More

    ಆರೋಗ್ಯ ಸೇತು ಆ್ಯಪ್​ ಸೃಷ್ಟಿಸಿದ್ಯಾರು? ಸರ್ಕಾರದ ಉತ್ತರಕ್ಕೆ ರಾಷ್ಟ್ರೀಯ ಮಾಹಿತಿ ಕೇಂದ್ರ ಗರಂ!

    ನವದೆಹಲಿ: ಕರೊನಾ ವೈರಸ್​ ವಿರುದ್ಧ ಹೋರಾಟದ ಅಸ್ತ್ರವಾಗಿ ಕೇಂದ್ರ ಸರ್ಕಾರ ರೂಪಿಸಿರುವ ಆರೋಗ್ಯ ಸೇತು ಆ್ಯಪ್​ ಅನ್ನು ಲಕ್ಷಾಂತರ ಭಾರತೀಯರು ತಮ್ಮ ಮೊಬೈಲ್​ಗಳಲ್ಲಿ ಇನ್​ಸ್ಟಾಲ್​ ಮಾಡಿಕೊಂಡಿದ್ದಾರೆ.

    ಆರೋಗ್ಯ ಸೇತು ವೆಬ್​ಸೈಟ್​ ಪ್ರಕಾರ ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆ್ಯಪ್​ ಅಭಿವೃದ್ಧಿಪಡಿಸಿದೆ ಎಂಬ ಮಾಹಿತಿ ಇದೆ. ಆದರೆ, ಆ್ಯಪ್​ ಅಭಿವೃದ್ಧಿ ಪಡಿಸಿದವರು ಯಾರು ಎಂಬ ಆರ್​ಟಿಐ ಅರ್ಜಿಯಲ್ಲಿನ ಪ್ರಶ್ನೆಗೆ ಎರಡು ಇಲಾಖೆಯು ಈ ಬಗ್ಗೆ ನಮಗೆ ತಿಳಿದಿಲ್ಲ ಎಂದು ಉತ್ತರ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಆ್ಯಪ್​ ವಿಚಾರದಲ್ಲಿ ಕೇಂದ್ರ ಸರ್ಕಾರ ನುಣುಚಿಕೊಳ್ಳವ ಉತ್ತರ ನೀಡುತ್ತಿರುವುದನ್ನು ಮನಗಂಡ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್​ಐಸಿ) ಈ ನಿಟ್ಟಿನಲ್ಲಿ ನಿಖರ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್​ ಹೊರಡಿಸಿದೆ. ಮಾಹಿತಿ ನೀಡಲು ಅಧಿಕಾರಿಗಳ ನಿರಾಕರಣೆಯನ್ನು ಸ್ವೀಕರಿಸಲಾಗದು ಎಂದು ಎನ್​ಐಸಿ ನೋಟಿಸ್​ನಲ್ಲಿ ಹೇಳಿದೆ.

    ಆ್ಯಪ್​ ಅನ್ನು ಯಾರು ಸೃಷ್ಟಿಸಿದರು ಮತ್ತು ಇದಕ್ಕೆ ಸಂಬಂಧಿಸಿದ ಫೈಲ್​ಗಳು ಎಲ್ಲಿವೆ ಎಂಬ ಪ್ರಶ್ನೆಗೆ ಯಾವುದೇ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸಹ ವಿವರಣೆಯನ್ನು ನೀಡಿಲ್ಲ. ನಿಜಕ್ಕೂ ಇದು ವಿವೇಚನಾರಹಿತವಾದದ್ದು ಎಂದು ಅಸಮಾಧಾನ ಹೊರಹಾಕಿರುವ ಎನ್​ಐಸಿ ನವೆಂಬರ್​ 24ರಂದು ಸಂಬಂಧಪಟ್ಟ ಇಲಾಖೆಗಳು ಕಚೇರಿಗೆ ಹಾಜರಾಗಲು ಕೇಳಿದೆ.

    ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ಮೂಗೊಳಗೆ ಹಾಕುವ ಮಾಸ್ಕ್​!

    ಆರ್​ಟಿಐ ಕಾರ್ಯಕರ್ತ ಸೌರವ್​ ದಾಸ್ ಎನ್​ಐಸಿಗೆ ದೂರು ಸಲ್ಲಿಸಿ, ಆ್ಯಪ್​ ಕುರಿತಾದ ಪ್ರಶ್ನೆಗೆ ಅನೇಕ ಸಚಿವಾಲಯಗಳು ಉತ್ತರ ನೀಡಲು ವಿಫಲವಾಗಿವೆ ಎಂದು ಆರೋಪಿಸಿದ್ದಾರೆ. ಆ್ಯಪ್​ನ ಮೂಲ, ಅದರ ಅನುಮೋದನೆ ವಿವರಣೆ, ಅದರಲ್ಲಿ ಒಳಗೊಂಡಿರುವ ಕಂಪನಿಗಳು, ವೈಯಕ್ತಿಕ ಮತ್ತು ಸರ್ಕಾರದ ಇಲಾಖೆಗಳು ಮತ್ತು ಆ್ಯಪ್​ ಅಭಿವೃದ್ಧಿಯಲ್ಲಿ ಒಳಗೊಂಡಿರುವ ಖಾಸಗಿ ವ್ಯಕ್ತಿಗಳೊಂದಿನ ಸಂಭಾಷಣೆ ಕುರಿತಾದ ದಾಖಲೆಗಳನ್ನು ನೀಡುವಂತೆ ಸೌರವ್​ ದಾಸ್ ಆರ್​ಟಿಐ ಅರ್ಜಿ ಸಲ್ಲಿಸಿದ್ದರು.

    ಸುಮಾರು ಎರಡು ತಿಂಗಳವರೆಗೆ ಸೌರವ್​ ಅವರ ಅರ್ಜಿ ಅನೇಕ ಇಲಾಖೆಗಳಲ್ಲಿ ಸುತ್ತಾಡಿಕೊಂಡು ಬಂದಿರುವುದಾದರೂ ಯಾವೊಂದು ಇಲಾಖೆಯು ಸಹ ಸಮರ್ಪಕ ಉತ್ತರ ನೀಡಿಲ್ಲ. ಆ್ಯಪ್​ ಸೃಷ್ಟಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯುಳ್ಳ ಫೈಲ್​ ನಮ್ಮ ಬಳಿಯಿಲ್ಲ ಎಂದು ಎನ್​ಐಸಿ ಸಹ ತಿಳಿಸಿದೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಮಾಹಿತಿ ಸಚಿವಾಲಯ ಅರ್ಜಿಯನ್ನು ರಾಷ್ಟ್ರೀಯ ಇ ಆಡಳಿತ ವಿಭಾಗ ವರ್ಗಾಯಿಸಿದೆ.

    ಹೀಗಾಗಿ ಆರೋಗ್ಯ ಸೇತು ಆ್ಯಪ್​ ಕುರಿತು ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿದೆ. ಕೇಂದ್ರ ಸರ್ಕಾರಕ್ಕೆ ಮಾತ್ರವಲ್ಲದೆ, ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ರಾಷ್ಟ್ರೀಯ ಇ-ಆಡಳಿತಕ್ಕೂ ರಾಷ್ಟ್ರೀಯ ಮಾಹಿತಿ ಕೇಂದ್ರ ಶೋಕಾಸ್​ ನೋಟಿಸ್​ ನೀಡಿದೆ. (ಏಜೆನ್ಸೀಸ್​)

    ಭ್ರಷ್ಟಾಚಾರ ಆರೋಪ: ಮುಖ್ಯಮಂತ್ರಿ ರಾವತ್​ ವಿರುದ್ಧದ ಪ್ರಕರಣ ಸಿಬಿಐಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts