾಲರ್) ಹಣ ಖರ್ಚು ಮಾಡಿದೆ. 8.77% ಮೊತ್ತವನ್ನು ಅಗತ್ಯ ಆರೋಗ್ಯ ಮತ್ತು ಪೌಷ್ಟಿಕತೆ ಸೇವೆಗಳ ಪೂರೈಕೆಗೆ, ಶೇ. 7 ನಿಧಿಯನ್ನು ವಿವಿಧ ರೋಗಗಳ ತಡೆಗೆ ಲಸಿಕೆ ಹಾಗೂ ಶೇ. 4.36ರಷ್ಟು ಹಣವನ್ನು ವ್ಯಾಧಿಗಳ ಔಟ್​ಬ್ರೇಕ್ ತಡೆ ಹಾಗೂ ನಿಯಂತ್ರಣಕ್ಕೆ ವೆಚ್ಚ ಮಾಡಿದೆ.

    ರೈತ ಮಹಿಳೆಗೆ ಅವಾಜ್ ಹಾಕಿದ ಸಚಿವ ಮಾಧುಸ್ವಾಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts