ಕಾಲುವೆಯ ನೀರಿನಲ್ಲಿ ಆಟವಾಡುವಾಗ ಆಯ ತಪ್ಪಿ ಬಿದ್ದು ಮೂವರ ದುರಂತ ಅಂತ್ಯ...

chikmangluru canal
Published on

ಚಿಕ್ಕಮಗಳೂರು: ಕಾಲುವೆಯ ನೀರಿನಲ್ಲಿ ಆಟವಾಡುವಾಗ ಆಯ ತಪ್ಪಿ ಬಿದ್ದು ಮೂವರು ಮುಳುಗಿ ಸಾವನ್ನಪ್ಪಿದ ಘಟನೆ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ಘಟನೆ ನಡೆದಿದೆ.

ರವಿ (31), ಅನನ್ಯ (17), ಶಾಮವೇಣಿ (16) ಮೃತ ದುರ್ದೈವಿಗಳು. ಈ ಮೂವರು ನೀರಿನಲ್ಲಿ ಆಟವಾಡುವಾಗ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

ರವಿ ಮೂಲತಃ ಲಕ್ಕವಳ್ಳಿ ನಿವಾಸಿ, ಅನನ್ಯ, ಶಾಮವೇಣಿ ರವಿಯ ಸಹೋದರಿಯರ ಮಕ್ಕಳು.ಅನನ್ಯ ಮೂಲತಃ ಶಿವಮೊಗ್ಗ, ಶಾಮವೇಣಿ ನಂಜನಗೂಡಿನವರು. ಸಂಬಂಧಿ ಮನೆ ಲಕ್ಕವಳ್ಳಿಗೆ ಬಂದಾಗ ಈ ಘಟನೆ ನಡೆದಿದೆ.

ರವಿ ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net